ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕರಾದ ಶಫಾಲಿ ವರ್ಮಾ (Shafali Verma) ಹಾಗೂ ಸ್ಮತಿ ಮಂಧಾನ (Smriti Mandhana) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ನಾಯಕಿಯ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. ಅಲ್ಲದೆ ಕೇವಲ 40 ಓವರ್ಗಳಲ್ಲಿ ಟೀಮ್ ಇಂಡಿಯಾ ಮೊತ್ತವನ್ನು 200ರ ಗಡಿದಾಟಿಸಿದರು.
ಅತ್ತ ಟೀಮ್ ಇಂಡಿಯಾ 200 ರನ್ಗಳ ಗಡಿದಾಟುತ್ತಿದ್ದಂತೆ ಇತ್ತ 113 ಎಸೆತಗಳಲ್ಲಿ ಶಫಾಲಿ ವರ್ಮಾ ಶತಕ ಪೂರೈಸಿದರು. ಇದರ ಬೆನ್ನಲ್ಲೇ 122 ಎಸೆತಗಳಲ್ಲಿ ಸ್ಮೃತಿ ಮಂಧಾನ ಕೂಡ ಭರ್ಜರಿ ಶತಕ ಸಿಡಿಸಿದರು.
That maiden international century feeling 💯🤗
Follow the match ▶️ https://t.co/4EU1Kp7wJe#TeamIndia | #INDvSA | @IDFCFIRSTBank | @TheShafaliVerma pic.twitter.com/yynZnKlt8N
— BCCI Women (@BCCIWomen) June 28, 2024
ಇನ್ನು ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿ 50 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಮೊತ್ತವನ್ನು 271 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಸ್ಮೃತಿ 161 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 27 ಫೋರ್ಗಳೊಂದಿಗೆ 149 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮೊದಲ ವಿಕೆಟ್ನ 292 ರನ್ಗಳ ಜೊತೆಯಾಟ ಅಂತ್ಯವಾಯಿತು.
ಸದ್ಯ ಕ್ರೀಸ್ನಲ್ಲಿ ಶಫಾಲಿ ವರ್ಮಾ (148) ಹಾಗೂ ಶುಭಾ ಸತೀಶ್ (5) ಬ್ಯಾಟಿಂಗ್ ಮುಂದುವರೆಸಿದ್ದು, 54 ಓವರ್ಗಳ ಮುಕ್ತಾಯದ ವೇಳೆ ಟೀಮ್ ಇಂಡಿಯಾ 1 ವಿಕೆಟ್ ಕಳೆದುಕೊಂಡು 304 ರನ್ ಕಲೆಹಾಕಿದೆ.
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಶುಭಾ ಸತೀಶ್ , ಹರ್ಮನ್ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ಸ್ನೇಹ ರಾಣಾ , ರೇಣುಕಾ ಠಾಕೂರ್ ಸಿಂಗ್ , ರಾಜೇಶ್ವರಿ ಗಾಯಕ್ವಾಡ್.
ಇದನ್ನೂ ಓದಿ: ಬಾಬರ್ ಆಝಂ ದಾಖಲೆ ಉಡೀಸ್: ರೋಹಿತ್ ಶರ್ಮಾ ವಿಶ್ವದ ನಂಬರ್ 1 ಕ್ಯಾಪ್ಟನ್
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಲಾರಾ ವೊಲ್ವಾರ್ಡ್ಟ್ (ನಾಯಕಿ), ಸುನೆ ಲೂಸ್, ಅನ್ನೆಕೆ ಬಾಷ್, ಮಾರಿಝನ್ನೆ ಕಪ್, ಡೆಲ್ಮಿ ಟಕರ್, ನಾಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಸಿನಾಲೊ ಜಫ್ತಾ (ವಿಕೆಟ್ ಕೀಪರ್), ಮಸಾಬಟಾ ಕ್ಲಾಸ್, ನಾನ್ಕುಲುಲೆಕೊ ಮ್ಲಾಬಾ, ತುಮಿ ಸೆಖುಖುನೆ.
Published On - 1:39 pm, Fri, 28 June 24