ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಡಿಆರ್‌ಎಸ್: ಬಾಂಗ್ಲಾದೇಶ ತೆಗೆದುಕೊಂಡ ನಿರ್ಧಾರದ ವಿಡಿಯೋ ನೋಡಿ

Sri Lanka vs Bangladesh DRS Video: ಯುವ ಕ್ರಿಕೆಟಿಗರು, ಯುವ ನಾಯಕರೂ ಸಹ ವಿಮರ್ಶೆಗಳನ್ನು ತೆಗೆದುಕೊಳ್ಳುವಾಗ ಯೋಚಿಸುತ್ತಾರೆ. ಆದರೆ ಬಾಂಗ್ಲಾದೇಶದ ಈ ವಿಮರ್ಶೆ ನಿಮಗೆ ನಗು ತರಿಸುವುದು ಖಚಿತ. ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಅವರು ರಿವ್ಯೂ ತೆಗೆದುಕೊಂಡಿದ್ದು ಕಾಮೆಂಟೇಟರ್‌ಗಳನ್ನು ಕೂಡ ಆಶ್ಚರ್ಯಚಕಿತವಾಗಿಸಿತು.

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಡಿಆರ್‌ಎಸ್: ಬಾಂಗ್ಲಾದೇಶ ತೆಗೆದುಕೊಂಡ ನಿರ್ಧಾರದ ವಿಡಿಯೋ ನೋಡಿ
Bangladesh DRS

Updated on: Mar 31, 2024 | 8:31 AM

ಬಾಂಗ್ಲಾದೇಶ ಮತ್ತು ಶ್ರೀಲಂಕಾ (Sri Lanka vs Bangladesh) ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ 328 ರನ್‌ಗಳ ಜಯ ಸಾಧಿಸಿತ್ತು. ಆ ಬಳಿಕ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ದಿನದಾಟ ಮುಕ್ತಾಯವಾಗಿದ್ದು, ಇಂದು ಎರಡನೇ ದಿನದಾಟ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 4 ವಿಕೆಟ್‌ಗೆ 314 ರನ್ ಗಳಿಸಿದೆ. ಇದೀಗ ಮೊದಲ ದಿನದಾಟದಲ್ಲಿ ಬಾಂಗ್ಲಾದೇಶ ತೆಗೆದುಕೊಂಡ ಡಿಆರ್‌ಎಸ್ ವಿಮರ್ಶೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಯುವ ಕ್ರಿಕೆಟಿಗರು, ಯುವ ನಾಯಕರೂ ಸಹ ವಿಮರ್ಶೆಗಳನ್ನು ತೆಗೆದುಕೊಳ್ಳುವಾಗ ಯೋಚಿಸುತ್ತಾರೆ. ಆದರೆ ಬಾಂಗ್ಲಾದೇಶದ ಈ ವಿಮರ್ಶೆ ನಿಮಗೆ ನಗು ತರಿಸುವುದು ಖಚಿತ. ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಅವರು ರಿವ್ಯೂ ತೆಗೆದುಕೊಂಡಿದ್ದು ಕಾಮೆಂಟೇಟರ್‌ಗಳನ್ನು ಕೂಡ ಆಶ್ಚರ್ಯಚಕಿತವಾಗಿಸಿತು. ಇದು 44ನೇ ಓವರ್‌ನಲ್ಲಿ ನಡೆದಿದೆ. ಕುಸಾಲ್ ಮೆಂಡಿಸ್ ಬ್ಯಾಟಿಂಗ್ ಮಾಡುತ್ತಿದ್ದರಉ. ತೈಜುಲ್ ಇಸ್ಲಾಂ ಬೌಲಿಂಗ್ ಮಾಡಿದರು.

