AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಕ್ರಾಮ್ ಶತಕದಾಟಕ್ಕೆ ಬಾಲ ಮುದುರಿದ ಕಾಂಗರೂಗಳು; ಮೂರನೇ ಏಕದಿನ ಪಂದ್ಯ ಗೆದ್ದ ಆಫ್ರಿಕಾ

AUS vs SA: ಸರಣಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, ಐಡೆನ್ ಮಾರ್ಕ್ರಾಮ್ ಅವರ ಶತಕ ಹಾಗೂ ಆರಂಭಿಕರಿಬ್ಬರ ಶತಕದ ನೆರವಿನಿಂದ ಕಾಂಗರೂಗಳಿಗೆ 338 ರನ್​ಗಳ ಬೃಹತ್ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಆಸೀಸ್ ಪಡೆ ವಾರ್ನರ್ ಅವರ ಅರ್ಧಶತಕದ ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ 227 ರನ್​ಗಳಿಗೆ ಆಲೌಟ್ ಆಗುವ ಮೂಲಕ 111 ರನ್‌ಗಳ ಹೀನಾಯ ಸೋಲು ಅನುಭವಿಸಿತು.

ಮಾರ್ಕ್ರಾಮ್ ಶತಕದಾಟಕ್ಕೆ ಬಾಲ ಮುದುರಿದ ಕಾಂಗರೂಗಳು; ಮೂರನೇ ಏಕದಿನ ಪಂದ್ಯ ಗೆದ್ದ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ
ಪೃಥ್ವಿಶಂಕರ
|

Updated on:Sep 13, 2023 | 9:54 AM

Share

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ (Australia vs South Africa) ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ (ODI Series) ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಕಾಂಗರೂಗಳಿಗೆ ತಿರುಗೇಟು ನೀಡಿದೆ. ಸರಣಿಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, ಐಡೆನ್ ಮಾರ್ಕ್ರಾಮ್ (Aiden Markram) ಅವರ ಶತಕ ಹಾಗೂ ಆರಂಭಿಕರಿಬ್ಬರ ಅರ್ಧ ಶತಕದ ನೆರವಿನಿಂದ ಕಾಂಗರೂಗಳಿಗೆ 338 ರನ್​ಗಳ ಬೃಹತ್ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಆಸೀಸ್ ಪಡೆ ವಾರ್ನರ್ (David Warner) ಅವರ ಅರ್ಧಶತಕದ ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ 227 ರನ್​ಗಳಿಗೆ ಆಲೌಟ್ ಆಗುವ ಮೂಲಕ 111 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಆಫ್ರಿಕಾ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಕಾಯ್ದುಕೊಂಡಿದೆ.

ಉತ್ತಮ ಆರಂಭ ಪಡೆದ ಆಫ್ರಿಕಾ

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಜೋಶ್ ಹೇಜಲ್‌ವುಡ್ ಮತ್ತು ಮಾರ್ಕಸ್ ಸ್ಟಾಯಿನಿಸ್ ಹೊಸ ಚೆಂಡಿನೊಂದಿಗೆ ಆಸ್ಟ್ರೇಲಿಯಾಕ್ಕೆ ಯಶಸ್ಸು ನೀಡಲು ಸಾಧ್ಯವಾಗಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ತೆಂಬಾ ಬವುಮಾ ಅವರೊಂದಿಗೆ 146 ರನ್​ಗಳ ಆರಂಭಿಕ ಜೊತೆಯಾಟ ಹಂಚಿಕೊಂಡರು. ಈ ವೇಳೆ ಡಿ ಕಾಕ್ 77 ಎಸೆತಗಳಲ್ಲಿ 82 ರನ್​ಗಳಿಸಿ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ಬವುಮಾ ಕೂಡ 62 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರು.

AUS vs SA: ವಾರ್ನರ್- ಲಬುಶೇನ್ ಶತಕ; ಆಸೀಸ್ ಎದುರು ಮತ್ತೆ ಮಂಡಿಯೂರಿದ ಆಫ್ರಿಕಾ..!

ಮಾರ್ಕ್ರಾಮ್ ಶತಕ

ಈ ಇಬ್ಬರ ಬಳಿಕ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಏಡೆನ್ ಮಾರ್ಕ್ರಾಮ್ 74 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 102 ರನ್ ಕಲೆಹಾಕಿದರು. ಇವರೊಂದಿಗೆ ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಾರ್ಕೊ ಯಾನ್ಸೆನ್ 16 ಎಸೆತಗಳಲ್ಲಿ 32 ರನ್ ಚಚ್ಚಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 338 ರನ್ ಕಲೆಹಾಕಿತು.

ವಾರ್ನರ್ ಅರ್ಧಶತಕ

ಇನ್ನು ಆಫ್ರಿಕಾ ನೀಡಿದ 338 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನೇರಿದ ಆಸೀಸ್ ಪಡೆಗೆ ಆರಂಭಿರಿಬ್ಬರು ಉತ್ತಮ ಆರಂಭ ಒದಗಿಸಿಕೊಟ್ಟರು. ವಾರ್ನರ್ ಹಾಗೂ ಹೆಡ್ ಮುರಿಯದ ವಿಕೆಟ್ಗೆ 79 ರನ್​ಗಳ ಜೊತೆಯಾಟ ಹಂಚಿಕೊಂಡರು. ಆದರೆ ಈ ವೇಳೆ 38 ರನ್​ ಬಾರಿಸಿದ್ದ ಹೆಡ್, ಸಿಸಾಂದ ಮಗಳಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿಕೊಂಡರು. ತಂಡದ ಪರ ಅರ್ಧಶತಕದ ಏಕಾಂಗಿ ಹೋರಾಟ ನಡೆಸಿದ ವಾರ್ನರ್ 78 ರನ್​ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು.

4 ವಿಕೆಟ್ ಕಬಳಿಸಿದ ಜೆರಾಲ್ಡ್

ಆರಂಭದಲ್ಲಿ ಆಫ್ರಿಕಾ ಬೌಲರ್​ಗಳ ಮೇಲೆ ಸವಾರಿ ಮಾಡಿದ ಕಾಂಗರೂಗಳು 1 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿದ್ದರು. ಆದರೆ ಆರಂಭಿರಿಬ್ಬರ ಹೊರತಾಗಿ ಇನ್ನ್ಯಾರು ತಂಡದ ಪರ ಹೇಳಿಕೊಳ್ಳುವಂತ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ತಂಡ 227 ರನ್‌ಗಳಿಗೆ ಆಲೌಟ್ ಆಯಿತು. ಆಫ್ರಿಕಾ ಪರ ತಬ್ರೈಜ್ ಶಮ್ಸಿ 7 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರೆ, ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ 10 ಓವರ್‌ಗಳಲ್ಲಿ 2 ಮೇಡನ್ ಸಹಿತ 37 ರನ್ ನೀಡಿ 2 ವಿಕೆಟ್ ಪಡೆದರು. ಯುವ ವೇಗಿ ಜೆರಾಲ್ಡ್ ಕೊಯೆಟ್ಜಿ 4 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:52 am, Wed, 13 September 23

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