VIDEO: ಸಿಕ್ಸ್ ಹಿಟ್… ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
India vs South Africa: ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ೨೦ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೇವಲ 201 ರನ್ ಗಳಿಸಿ 30 ರನ್ ಗಳಿಂದ ಸೋಲೊಪ್ಪಿಕೊಂಡಿದೆ.
ಅಹಮದಾಬಾದ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದು ಕೂಡ ಸಿಡಿಲಬ್ಬರ ಸಿಕ್ಸ್ ಸಿಡಿಸಿ ಶುಭಾರಂಭ ಮಾಡುವ ಮೂಲಕ. ಆದರೆ ಪಾಂಡ್ಯ ಬಾರಿಸಿದ ಈ ಸಿಕ್ಸ್ ನೇರವಾಗಿ ಹೋಗಿ ಬಿದ್ದದ್ದು ಕ್ಯಾಮೆರಾಮ್ಯಾನ್ ಅವರ ಕೈಗೆ.
ಕಾರ್ಬಿನ್ ಬಾಷ್ ಎಸೆದ 13ನೇ ಓವರ್ನ 2ನೇ ಎಸೆತದಲ್ಲಿ ಮಿಡ್ ಆಫ್ನತ್ತ ಸಿಕ್ಸ್ ಬಾರಿಸಿದ್ದರು. ಈ ಫ್ಲಾಟ್ ಸಿಕ್ಸ್ ನೇರವಾಗಿ ಹೋಗಿ ಕ್ಯಾಮೆರಾಮ್ಯಾನ್ಗೆ ಬಡಿದಿದೆ. ತಕ್ಷಣವೇ ಟೀಮ್ ಇಂಡಿಯಾದ ವೈದ್ಯಕೀಯ ಸಿಬ್ಬಂದಿಗಳು ಅವರ ಆರೈಕೆ ಮಾಡಿದರು.
ಇನ್ನು ಪಂದ್ಯ ಮುಗಿದ ಬಳಿಕ ಕ್ಯಾಮೆರಾಮ್ಯಾನ್ನತ್ತ ಬಂದ ಹಾರ್ದಿಕ್ ಪಾಂಡ್ಯ, ಅವರನ್ನು ತಬ್ಬಿಕೊಳ್ಳುವ ಮೂಲಕ ಕ್ಷಮೆಯಾಚಿಸಿದರು. ಇದೀಗ ಪಾಂಡ್ಯ ಅವರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಮ್ಯಾಚ್ನಲ್ಲಿ 25 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 63 ರನ್ ಬಾರಿಸಿದರು.
ಈ 63 ರನ್ಗಳ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೇವಲ 201 ರನ್ ಗಳಿಸಿ 30 ರನ್ ಗಳಿಂದ ಸೋಲೊಪ್ಪಿಕೊಂಡಿದೆ.

