IND vs ENG: ಹಿಂದಕ್ಕೆ ಓಡಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಗಿಲ್..! ಹುಚ್ಚೆದ್ದು ಕುಣಿದ ಫ್ಯಾನ್ಸ್; ವಿಡಿಯೋ ನೋಡಿ

Shubman Gill's Stunning Catch: ಕಟಕ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರ ಅದ್ಭುತ ಡೈವಿಂಗ್ ಕ್ಯಾಚ್ ಎಲ್ಲರನ್ನೂ ಆಕರ್ಷಿಸಿತು. ನಾಗ್ಪುರದಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದಿದ್ದಂತಹ ಅದ್ಭುತ ಕ್ಯಾಚ್‌ನ್ನು ಇದು ನೆನಪಿಸಿತು. ಗಿಲ್ ಅವರ ಕ್ಯಾಚ್‌ನಿಂದ ಹ್ಯಾರಿ ಬ್ರೂಕ್ ಪೆವಿಲಿಯನ್​ ಸೇರಬೇಕಾಯಿತು.

IND vs ENG: ಹಿಂದಕ್ಕೆ ಓಡಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಗಿಲ್..! ಹುಚ್ಚೆದ್ದು ಕುಣಿದ ಫ್ಯಾನ್ಸ್; ವಿಡಿಯೋ ನೋಡಿ
Shubman Gill

Updated on: Feb 09, 2025 | 5:04 PM

ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್ ಹಿಡಿದಿದ್ದರೆ, ಇದೀಗ ಕಟಕ್​ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಬ್ಬ ಆರಂಭಿಕ ಶುಭ್​ಮನ್ ಗಿಲ್ ಕೂಡ ಅದೇ ರೀತಿಯ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಕಟಕ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್ ಈ ಅದ್ಭುತ ಕ್ಯಾಚ್ ಹಿಡಿದಿದ್ದು, ಟೀಂ ಇಂಡಿಯಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಫೆಬ್ರವರಿ 9, ಭಾನುವಾರ ಕಟಕ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮತ್ತೊಮ್ಮೆ ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಜೋಡಿ ತ್ವರಿತ ಆರಂಭ ನೀಡಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡಿತು. ಆದಾಗ್ಯೂ, ಈ ಸಮಯದಲ್ಲಿ, ಅಕ್ಷರ್ ಪಟೇಲ್ ಸುಲಭವಾದ ಕ್ಯಾಚ್ ಅನ್ನು ಕೈಬಿಡುವ ಮೂಲಕ ಸಾಲ್ಟ್‌ಗೆ ಜೀವದಾನ ನೀಡಿದರು. ಆದರೆ ವರುಣ್ ಚಕ್ರವರ್ತಿ ಅವರನ್ನು ಬೇಗನೆ ಪೆವಿಲಿಯನ್‌ಗೆ ಹಿಂದಿರುಗಿಸುವ ಮೂಲಕ ದೊಡ್ಡ ನಷ್ಟವನ್ನು ತಪ್ಪಿಸಿದರು.

ಹಿಂದಕ್ಕೆ ಓಡಿ ಡೈವ್ ಕ್ಯಾಚ್ ಹಿಡಿದ ಗಿಲ್

ಇಂಗ್ಲೆಂಡ್ 102 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡ ಬಳಿಕ ಟೀಂ ಇಂಡಿಯಾಗೆ ಚೇತರಿಸಿಕೊಳ್ಳುವ ಅವಕಾಶವಿತ್ತು. ಆದರೆ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇಬ್ಬರ ನಡುವೆ ಅರ್ಧಶತಕದ ಪಾಲುದಾರಿಕೆ ಇತ್ತು. ಈ ವೇಳೆ ಇನ್ನಿಂಗ್ಸ್‌ನ 30 ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಹ್ಯಾರಿ ಬ್ರೂಕ್ ಸಿಕ್ಸರ್ ಬಾರಿಸಲು ಪ್ರಯತ್ನಿಸಿದರು. ಆದರೆ ಮಿಡ್-ಆಫ್‌ನಿಂದ ಹಿಂದಕ್ಕೆ ಬಹಳ ದೂರ ಓಡಿದ ನಂತರ ಗಿಲ್ ಅದ್ಭುತ ಡೈವಿಂಗ್ ಕ್ಯಾಚ್ ಪಡೆದರು.

ಜೈಸ್ವಾಲ್ ಕ್ಯಾಚ್ ನೆನಪಿಸಿದ ಗಿಲ್

ಗಿಲ್ ಅವರ ಈ ಅದ್ಭುತ ಕ್ಯಾಚ್ ಮೊದಲ ಏಕದಿನ ಪಂದ್ಯದಲ್ಲಿ ಹಿಮ್ಮುಖವಾಗಿ ಓಡಿ ಇದೇ ರೀತಿ ಅದ್ಭುತ ಕ್ಯಾಚ್ ಹಿಡಿದ ಯಶಸ್ವಿ ಜೈಸ್ವಾಲ್ ಅವರನ್ನು ನೆನಪಿಸಿತು. ಗಿಲ್ ಅವರ ಈ ಕ್ಯಾಚ್‌ನಿಂದಾಗಿ, ಬ್ರೂಕ್ ದೊಡ್ಡ ಇನ್ನಿಂಗ್ಸ್ ಆಡುವ ಮೊದಲೇ 31 ರನ್ ಗಳಿಸಿ ಔಟಾದರು. ಈ ಕ್ಯಾಚ್ ನಂತರವೂ ಗಿಲ್ ಮತ್ತೊಂದು ಅದ್ಭುತ ಕ್ಯಾಚ್ ಹಿಡಿದರು. ಈ ಬಾರಿ ಗಿಲ್ ಫೀಲ್ಡಿಂಗ್​ಗೆ ಬಲಿಯಾಗಿದ್ದು, ಇಂಗ್ಲೆಂಡ್‌ ತಂಡದ ನಾಯಕ ಜೋಸ್ ಬಟ್ಲರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Sun, 9 February 25