IND vs ENG 2nd ODI Highlights: ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ
India vs England 2nd ODI Highlights in Kannada: ಕಟಕ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಜಯಗಳಿಸಿದೆ. ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸತತ 7 ಸರಣಿಗಳನ್ನು ಗೆದ್ದ ದಾಖಲೆ ಬರೆದಿದೆ.

2025 ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಸರಣಿಯಲ್ಲಿ ಭಾರತ ತಂಡ ಅದ್ಭುತ ಗೆಲುವು ಸಾಧಿಸಿದೆ. ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ನಂತರ, ಕಟಕ್‌ನಲ್ಲಿಯೂ ಟೀಮ್ ಇಂಡಿಯಾ ಸುಲಭವಾಗಿ ಜಯದ ನಗೆ ಬೀರಿದೆ. ಫೆಬ್ರವರಿ 9, ಭಾನುವಾರ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ, ಟೀಂ ಇಂಡಿಯಾ 305 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಿ ಪಂದ್ಯ ಮತ್ತು ಸರಣಿಯನ್ನು 4 ವಿಕೆಟ್‌ಗಳಿಂದ ಗೆದ್ದಿತು. ಟೀಮ್ ಇಂಡಿಯಾದ ಗೆಲುವಿಗಿಂತ ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಫಾರ್ಮ್ಗೆ ಮರಳಿದ್ದು ವಿಶೇಷವಾಗಿತ್ತು. ಸುಮಾರು ಒಂದು ವರ್ಷದ ನಂತರ ಅದ್ಭುತ ಶತಕದ ಇನ್ನಿಂಗ್ಸ್ ಆಡುವ ಮೂಲಕ ರೋಹಿತ್ ಚಾಂಪಿಯನ್ಸ್ ಟ್ರೋಫಿಗೆ ಶುಭ ಸೂಚನೆ ನೀಡಿದ್ದಾರೆ.
LIVE NEWS & UPDATES
-
IND vs ENG 2nd ODI: ಏಕದಿನ ಸರಣಿ ಗೆದ್ದ ಭಾರತ
ಕಟಕ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಜಯಗಳಿಸಿದೆ. ಇದರೊಂದಿಗೆ ಭಾರತ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ.
-
IND vs ENG 2nd ODI: ಭಾರತ ಗೆಲುವಿನ ಸನಿಹದಲ್ಲಿ
ಟೀಮ್ ಇಂಡಿಯಾ 43.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 300 ರನ್‌ಗಳನ್ನು ಪೂರ್ಣಗೊಳಿಸಿದೆ. ಈಗ ಪಂದ್ಯ ಗೆಲ್ಲಲು ಕೇವಲ 5 ರನ್‌ಗಳು ಬೇಕಾಗಿವೆ.
-
-
IND vs ENG 2nd ODI: 5ನೇ ವಿಕೆಟ್
ಟೀಮ್ ಇಂಡಿಯಾ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ. ಕಟಕ್ ಏಕದಿನ ಪಂದ್ಯದಲ್ಲೂ ಕೆಎಲ್ ರಾಹುಲ್ ವಿಫಲರಾಗಿದ್ದಾರೆ. ಅವರು 14 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು.
-
IND vs ENG 2nd ODI: ಭಾರತದ ಸ್ಕೋರ್- 275/4
40 ಓವರ್‌ಗಳ ಆಟ ಮುಗಿದಿದೆ. ಭಾರತ 4 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿದೆ. ಈಗ ಗೆಲುವಿಗೆ 30 ರನ್‌ಗಳು ಬೇಕಾಗಿದೆ.
-
IND vs ENG 2nd ODI: ನಾಲ್ಕನೇ ವಿಕೆಟ್
ಭಾರತ ನಾಲ್ಕನೇ ಹಿನ್ನಡೆ ಅನುಭವಿಸಿದೆ. ಶ್ರೇಯಸ್ ಅಯ್ಯರ್ ರನ್ ಔಟ್ ಆಗಿದ್ದಾರೆ.ಈ ಮೂಲಕ ಶ್ರೇಯಸ್ 2ನೇ ಅರ್ಧಶತಕ ಬಾರಿಸುವುದನ್ನ ಕೇವಲ 3 ರನ್ಗಳಿಂದ ಕಳೆದುಕೊಂಡಿದ್ದಾರೆ.
