AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ ಟು ಲಾಹೋರ್: 10 ನಿಮಿಷ ಮುಂಚೆ ಬಂದು ಫೈನಲ್ ಪಂದ್ಯ ಗೆಲ್ಲಿಸಿದ..!

PSL 2025: ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್ 10 ಗೆ ತೆರೆ ಬಿದ್ದಿದೆ. ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಶಾಹೀನ್ ಅಫ್ರಿದಿ ನಾಯಕತ್ವದ ಲಾಹೋರ್ ಖಲಂದರ್ಸ್​ ತಂಡ. ಫೈನಲ್​ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ಝಿಂಬಾಬ್ವೆಯ ಆಲ್​ರೌಂಡರ್ ಆಟಗಾರ ಸಿಕಂದರ್ ರಾಝ.

ಇಂಗ್ಲೆಂಡ್​ ಟು ಲಾಹೋರ್: 10 ನಿಮಿಷ ಮುಂಚೆ ಬಂದು ಫೈನಲ್ ಪಂದ್ಯ ಗೆಲ್ಲಿಸಿದ..!
Sikandar Raza
ಝಾಹಿರ್ ಯೂಸುಫ್
|

Updated on: May 26, 2025 | 10:26 AM

Share

ಪಾಕಿಸ್ತಾನ್ ಸೂಪರ್ ಲೀಗ್ (PSL 2025)​ ಫೈನಲ್ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಕ್ಕೆ ಸೋಲುಣಿಸಿ ಲಾಹೋರ್ ಖಲಂದರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನ ರೂವಾರಿ ಸಿಕಂದರ್ ರಾಝ. ಕುತೂಹಲಕಾರಿ ವಿಷಯ ಎಂದರೆ ರಾಝ ಫೈನಲ್ ಪಂದ್ಯಕ್ಕೆ ಆಗಮಿಸಿದ್ದು 10 ನಿಮಿಷಗಳು ಬಾಕಿಯಿರುವಾಗ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ಪರ ಕಣಕ್ಕಿಳಿದಿದ್ದ ರಾಝ, ಪಂದ್ಯ ಮುಕ್ತಾಯದ ಬೆನ್ನಲ್ಲೇ ಲಾಹೋರ್​ಗೆ ವಿಮಾನ ಹತ್ತಿದ್ದರು. ಅದು ಕೂಡ ಪಿಎಸ್​ಎಲ್​ನ ಫೈನಲ್ ಪಂದ್ಯವಾಡಲು. ಅದಾಗಲೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದ ರಾಝ ಪಂದ್ಯ ಶುರುವಾಗಲು 15 ನಿಮಿಷಗಳಿದ್ದಾಗಲೂ ಮೈದಾನಕ್ಕೆ ತಲುಪಿರಲಿಲ್ಲ.

ಇನ್ನೇನು ನಾಯಕರುಗಳು ಟಾಸ್ ಪ್ರಕ್ರಿಯೆಗೆ ತೆರಳಲಿದ್ದಾರೆ ಅನ್ನುವಷ್ಟರಲ್ಲಿ ಸಿಕಂದರ್ ರಾಝ ಗದ್ದಾಫಿ ಸ್ಟೇಡಿಯಂ ತಲುಪಿದ್ದಾರೆ. ಅದರಂತೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದ ರಾಝ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ಈಗ ಇತಿಹಾಸ.

ಫೈನಲ್ ಫೈಟ್:

ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಗ್ಲಾಡಿಯೇಟರ್ಸ್ ಪರ ಹಸನ್ ನವಾಝ್ 43 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 76 ರನ್ ಬಾರಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಅವಿಷ್ಕ ಫರ್ನಾಂಡೊ 29 ರನ್ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಫಹೀಮ್ ಅಶ್ರಫ್ 28 ರನ್ ಚಚ್ಚಿದರು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 20 ಓವರ್​ಗಳಲ್ಲಿ 201 ರನ್​ ಕಲೆಹಾಕಿತು.

ರಾಕಿಂಗ್ ರಾಝ:

ಈ ಕಠಿಣ ಗುರಿ ಬೆನ್ನತ್ತಿದ ಲಾಹೋರ್ ಖಲಂದರ್ಸ್ ತಂಡಕ್ಕೆ ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ (46) ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಬಂದ ಅಬ್ದುಲ್ಲಾ ಶಫೀಕ್ 41 ರನ್ ಬಾರಿಸಿದರು. ಇನ್ನು ಸ್ಪೋಟಕ ಇನಿಂಗ್ಸ್ ಆಡಿದ ಕುಸಾಲ್ ಪೆರೇರಾ 31 ಎಸೆತಗಳಲ್ಲಿ 62 ರನ್ ಚಚ್ಚಿದರು.

