ಆಸ್ಟ್ರೇಲಿಯಾ (Australia) ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ (Sri Lanka) ಗೆಲುವು ಸಾಧಿಸಿದೆ. ಇದರೊಂದಿಗೆ 5 ಏಕದಿನ ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಆದರೆ, ಇಲ್ಲಿ ಮಾತನಾಡುತ್ತಿರುವುದು ಸೋಲು-ಗೆಲುವಿನ ಬಗ್ಗೆ ಅಲ್ಲ, ಪಂದ್ಯದ ಕೊನೆಯ ಓವರ್‌ನಲ್ಲಿ ಒಂದಲ್ಲ, ಎರಡಲ್ಲ,, ಬರೋಬ್ಬರಿ ಮೂರು ರೋಚಕ ಕ್ಷಣಗಳ ಬಗ್ಗೆ. ಈ 3 ರೋಚಕ ಕ್ಷಣಗಳು ಅಭಿಮಾನಿಗಳ ಹೃದಯ ಗೆದ್ದ ಕ್ಷಣಗಳಾಗಿವೆ. ಪಂದ್ಯದ ಕೊನೆಯ ಓವರ್ ಅಂದರೆ ಆಸ್ಟ್ರೇಲಿಯಾದ ಇನಿಂಗ್ಸ್ನ ಕೊನೆಯ 6 ಎಸೆತಗಳು ಈ ರೋಚಕತೆಗೆ ಸಾಕ್ಷಿಯಾದವು. ಆ 6 ಎಸೆತಗಳಲ್ಲಿ ಆಸ್ಟ್ರೇಲಿಯಾ 19 ರನ್ ಗಳಿಸಬೇಕಿತ್ತು. ಕೈಯಲ್ಲಿ ಒಂದು ವಿಕೆಟ್ ಮಾತ್ರ ಉಳಿದಿತ್ತು. ಶ್ರೀಲಂಕಾ ಮೇಲುಗೈ ಸಾಧಿಸಿತು.
ಆಸ್ಟ್ರೇಲಿಯ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 4 ರನ್‌ಗಳ ಜಯ ಸಾಧಿಸಿದೆ. ಚರಿತ್ ಅಸಲಂಕಾ ಅವರ ಶತಕದ ಆಧಾರದ ಮೇಲೆ ಮೊದಲು ಆಡಿದ ಶ್ರೀಲಂಕಾ ನಾಲ್ಕನೇ ಏಕದಿನ ಪಂದ್ಯದಲ್ಲಿ 258 ರನ್ ಗಳಿಸಿತು. ಇದಕ್ಕುತ್ತರವಾಗಿ 259 ರನ್ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 254 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ ಡೇವಿಡ್ ವಾರ್ನರ್ ಗರಿಷ್ಠ 99 ರನ್ ಗಳಿಸಿದರು.
ಇದನ್ನೂ ಓದಿ:SL vs AUS: ಲಂಕಾ ವಿರುದ್ಧದ ಮೊದಲ ಟಿ20ಗೆ ಆಸೀಸ್ ತಂಡ ಪ್ರಕಟ; ಐಪಿಎಲ್ ಫ್ಲಾಪ್ ಸ್ಟಾರ್ಗಳಿಗೆ ತಂಡದಲ್ಲಿ ಸ್ಥಾನ
ಕೊನೆಯ ಓವರ್‌ನ ಮೊದಲ ರೋಚಕತೆ
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಕೊನೆಯ ಓವರ್‌ನಲ್ಲಿ ಸಿಕ್ಕಿಹಾಕಿಕೊಂಡಿತು. ಕೊನೆಯ 6 ಎಸೆತಗಳಲ್ಲಿ ಅತಿಥಿ ಆಸ್ಟ್ರೇಲಿಯಾ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಆ ಕೊನೆಯ ಓವರ್‌ನಲ್ಲಿ ಶ್ರೀಲಂಕಾದ ಬೌಲಿಂಗ್ ಜವಬ್ದಾರಿಯನ್ನು ನಾಯಕ ಶನಕ ವಹಿಸಿಕೊಂಡರು. ಮೊದಲ ಚೆಂಡು ಡಾಟ್ ಆಗಿತ್ತು. ಎರಡನೇ ಎಸೆತವನ್ನು ಬೌಂಡರಿ ಬಾರಿಸಲಾಯಿತು. ಮೂರನೇ ಎಸೆತದಲ್ಲಿ 2 ರನ್‌ಗಳು ಬಂದವು. ಅಂದರೆ, ಓವರ್‌ನ ಮೊದಲ 3 ಎಸೆತಗಳಲ್ಲಿ 6 ರನ್‌ಗಳು ಬಂದವು.
ಕೊನೆಯ ಓವರ್‌ನ 2ನೇ ರೋಚಕತೆ
ಆಸ್ಟ್ರೇಲಿಯಾ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಸಿಕ್ಸರ್ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲಿ ಸಿಕ್ಸರ್ ಬರಲಿಲ್ಲ, ಆದರೆ ಬ್ಯಾಕ್ ಟು ಬ್ಯಾಕ್ ಎರಡು ಬೌಂಡರಿಗಳು ಬಂದವು. ಅದರ ನಂತರ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿತ್ತು. ಅಂದರೆ, ಒಂದು ಸಿಕ್ಸರ್ ಈಗ ತಂಡದ ಗೆಲುವಿಗೆ ಅನಿವಾರ್ಯವಾಯಿತು. ಕನಿಷ್ಠ ಪಕ್ಷ ಒಂದು ಫೋರ್ ಬಂದಿದ್ದರೂ ಪಂದ್ಯ ಟೈ ಆಗುತ್ತಿತ್ತು.
ಕೊನೆಯ ಓವರ್‌ನ 3ನೇ ರೋಚಕತೆ
ಕೊನೆಯ ಎಸೆತ ಬೌಲಿಂಗ್ ಮಾಡಿದ ಶ್ರೀಲಂಕಾ ತಂಡದ ನಾಯಕ ಯಾವುದೇ ರನ್ ನೀಡದೆ ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಉರುಳಿಸಿದರು. ಈ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಪಂದ್ಯ ಇದೀಗ 4 ರನ್‌ಗಳ ಅಂತರದಲ್ಲಿ ಶ್ರೀಲಂಕಾದ ಪಾಲಾಯಿತು. ಹೀಗಾಗಿ ಸರಣಿಯನ್ನು ಶ್ರೀಲಂಕಾ ವಶಪಡಿಸಿಕೊಂಡಿದೆ.