-
-
IND vs ENG 2nd ODI: ಭಾರತದ ಸ್ಕೋರ್- 248/3
35 ಓವರ್‌ಗಳ ಆಟ ಮುಗಿದಿದೆ. ಭಾರತ 3 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. ಈಗ ಗೆಲ್ಲಲು ಕೇವಲ 57 ರನ್‌ಗಳು ಮಾತ್ರ ಬೇಕಾಗಿದೆ.
-
IND vs ENG 2nd ODI: ರೋಹಿತ್ ಶರ್ಮಾ ಔಟ್
ರೋಹಿತ್ ಶರ್ಮಾ ಭರ್ಜರಿ ಶತಕ ಬಾರಿಸಿ ಔಟಾದರು. ಅವರು 90 ಎಸೆತಗಳಲ್ಲಿ 119 ರನ್ ಗಳಿಸುವ ಮೂಲಕ ಭರ್ಜರಿ ಇನ್ನಿಂಗ್ಸ್ ಆಡಿದರು. ಈ ಸಮಯದಲ್ಲಿ ಅವರು 7 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳನ್ನು ಬಾರಿಸಿದರು.
-
IND vs ENG 2nd ODI: ರೋಹಿತ್ ಶರ್ಮಾ ಶತಕ
ಕಟಕ್‌ನಲ್ಲಿ ರೋಹಿತ್ ಶರ್ಮಾ ಬಿರುಗಾಳಿಯ ಶತಕ ಗಳಿಸಿದ್ದಾರೆ. 76 ಎಸೆತಗಳನ್ನು ಎದುರಿಸಿದ ರೋಹಿತ್ 7 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಬಾರಿಸಿದ್ದಾರೆ.
-
IND vs ENG 2nd ODI: ವಿರಾಟ್ ಕೊಹ್ಲಿ ಔಟ್
ವಿರಾಟ್ ಕೊಹ್ಲಿ ರೂಪದಲ್ಲಿ ಭಾರತ ತಂಡಕ್ಕೆ ಎರಡನೇ ಹೊಡೆತ ಬಿದ್ದಿತು. ಆಫ್ ಸ್ಟಂಪ್ ಹೊರಗೆ ಹೋಗುತ್ತಿದ್ದ ಚೆಂಡು ಕೊಹ್ಲಿಯ ಬ್ಯಾಟ್ ತಾಗಿ ವಿಕೆಟ್ ಕೀಪರ್ ಫಿಲ್ ಸಾಲ್ಟ್ ಕೈಸೇರಿತು. 20 ಓವರ್‌ಗಳ ನಂತರ ಭಾರತದ ಸ್ಕೋರ್ 151/2.
-
IND vs ENG 2nd ODI: 150 ರನ್ ಪೂರ್ಣ
ಟೀಮ್ ಇಂಡಿಯಾ 1 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ. ಈಗ ಗೆಲುವಿಗೆ 155 ರನ್‌ಗಳ ಅವಶ್ಯಕತೆಯಿದೆ.
-
IND vs ENG 2nd ODI: ಗಿಲ್ 60 ರನ್ ಗಳಿಸಿ ಔಟ್
ಜೇಮೀ ಓವರ್ಟನ್ ಭಾರತಕ್ಕೆ ಮೊದಲ ಹೊಡೆತ ನೀಡಿದರು. ಅವರು ಶುಭಮನ್ ಗಿಲ್ ಅವರನ್ನು ಬೌಲ್ಡ್ ಮಾಡಿದರು. 52 ಎಸೆತಗಳಲ್ಲಿ 60 ರನ್ ಗಳಿಸಿದ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಗಿಲ್ ಪೆವಿಲಿಯನ್‌ಗೆ ಮರಳಿದರು. ಗಿಲ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಇದಲ್ಲದೆ ಮೊದಲ ವಿಕೆಟ್‌ಗೆ ಗಿಲ್ ಮತ್ತು ರೋಹಿತ್ 136 ರನ್‌ಗಳ ಜೊತೆಯಾಟವಾಡಿದರು. ಈಗ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದಾರೆ.