ಇದಾಗ್ಯೂ ಕೊನೆಯ ಎರಡು ಓವರ್​ಗಳಲ್ಲಿ ಲಾಹೋರ್ ಖಲಂದರ್ಸ್ ತಂಡಕ್ಕೆ ಗೆಲ್ಲಲು 31 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸಿಕಂದರ್ ರಾಝ ಇಡೀ ಪಂದ್ಯದ ಚಿತ್ರಣ ಬದಲಿಸಿ ಬಿಟ್ಟರು. ಕೇವಲ 7 ಎಸೆತಗಳನ್ನು ಎದುರಿಸಿದ ರಾಝ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 22 ರನ್ ಚಚ್ಚಿದರು. ಈ ಮೂಲಕ 19.5 ಓವರ್​ಗಳಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಗುರಿ ಮುಟ್ಟಿಸಿ, 6 ವಿಕೆಟ್​ಗಳ ಜಯ ತಂದುಕೊಟ್ಟರು.

ಇದನ್ನೂ ಓದಿ: RCB ತಂಡಕ್ಕೆ ಮತ್ತೊಂದು ಆಘಾತ: ಪ್ರಮುಖ ಪ್ಲೇಯರ್ ತವರಿಗೆ ತೆರಳುವ ಸಾಧ್ಯತೆ

ಅಂದರೆ ದೂರದ ನಾಟಿಂಗ್​ಹ್ಯಾಮ್​ನಿಂದ ಲಾಹೋರ್​ಗೆ ಬಂದು, ಪಂದ್ಯದ ಆರಂಭಕ್ಕೂ 10 ನಿಮಿಷ ಮುಂಚಿತವಾಗಿ ತಂಡವನ್ನು ಕೂಡಿಕೊಂಡ ಸಿಕಂದರ್ ರಾಝ ಅವರ ಸ್ಪೋಟಕ ಬ್ಯಾಟಿಂಗ್​ನಿಂದಾಗಿ ಲಾಹೋರ್​ ಖಲಂದರ್ಸ್ ತಂಡವು ಚಾಂಪಿಯನ್ ಅಲಂಕರಿಸುವಂತಾಯಿತು.

Follow Us
ಗದಗದಲ್ಲಿ 5 ದಿನಗಳಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆ ಓಪನ್!
ಗದಗದಲ್ಲಿ 5 ದಿನಗಳಿಂದ ಬಂದ್ ಆಗಿದ್ದ ಸರ್ಕಾರಿ ಶಾಲೆ ಓಪನ್!
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ? ಸಿಎಂ ಡಿಕೆಶಿ ಏನಂದ್ರು?
ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ? ಸಿಎಂ ಡಿಕೆಶಿ ಏನಂದ್ರು?
ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಬಂಡೀಪುರ ಅರಣ್ಯ ಸಿಬ್ಬಂದಿ ಬಲೆಗೆ
ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಬಂಡೀಪುರ ಅರಣ್ಯ ಸಿಬ್ಬಂದಿ ಬಲೆಗೆ
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ
ಟಾಕ್ಸಿಕ್ ಸಿನಿಮಾ ಬಿಡುಗಡೆ; ರಾವಣ ವೇಷ ತೊಟ್ಟು ಥಿಯೇಟರ್​​ಗೆ ಬಂದ ಅಭಿಮಾನಿ
'ಟಾಕ್ಸಿಕ್' ಟ್ರೋಲ್ ಮಾಡುತ್ತಿದ್ದವರಿಗೆ ರಾಕಿ ಭಾಯ್ ಅಭಿಮಾನಿಗಳ ಟಾಂಗ್
'ಟಾಕ್ಸಿಕ್' ಟ್ರೋಲ್ ಮಾಡುತ್ತಿದ್ದವರಿಗೆ ರಾಕಿ ಭಾಯ್ ಅಭಿಮಾನಿಗಳ ಟಾಂಗ್
‘ಟಾಕ್ಸಿಕ್ 2 ಸಾವಿರ ಕೋಟಿ ಕಲೆಕ್ಷನ್ ಮಾಡದಿದ್ದರೆ ಮೀಸೆ ಬೋಳಿಸಿಕೊಳ್ಳುವೆ’
‘ಟಾಕ್ಸಿಕ್ 2 ಸಾವಿರ ಕೋಟಿ ಕಲೆಕ್ಷನ್ ಮಾಡದಿದ್ದರೆ ಮೀಸೆ ಬೋಳಿಸಿಕೊಳ್ಳುವೆ’
ಯಶ್‌ಗೆ ವಿಶೇಷ ಸರ್ಪ್ರೈಸ್ ನೀಡಿದ ಮಂಗಳೂರಿನ ಅಭಿಮಾನಿ
ಯಶ್‌ಗೆ ವಿಶೇಷ ಸರ್ಪ್ರೈಸ್ ನೀಡಿದ ಮಂಗಳೂರಿನ ಅಭಿಮಾನಿ