ಭಾರತ-ಪಾಕ್ ಮುಖಾಮುಖಿಯಲ್ಲಿ ಯಾರಿಗೆ ಗೆಲುವು? ಗಂಗೂಲಿ ನೀಡಿದ ಉತ್ತರವೇನು ಗೊತ್ತಾ?

Sourav Ganguly: ಪಾಪರಾಜಿಗಳು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಿದ ಬಂಗಾಳದ ಹುಲಿ ಖ್ಯಾತಿಯ ಗಂಗೂಲಿ, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಫೇವರಿಟ್ ಯಾರು ಎಂದು ಹೇಳುವುದು ನನಗೆ ಕಷ್ಟ. ಎರಡೂ ಕೂಡ ಉತ್ತಮ ತಂಡಗಳು. ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಇತ್ತ ಟೀಂ ಇಂಡಿಯಾ ಕೂಡ ಬಲಿಷ್ಠವಾಗಿದೆ. ಹಾಗಾಗಿ ಯಾವ ತಂಡವೂ ನನ್ನ ಫೇವರಿಟ್ ಅಲ್ಲ ಎಂದಿದ್ದಾರೆ.

ಭಾರತ-ಪಾಕ್ ಮುಖಾಮುಖಿಯಲ್ಲಿ ಯಾರಿಗೆ ಗೆಲುವು? ಗಂಗೂಲಿ ನೀಡಿದ ಉತ್ತರವೇನು ಗೊತ್ತಾ?
ಸೌರವ್ ಗಂಗೂಲಿ

Updated on: Aug 25, 2023 | 1:02 PM

ಏಷ್ಯಾಕಪ್ (Asia Cup 2023) ಆರಂಭಕ್ಕೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ (Pakistan and Sri Lanka) ಆತಿಥ್ಯವಹಿಸುತ್ತಿರುವ ಈ ಕಾಂಟಿನೆಂಟಲ್ ಈವೆಂಟ್​ಗೆ ಟೀಂ ಇಂಡಿಯಾ (Team India) ಕೂಡ ತನ್ನ ತಯಾರಿ ಆರಂಭಿಸಿದೆ. ಕಳೆದ ಏಷ್ಯಾಕಪ್​ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದ ಟೀಂ ಇಂಡಿಯಾ ಈ ಬಾರಿ ಪಾಕ್ ವಿರುದ್ಧ ತನ್ನ ಅಭಿಯಾನ ಆರಂಭಿಸುತ್ತಿದೆ. ಉಭಯ ತಂಡಗಳ ನಡುವೆ ಸೆಪ್ಟಂಬರ್ 2 ರಂದು ಹೈವೋಲ್ಟೇಜ್ ಕದನ ನಡೆಯಲಿದೆ. ಬದ್ಧವೈರಿಗಳ ನಡುವಣ ಈ ಕದನದಲ್ಲಿ ಯಾವ ತಂಡ ಗೆಲ್ಲಬಹುದು ಎಂಬುದನ್ನು ಹಲವಾರು ಮಾಜಿ ಕ್ರಿಕೆಟಿಗರು ಈಗಾಗಲೇ ಊಹಿಸಲಾರಂಭಿಸಿದ್ದಾರೆ. ಇದೀಗ ಈ ಸಾಲಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೂಡ ಸೇರ್ಪಡೆಗೊಂಡಿದ್ದು, ಭಾರತ- ಪಾಕ್ ಫೈಟ್​ನಲ್ಲಿ ಯಾವ ತಂಡ ಜಯ ಸಾಧಿಸಲಿದೆ ಎಂಬ ಪ್ರಶ್ನೆಗೆ ದಾದಾ ನೀಡಿದ ಉತ್ತರ ಏನು ಎಂಬುದರ ವಿವರ ಇಲ್ಲಿದೆ.

ಎರಡೂ ಕೂಡ ಉತ್ತಮ ತಂಡಗಳು

ಪಾಪರಾಜಿಗಳು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡಿದ ಬಂಗಾಳದ ಹುಲಿ ಖ್ಯಾತಿಯ ಗಂಗೂಲಿ, ‘ಭಾರತ ಮತ್ತು ಪಾಕಿಸ್ತಾನದ ನಡುವೆ ಫೇವರಿಟ್ ಯಾರು ಎಂದು ಹೇಳುವುದು ನನಗೆ ಕಷ್ಟ. ಎರಡೂ ಕೂಡ ಉತ್ತಮ ತಂಡಗಳು. ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಇತ್ತ ಟೀಂ ಇಂಡಿಯಾ ಕೂಡ ಬಲಿಷ್ಠವಾಗಿದೆ. ಹಾಗಾಗಿ ಯಾವ ತಂಡವೂ ನನ್ನ ಫೇವರಿಟ್ ಅಲ್ಲ. ಪಂದ್ಯದ ದಿನ ಯಾವ ತಂಡ ಚೆನ್ನಾಗಿ ಆಡುತ್ತೋ, ಆ ತಂಡ ಗೆಲುವು ಸಾಧಿಸುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.

ಅಧಿಕ ಬಾರಿ ಸ್ಟಂಪ್ ಔಟ್ ಆದವರಲ್ಲಿ ಸಚಿನ್- ಗಂಗೂಲಿ ಹೆಸರು

ಬುಮ್ರಾ ಮರಳಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ

ಇನ್ನು ಜಸ್ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿ ಬಗ್ಗೆ ಪ್ರತಿಕ್ರಿಸಿದ ಸೌರವ್, ‘ಬುಮ್ರಾ ತಂಡಕ್ಕೆ ಮರಳಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ನಿರೀಕ್ಷೆಯಂತೆ ಬುಮ್ರಾ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿಯ ಏಷ್ಯಾಕಪ್ 50 ಓವರ್‌ಗಳದ್ದಾಗಿರುವುದರಿಂದ ಅವರು 10 ಓವರ್ ಬೌಲ್ ಮಾಡುತ್ತಾರೆ. ಕಾಲಕ್ಕೆ ತಕ್ಕಂತೆ ಅವರ ಫಿಟ್ನೆಸ್ ಸುಧಾರಿಸುತ್ತಿದೆ’ ಎಂದಿದ್ದಾರೆ.

ಅಕ್ಷರ್ ತಂಡದಲ್ಲಿ ಇರುವುದು ಒಳ್ಳೆಯದು

ಹಾಗೆಯೇ ಏಷ್ಯಾಕಪ್‌ನಲ್ಲಿ ಯುಜುವೇಂದ್ರ ಚಾಹಲ್ ಇರಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ‘ ಈಗಾಗಲೇ ತಂಡದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ. ನನ್ನ ಪ್ರಕಾರ ಅಕ್ಷರ್ ತಂಡದಲ್ಲಿ ಇರುವುದು ಒಳ್ಳೆಯದು. ಏಕೆಂದರೆ ಅವರು ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ಮಾಡಬಲ್ಲರು’ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Fri, 25 August 23