ಪಾಯಿಂಟ್ಸ್ ಟೇಬಲ್​ನಲ್ಲಿ ದಿಢೀರ್ ಐದನೇ ಸ್ಥಾನಕ್ಕೆ ಜಿಗಿದ ಲಕ್ನೋ: ಆರೆಂಜ್ ಕ್ಯಾಪ್ ಕೊಹ್ಲಿ ಬಳಿ ಭದ್ರ

ಇಸ್ಲಾಂ ಹಾಕಿದ ಚೆಂಡನ್ನು ಮೆಂಡಿಸ್ ಜಸ್ಟ್ ಟಚ್ ಮಾಡಿಬಿಟ್ಟರು. ಬ್ಯಾಟ್‌ನ ಮಧ್ಯಭಾಗಕ್ಕೆ ಬಾಲ್ ಬಡಿದಿರುವುದು ಸ್ಪಷ್ಟವಾಗಿ ಕಾಣಿಸಿತು. ಆದರೆ, ಶಾಂಟೊ ಒಂದು ಕ್ಷಣವೂ ತಡಮಾಡದೆ ವಿಮರ್ಶೆ ತೆಗೆದುಕೊಂಡರು. ಅಂಪೈರ್​ಗೆ ಇದು ಸ್ಪಷ್ಟವಾಗಿ ನಾಟೌಟ್ ಎಂದು ತಿಳಿದಿತ್ತು. ಆದರೆ ಈ ವಿಮರ್ಶೆಗೆ ಎಲ್ಲರೂ ನಕ್ಕರು. ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾ ಪ್ರೇಮಿಗಳು ಬಾಂಗ್ಲಾದೇಶದ ನಿರ್ಧಾರವನ್ನು ಟ್ರೋಲ್ ಮಾಡಿದ್ದಾರೆ. ಇದು ಈ ದಶಕದ ಅತಿ ದೊಡ್ಡ DRS ವಿಮರ್ಶೆ ಎಂದು ಬಳಕೆದಾರರು ಕಾಮೆಂಟ್‌ಗಳಲ್ಲಿ ಬರೆದಿದ್ದಾರೆ. ಡಿಆರ್‌ಎಸ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನಾನು ಮನೆಯಿಂದಲೇ ಹೇಳುತ್ತಿದ್ದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಬಾಂಗ್ಲಾದೇಶ ತೆಗೆದುಕೊಂಡ ರಿವ್ಯೂ ವಿಡಿಯೋ ಇಲ್ಲಿದೆ:

 

ಕ್ರೀಡಾಂಗಣದಲ್ಲಿ ಹಾರ್ದಿಕ್​ರನ್ನು ನಿಂದಿಸಿದರೆ ಕಠಿಣ ಕ್ರಮ! ಎಂಸಿಎ ಎಚ್ಚರಿಕೆ

ಬಾಂಗ್ಲಾದೇಶ ಇಂತಹ ವಿಮರ್ಶೆಯನ್ನು ತೆಗೆದುಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲೂ ಇದೇ ರೀತಿಯ ವಿಮರ್ಶೆಯನ್ನು ತೆಗೆದುಕೊಳ್ಳಲಾಗಿತ್ತು. ವಿರಾಟ್ ಕೊಹ್ಲಿ ಆಡುತ್ತಿರುವಾಗ, ತೈಜುಲ್ ಇಸ್ಲಾಂ ಬೌಲಿಂಗ್ ಮಾಡುತ್ತಿದ್ದರು. ಆದರೆ ಬಾಂಗ್ಲಾದೇಶ ಆಟಗಾರರು ಅನಗತ್ಯವಾಗಿ ಮನವಿ ಮಾಡಿದರು. ಮುಶ್ಫಿಕರ್ ರಹೀಮ್ ರಿವ್ಯೂ ತೆಗೆದುಕೊಂಡರು. ರಿಪ್ಲೇ ನೋಡಿದ ಬಳಿಕ ಚೆಂಡು ಕೊಹ್ಲಿ ಅವರ ಬ್ಯಾಟ್ ನ ಮಧ್ಯಕ್ಕೆ ಬಡಿದಿತ್ತು. ಹಾಗಾಗಿ ವಿಮರ್ಶೆ ವ್ಯರ್ಥವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