
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ದಿನಗಳು ಮಾತ್ರ ಉಳಿದಿರುವಾಗಲೇ ಸೌತ್ ಆಫ್ರಿಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಜೆರಾಲ್ಡ್ ಕೋಟ್ಝಿ ಮುಂಬರುವ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ತೊಡೆಸಂದು ಬಿಗಿತದ ಸಮಸ್ಯೆಯಿಂದ ಬಳಲುತ್ತಿರುವ ಜೆರಾಲ್ಡ್ ಕೋಟ್ಝಿ ಇತ್ತೀಚೆಗಷ್ಟೇ ತಂಡಕ್ಕೆ ಮರಳಿದ್ದರು. ಆದರೀಗ ಅವರು ಮತ್ತೆ ಫಿಟ್ನೆಸ್ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
24 ವರ್ಷದ ಜೆರಾಲ್ಡ್ ಕೋಟ್ಝಿ ಸೌತ್ ಆಫ್ರಿಕಾ ತಂಡದ ಗೇಮ್ ಚೇಂಜರ್ ಬೌಲರ್. ಇದೀಗ ಟೂರ್ನಿ ಆರಂಭಕ್ಕೂ ದಿನಗಳು ಮಾತ್ರ ಉಳಿದಿರುವಾಗ ಕೋಟ್ಝಿ ಹೊರಗುಳಿದಿರುವುದು ಆಫ್ರಿಕಾ ಪಡೆಯ ಪಾಲಿಗೆ ಹಿನ್ನಡೆಯನ್ನು ಉಂಟು ಮಾಡಲಿದೆ.
ಏಕೆಂದರೆ ಇದಕ್ಕೂ ಮುನ್ನ ಮತ್ತೋರ್ವ ವೇಗಿ ಅನ್ರಿಕ್ ನೋಕಿಯ ಬೆನ್ನು ನೋವಿನ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದರು. ಇದೀಗ ಜೆರಾಲ್ಡ್ ಕೋಟ್ಝಿ ಕೂಡ ಹೊರಗುಳಿಯುತ್ತಿರುವುದರಿಂದ ಸೌತ್ ಆಫ್ರಿಕಾ ತಂಡದ ಬೌಲಿಂಗ್ ಬಲವನ್ನು ಕುಗ್ಗಿಸಲಿದೆ.
ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ತಬ್ರೇಝ್ ಶಂಸಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟ್ರಿಸ್ಟನ್ ಸ್ಟಬ್ಸ್.
*ಅನ್ರಿಕ್ ನೋಕಿಯ (ಗಾಯಾಳು), ಜೆರಾಲ್ಡ್ ಕೋಟ್ಝಿ (ಗಾಯಾಳು).
| ಚಾಂಪಿಯನ್ಸ್ ಟ್ರೋಫಿ 2025 ಸೌತ್ ಆಫ್ರಿಕಾ ವೇಳಾಪಟ್ಟಿ | |||
| ದಿನಾಂಕ | ಪಂದ್ಯಗಳು | ಕ್ರೀಡಾಂಗಣ | ಸಮಯ |
| ಫೆಬ್ರವರಿ 21 | ಅಫ್ಘಾನಿಸ್ತಾನ್ v ಸೌತ್ ಆಫ್ರಿಕಾ | ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ | IST ಮಧ್ಯಾಹ್ನ 2:30 |
| 25 ಫೆಬ್ರವರಿ | ಆಸ್ಟ್ರೇಲಿಯಾ v ಸೌತ್ ಆಫ್ರಿಕಾ | ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ರಾವಲ್ಪಿಂಡಿ | IST ಮಧ್ಯಾಹ್ನ 2:30 |
| ಮಾರ್ಚ್ 1 | ಸೌತ್ ಆಫ್ರಿಕಾ v ಇಂಗ್ಲೆಂಡ್, | ರಾಷ್ಟ್ರೀಯ ಕ್ರೀಡಾಂಗಣ, ಕರಾಚಿ | IST ಮಧ್ಯಾಹ್ನ 2:30 |
ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್ಗೆ ಕಾಲಿಟ್ಟ IPLನ ಮೂರು ಫ್ರಾಂಚೈಸಿಗಳು..!
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಹೈಬ್ರಿಡ್ ಮಾದರಿಯಲ್ಲಿ ಜರುಗಲಿರುವ ಈ ಟೂರ್ನಿಯ ಬಹುತೇಕ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ಭಾರತ ತಂಡದ ಪಂದ್ಯಗಳಿಗೆ ದುಬೈ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಫೆಬ್ರವರಿ 21 ರಂದು ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಎದುರಿಸುವ ಮೂಲಕ ಸೌತ್ ಆಫ್ರಿಕಾ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.