ಭಾರತ ಟೆಸ್ಟ್ ತಂಡದ ಜೊತೆಗೆ ಮತ್ತೊಂದು ತಂಡಕ್ಕೂ ಶುಭ್​ಮನ್ ಗಿಲ್ ನಾಯಕ

Shubman Gill Leads North Zone in Duleep Trophy: ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕತ್ವ ವಹಿಸಿದ್ದ ಶುಭ್ಮನ್ ಗಿಲ್ ಅವರು 2025ರ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಆಗಸ್ಟ್ 28 ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ಈ ಟೂರ್ನಮೆಂಟ್‌ನಲ್ಲಿ ಗಿಲ್ ಅವರ ನೇತೃತ್ವದಲ್ಲಿ ಉತ್ತರ ವಲಯ ತಂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಭಾರತ ಟೆಸ್ಟ್ ತಂಡದ ಜೊತೆಗೆ ಮತ್ತೊಂದು ತಂಡಕ್ಕೂ ಶುಭ್​ಮನ್ ಗಿಲ್ ನಾಯಕ
Shubman Gill

Updated on: Aug 07, 2025 | 5:21 PM

ಭಾರತ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡು ಇಂಗ್ಲೆಂಡ್‌ ಪ್ರವಾಸ ಮಾಡಿದ್ದ ಶುಭ್​ಮನ್​ ಗಿಲ್​ಗೆ (Shubman Gill) ಆಂಗ್ಲರ ನಾಡು ಸಿಹಿ- ಕಹಿ ಅನುಭವಗಳನ್ನು ನೀಡಿದೆ. ನಾಯಕನಾಗಿ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಗಿಲ್, ಆಟಗಾರನಾಗಿ ಮಾತ್ರ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಸರಣಿಯನ್ನು 2-2 ರಿಂದ ಸಮಬಲಗೊಳಿಸಿ ಭಾರತಕ್ಕೆ ವಾಪಸ್ಸಾಗಿರುವ ಶುಭ್​ಮನ್ ಗಿಲ್​ಗೆ ಇದೀಗ ಭಾರತದಲ್ಲಿ ದೇಶೀ ತಂಡದ ನಾಯತ್ವ ನೀಡಲಾಗಿದೆ. ಇಷ್ಟರಲ್ಲೇ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು (North Zone in Duleep Trophy) ಶುಭ್​ಮನ್ ಗಿಲ್ ಮುನ್ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಪಂದ್ಯಾವಳಿ

ಮೇಲೆ ಹೇಳಿದಂತೆ ಶುಭ್​ಮನ್ ಗಿಲ್ ಇದೀಗ 2025 ರ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಆಗಸ್ಟ್ 28 ರಿಂದ ಬೆಂಗಳೂರಿನಲ್ಲಿ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಗಿಲ್ ಅವರನ್ನು ಉತ್ತರ ವಲಯ ತಂಡದ ನಾಯಕರನ್ನಾಗಿ ಘೋಷಿಸಲಾಗಿದೆ. ಕಳೆದ ಬಾರಿಯೂ ಸಹ ಗಿಲ್ ದುಲೀಪ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.

25 ವರ್ಷದ ಗಿಲ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಭಾರತೀಯ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡು ಅಮೋಘ ಪ್ರದರ್ಶನ ನೀಡಿದ್ದರು. ಈ ಸರಣಿಯಲ್ಲಿ ಗಿಲ್ ಆಡಿದ ಐದು ಟೆಸ್ಟ್ ಪಂದ್ಯಗಳಲ್ಲಿ 754 ರನ್ ಗಳಿಸಿದರು, ಇದರಲ್ಲಿ ನಾಲ್ಕು ಶತಕಗಳು ಸೇರಿದ್ದವು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತೀಯ ನಾಯಕನೊಬ್ಬ ಗಳಿಸಿದ ಅತಿ ಹೆಚ್ಚು ರನ್​ಗಳ ದಾಖಲೆಯ ಪಟ್ಟಿಯಲ್ಲಿ ಶುಭ್​ಮನ್ ಗಿಲ್, ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿದರು.

ಉತ್ತರ ವಲಯ ತಂಡ

ಶುಭ್​ಮನ್ ಗಿಲ್ (ನಾಯಕ), ಶುಭಂ ಖಜುರಿಯಾ, ಅಂಕಿತ್ ಕುಮಾರ್ (ಉಪನಾಯಕ), ಆಯುಷ್ ಬದೋನಿ, ಯಶ್ ಧುಲ್, ಅಂಕಿತ್ ಕಲ್ಸಿ, ನಿಶಾಂತ್ ಸಿಂಧು, ಸಾಹಿಲ್ ಲೋತ್ರಾ, ಮಯಾಂಕ್ ದಾಗರ್, ಯುಧ್‌ವೀರ್ ಸಿಂಗ್ ಚರಕ್, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಶುಲ್ ಕಾಂಬೋಜ್, ಔಕಿಬ್ ನಬಿ, ಕನ್ಹಯ್ಯಾ ವಾಧವಾನ್.

ಸ್ಟ್ಯಾಂಡ್‌ಬೈ: ಶುಭಂ ಅರೋರಾ (ವಿಕೆಟ್‌ಕೀಪರ್), ಜಸ್ಕರನ್‌ವೀರ್ ಸಿಂಗ್ ಪಾಲ್, ರವಿ ಚೌಹಾಣ್, ಅಬಿದ್ ಮುಷ್ತಾಕ್, ನಿಶಾಂಕ್ ಬಿರ್ಲಾ, ಉಮರ್ ನಜೀರ್, ದಿವೇಶ್ ಶರ್ಮಾ.

Published On - 5:19 pm, Thu, 7 August 25