-
IND vs ENG 2nd ODI: ಗಿಲ್ ಅರ್ಧಶತಕ
ರೋಹಿತ್ ಶರ್ಮಾ ನಂತರ, ಶುಭಮನ್ ಗಿಲ್ ಕೂಡ ಅರ್ಧಶತಕ ಬಾರಿಸಿದ್ದು, ಈ ಸರಣಿಯಲ್ಲಿ ಗಿಲ್ಗೆ ಇದು ಸತತ ಎರಡನೇ ಅರ್ಧಶತಕವಾಗಿದೆ.
-
IND vs ENG 2nd ODI: ರೋಹಿತ್ 30 ಎಸೆತಗಳಲ್ಲಿ ಅರ್ಧಶತಕ
ಕಟಕ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇದುವರೆಗೆ ರೋಹಿತ್ 4 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
-
IND vs ENG 2nd ODI: ಆಟ ಪುನರಾರಂಭ
ಸುಮಾರು ಅರ್ಧ ಗಂಟೆಯ ನಂತರ ಆಟ ಮತ್ತೆ ಆರಂಭವಾಯಿತು. ರೋಹಿತ್ ಶರ್ಮಾ ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. ಭಾರತ 8 ಓವರ್‌ಗಳಲ್ಲಿ 64 ರನ್ ಗಳಿಸಿದೆ. ಅದೇ ಸಮಯದಲ್ಲಿ, ರೋಹಿತ್ 27 ಎಸೆತಗಳಲ್ಲಿ 43 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
IND vs ENG 2nd ODI: ಆಟ ಸ್ಥಗಿತ
ಕಟಕ್‌ನ ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್‌ಗಳು ಆಫ್ ಆಗಿರುವ ಕಾರಣ ಆಟವನ್ನು ನಿಲ್ಲಿಸಲಾಗಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸೇರಿದಂತೆ ಇಂಗ್ಲೆಂಡ್ ಆಟಗಾರರು ಮೈದಾನ ತೊರೆದಿದ್ದಾರೆ.
-
IND vs ENG 2nd ODI: ಗೇಲ್ ದಾಖಲೆ ಮುರಿದ ರೋಹಿತ್
ರೋಹಿತ್ ಶರ್ಮಾ ಕ್ರಿಸ್ ಗೇಲ್ ಅವರ ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಗೇಲ್ ಏಕದಿನ ಪಂದ್ಯಗಳಲ್ಲಿ 331 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರೋಹಿತ್ ಈ ಪಂದ್ಯದಲ್ಲಿ 3 ಸಿಕ್ಸರ್‌ಗಳೊಂದಿಗೆ ಇದುವರೆಗೆ 334 ಸಿಕ್ಸರ್‌ಗಳ ಗಡಿ ಮುಟ್ಟಿದ್ದಾರೆ.
-
IND vs ENG 2nd ODI: ರೋಹಿತ್ ಸಿಕ್ಸ್
ರೋಹಿತ್ ಶರ್ಮಾ ಇನ್ನಿಂಗ್ಸ್‌ನ ಮೊದಲ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಗಸ್ ಅಟ್ಕಿನ್ಸನ್ ಅವರ ಎಸೆತವನ್ನು ರೋಹಿತ್ ಮಿಡ್-ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.
-
IND vs ENG 2nd ODI: 305 ರನ್‌ಗಳ ಗುರಿ
ಕಟಕ್‌ನಲ್ಲಿ ಇಂಗ್ಲೆಂಡ್ ತಂಡ 49.5 ಓವರ್‌ಗಳಲ್ಲಿ 304 ರನ್‌ಗಳಿಗೆ ಆಲೌಟ್ ಆಯಿತು. ಇದರರ್ಥ ಭಾರತ ಈ ಪಂದ್ಯವನ್ನು ಗೆಲ್ಲಲು 50 ಓವರ್‌ಗಳಲ್ಲಿ 305 ರನ್ ಗಳಿಸಬೇಕಾಗುತ್ತದೆ. ಕೊನೆಯ ಓವರ್‌ನ ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಸತತ ಎರಡು ರನ್ ಔಟ್‌ಗಳೊಂದಿಗೆ, ಇಂಗ್ಲೆಂಡ್ ತನ್ನ ಎಲ್ಲಾ 10 ವಿಕೆಟ್‌ಗಳನ್ನು ಕಳೆದುಕೊಂಡಿತು.
-
IND vs ENG 2nd ODI: 300 ರನ್ ದಾಟಿದ ಇಂಗ್ಲೆಂಡ್
ಇಂಗ್ಲೆಂಡ್ ತಂಡ 300 ರನ್‌ಗಳ ಗಡಿ ದಾಟಿದೆ. ಲಿಯಾಮ್ ಲಿವಿಂಗ್‌ಸ್ಟೋನ್ 50 ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡದ ಸ್ಕೋರ್ ಅನ್ನು 301 ರನ್‌ಗಳಿಗೆ ಕೊಂಡೊಯ್ದರು.
-
IND vs ENG 2nd ODI: 7ನೇ ವಿಕೆಟ್
ಇಂಗ್ಲೆಂಡ್ ತಂಡ ತನ್ನ 7ನೇ ವಿಕೆಟ್ ಕಳೆದುಕೊಂಡಿದೆ. ಗಸ್ ಅಟ್ಕಿನ್ಸನ್ 3 ರನ್ ಗಳಿಸಿ ಮೊಹಮ್ಮದ್ ಶಮಿಗೆ ಬಲಿಯಾದರು.
-
IND vs ENG 2nd ODI: ಆರನೇ ವಿಕೆಟ್
ಇಂಗ್ಲೆಂಡ್ ಆರನೇ ವಿಕೆಟ್ ಕಳೆದುಕೊಂಡಿದೆ. ಜೇಮೀ ಓವರ್ಟನ್ 6 ರನ್ ಗಳಿಸಿ ಔಟಾದರು. ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ 35 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.
-
IND vs ENG 2nd ODI: ರೂಟ್ ಔಟ್
ರವೀಂದ್ರ ಜಡೇಜಾ ಜೋ ರೂಟ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಐದನೇ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಅರ್ಧಶತಕ ಬಾರಿಸಿದ ರೂಟ್ 72 ಎಸೆತಗಳಲ್ಲಿ 69 ರನ್ ಗಳಿಸಿ ಔಟಾದರು. ರೂಟ್ ತಮ್ಮ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿಗಳನ್ನು ಬಾರಿಸಿದರು.
-
IND vs ENG 2nd ODI: 42 ಓವರ್‌ಗಳ ನಂತರ ಇಂಗ್ಲೆಂಡ್ ಸ್ಕೋರ್- 247/4
42 ಓವರ್‌ಗಳ ಆಟ ಮುಗಿದಿದೆ. ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿದೆ.
-
IND vs ENG 2nd ODI: ಬಟ್ಲರ್ ಔಟ್
ಭಾರತ ತಂಡವು 39 ನೇ ಓವರ್‌ನಲ್ಲಿ ಬಿಗ್ ವಿಕೆಟ್ ಪಡೆಯಿತು. ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ನಾಯಕ ಜೋಸ್ ಬಟ್ಲರ್ ಔಟಾದರು. ಶುಭಮನ್ ಗಿಲ್ ಮುಂದಕ್ಕೆ ಡೈವ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಪಡೆದರು. ಬಟ್ಲರ್ 34 ರನ್‌ಗಳ ಇನ್ನಿಂಗ್ಸ್ ಆಡಿದರು.
-
IND vs ENG 2nd ODI: ರೂಟ್ ಅರ್ಧಶತಕ
ಕಟಕ್ ಏಕದಿನ ಪಂದ್ಯದಲ್ಲಿ ಜೋ ರೂಟ್ 60 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಇದರ ಜತೆಗೆ ಜೋಸ್ ಬಟ್ಲರ್ ಜೊತೆ ಅರ್ಧಶತಕದ ಪಾಲುದಾರಿಕೆಯನ್ನು ಮಾಡಿದ್ದಾರೆ.
-
IND vs ENG 2nd ODI: 200 ರನ್ ಪೂರ್ಣ
ಇಂಗ್ಲೆಂಡ್ ತಂಡ 200 ರನ್‌ಗಳ ಗಡಿ ದಾಟಿದೆ. ಜೋ ರೂಟ್ ಮತ್ತು ಜೋಸ್ ಬಟ್ಲರ್ ನಡುವೆ 38 ಎಸೆತಗಳಲ್ಲಿ 36 ರನ್‌ಗಳ ಪಾಲುದಾರಿಕೆ ಇದೆ. ಇಂಗ್ಲೆಂಡ್ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ರೂಟ್ 47 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ, ಬಟ್ಲರ್ 25 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
IND vs ENG 2nd ODI: 32 ಓವರ್ ಪೂರ್ಣ
32 ಓವರ್‌ಗಳ ಆಟ ಮುಗಿದಿದೆ. ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ.
-
IND vs ENG 2nd ODI: ಇಂಗ್ಲೆಂಡ್‌ಗೆ ಮೂರನೇ ಹೊಡೆತ
ಇಂಗ್ಲೆಂಡ್ ತಂಡ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ. ಹ್ಯಾರಿ ಬ್ರೂಕ್ 52 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು.
-
IND vs ENG 2nd ODI: ಅರ್ಧ ಶತಕದ ಜೊತೆಯಾಟ
ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ನಡುವೆ ಅರ್ಧ ಶತಕದ ಪಾಲುದಾರಿಕೆ ಇದೆ. ಅವರು ಒಟ್ಟಾಗಿ 71 ಎಸೆತಗಳಲ್ಲಿ 52 ರನ್ ಗಳಿಸಿದ್ದಾರೆ.
-
IND vs ENG 2nd ODI: 20 ಓವರ್ ಪೂರ್ಣ
ಇಂಗ್ಲೆಂಡ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ತಲಾ 11 ರನ್ ಗಳಿಸಿ ಆಡುತ್ತಿದ್ದಾರೆ.
-
IND vs ENG 2nd ODI: ಡಕೆಟ್ ಔಟ್
ಟೀಮ್ ಇಂಡಿಯಾ 102 ರನ್‌ಗಳಿಗೆ ಇಂಗ್ಲೆಂಡ್‌ಗೆ ಎರಡನೇ ಹೊಡೆತ ನೀಡಿದೆ. 65 ರನ್‌ಗಳ ಇನ್ನಿಂಗ್ಸ್ ಆಡಿದ ನಂತರ ಬೆನ್ ಡಕೆಟ್ ರವೀಂದ್ರ ಜಡೇಜಾಗೆ ಬಲಿಯಾದರು.
-
IND vs ENG 2nd ODI: 15 ಓವರ್ ಪೂರ್ಣ
ಇಂಗ್ಲೆಂಡ್ ಇನ್ನಿಂಗ್ಸ್‌ನ 15 ಓವರ್‌ಗಳು ಮುಗಿದಿವೆ. ಈ ವೇಳೆಗೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ಬೆನ್ ಡಕೆಟ್ 63 ರನ್ ಮತ್ತು ಜೋ ರೂಟ್ 5 ರನ್ ಗಳಿಸಿದ್ದಾರೆ.
-
IND vs ENG 2nd ODI: ಫಿಲ್ ಸಾಲ್ಟ್ ಔಟ್
ವರುಣ್ ಚಕ್ರವರ್ತಿ ಅಂತಿಮವಾಗಿ ಭಾರತಕ್ಕೆ ಮೊದಲ ಬ್ರೇಕ್‌ಥ್ರೂ ನೀಡಿದರು. ಬೆನ್ ಡಕೆಟ್ ಜೊತೆ ಉತ್ತಮ ಜೊತೆಯಾಟ ಹಂಚಿಕೊಳ್ಳುತ್ತಿದ್ದ ಆರಂಭಿಕ ಫಿಲ್ ಸಾಲ್ಟ್ ಅವರನ್ನು ವರುಣ್ ಔಟ್ ಮಾಡಿದರು. 29 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದ ನಂತರ ಸಾಲ್ಟ್ ಔಟಾದರು. ಇದರೊಂದಿಗೆ ಸಾಲ್ಟ್ ಮತ್ತು ಡಕೇತ್ ನಡುವಿನ ಮೊದಲ ವಿಕೆಟ್‌ಗೆ 81 ರನ್‌ಗಳ ಪಾಲುದಾರಿಕೆ ಕೊನೆಗೊಂಡಿತು.
-
IND vs ENG 2nd ODI: ಬೆನ್ ಡಕೆಟ್ ಅರ್ಧಶತಕ
ಬೆನ್ ಡಕೆಟ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 6 ನೇ ಅರ್ಧಶತಕವಾಗಿದೆ. ಈ ಪಂದ್ಯದಲ್ಲಿ ಬೆನ್ ಡಕೆಟ್ ಇಂಗ್ಲೆಂಡ್‌ಗೆ ಉತ್ತಮ ಆರಂಭ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
-
IND vs ENG 2nd ODI: ಇಂಗ್ಲೆಂಡ್ 50 ರನ್
ಇಂಗ್ಲೆಂಡ್ ತಂಡ ಕೇವಲ 6.5 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿದೆ. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
-
IND vs ENG 2nd ODI: 6 ಓವರ್ ಪೂರ್ಣ
ಮೊದಲ 6 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 44 ರನ್ ಗಳಿಸಿದೆ. ಬೆನ್ ಡಕೆಟ್ 27 ರನ್ ಗಳಿಸಿ ಆಡುತ್ತಿದ್ದಾರೆ ಮತ್ತು ಫಿಲ್ ಸಾಲ್ಟ್ 6 ರನ್ ಗಳಿಸಿ ಆಡುತ್ತಿದ್ದಾರೆ.
-
IND vs ENG 2nd ODI: ಉತ್ತಮ ಆರಂಭ
ಇಂಗ್ಲೆಂಡ್ ತಂಡದ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಮೊದಲ 4 ಓವರ್‌ಗಳ ನಂತರ ಇಂಗ್ಲೆಂಡ್ 28 ರನ್‌ಗಳನ್ನು ಗಳಿಸಿದೆ.
-
IND vs ENG 2nd ODI: ಇಂಗ್ಲೆಂಡ್ ಇನ್ನಿಂಗ್ಸ್ ಆರಂಭ
ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತ ವೇಗದ ಬೌಲರ್ ಮೊಹಮ್ಮದ್ ಶಮಿ ಬೌಲಿಂಗ್ ಆರಂಭಿಸಿದ್ದಾರೆ.
-
IND vs ENG 2nd ODI: ಇಂಗ್ಲೆಂಡ್ ತಂಡ
ಫಿಲ್ ಸಾಲ್ಟ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಮಾರ್ಕ್ ವುಡ್, ಸಾಕಿಬ್ ಮಹಮೂದ್.
-
IND vs ENG 2nd ODI: ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
-
IND vs ENG 2nd ODI: ಭಾರತ ತಂಡದಲ್ಲಿ 2 ಬದಲಾವಣೆ
ಟೀಂ ಇಂಡಿಯಾದಲ್ಲಿ 2 ಬದಲಾವಣೆ ಮಾಡಲಾಗಿದೆ. ಜೈಸ್ವಾಲ್ ಹಾಗೂ ಕುಲ್ದೀಪ್ ತಂಡದಿಂದ ಹೊರಬಿದ್ದಿದ್ದು, ಕೊಹ್ಲಿ ಹಾಗೂ ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
-
IND vs ENG 2nd ODI: ಟಾಸ್ ಗೆದ್ದ ಇಂಗ್ಲೆಂಡ್
ಸತತ ಎರಡನೇ ಏಕದಿನ ಪಂದ್ಯದಲ್ಲೂ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
-
IND vs ENG 2nd ODI: ಕಟಕ್‌ನಲ್ಲಿ ಪಂದ್ಯ
ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ನಾಗ್ಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ 4 ವಿಕೆಟ್‌ಗಳಿಂದ ಗೆದ್ದಿತ್ತು. ಈಗ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಗೆಲ್ಲುವ ಗುರಿ ರೋಹಿತ್ ಪಡೆಗಿದೆ.
Published On - Feb 09,2025 12:50 PM