ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ 42ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಅಫ್ಘಾನಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಗೆಲುವಿಗೆ 245 ರನ್‌ಗಳ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ 47.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದು ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 7 ನೇ ಗೆಲುವು. ಇದೀಗ ಈ ಗೆಲುವಿನೊಂದಿಗೆ ಆಫ್ರಿಕಾ 14 ಅಂಕಗಳೊಂದಿಗೆ, ಪಾಯಿಂಟ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಂತರ ಎರಡನೇ ಸ್ಥಾನದಲ್ಲಿದೆ. ಈ ಸೋಲಿನೊಂದಿಗೆ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಸವಾಲು ಕೂಡ ಅಂತ್ಯಗೊಂಡಿದೆ.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ 42ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಗೆಲುವಿಗೆ 245 ರನ್‌ಗಳ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ 47.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದು ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ 7 ನೇ ಗೆಲುವು. ಇದೀಗ ಈ ಗೆಲುವಿನೊಂದಿಗೆ ಆಫ್ರಿಕಾ 14 ಅಂಕಗಳೊಂದಿಗೆ, ಪಾಯಿಂಟ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಂತರ ಎರಡನೇ ಸ್ಥಾನದಲ್ಲಿದೆ.
44 ಓವರ್‌ಗಳ ನಂತರ ದಕ್ಷಿಣ ಆಫ್ರಿಕಾ ಸ್ಕೋರ್ 5 ವಿಕೆಟ್‌ಗೆ 209 ರನ್ ಆಗಿದೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 67 ಮತ್ತು ಫೆಹ್ಲುಕ್ವಾಯೊ 88 ಎಸೆತಗಳಲ್ಲಿ 12 ರನ್ ಗಳಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಗೆಲ್ಲಲು 36 ಎಸೆತಗಳಲ್ಲಿ 36 ರನ್ ಗಳಿಸಬೇಕಿದೆ.
40 ಓವರ್‌ಗಳ ನಂತರ ದಕ್ಷಿಣ ಆಫ್ರಿಕಾದ ಸ್ಕೋರ್ ಐದು ವಿಕೆಟ್‌ಗೆ 192 ರನ್ ಆಗಿದೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 61 ಮತ್ತು ಆಂಡಿಲೆ ಫೆಹ್ಲುಕ್ವಾಯೊ ಮೂರು ರನ್ ಗಳಿಸಿ ಆಡುತಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಗೆಲ್ಲಲು 60 ಎಸೆತಗಳಲ್ಲಿ 53 ರನ್ ಗಳಿಸಬೇಕಿದೆ.
34 ಓವರ್‌ಗಳ ನಂತರ ದಕ್ಷಿಣ ಆಫ್ರಿಕಾದ ಸ್ಕೋರ್ ನಾಲ್ಕು ವಿಕೆಟ್‌ಗೆ 163 ರನ್ ಆಗಿದೆ. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 47 ರನ್ಗಳಲ್ಲಿ ಆಡುತ್ತಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಗೆಲ್ಲಲು 96 ಎಸೆತಗಳಲ್ಲಿ 82 ರನ್ ಗಳಿಸಬೇಕಿದೆ.
28ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕನೇ ವಿಕೆಟ್ ಪತನವಾಯಿತು. ರಶೀದ್ ಖಾನ್ ಅವರು ಹೆನ್ರಿಚ್ ಕ್ಲಾಸೆನ್ ಅವರನ್ನು ಬೌಲ್ಡ್ ಮಾಡಿದರು. ಕ್ಲಾಸೆನ್ 13 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಗೆಲ್ಲಲು ಇನ್ನೂ 106 ರನ್ ಗಳಿಸಬೇಕಿದೆ.
ಐಡನ್ ಮಾರ್ಕ್ರಂ ಕೂಡ ವಿಕೆಟ್ ಒಪ್ಪಿಸಿದ್ದಾರೆ. 116 ರನ್‌ಗಳಿಗೆ ಆಫ್ರಿಕಾಕ್ಕೆ ಮೂರನೇ ಹಿನ್ನಡೆಯಾಗಿದೆ. 25 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಮಾರ್ಕ್ರಾಮ್ ಅವರನ್ನು ರಶೀದ್ ಔಟ್ ಮಾಡಿದರು.
ಕ್ವಿಂಟನ್ ಡಿ ಕಾಕ್ ಅರ್ಧಶತಕ ವಂಚಿತರಾಗಿದ್ದಾರೆ. ಅವರು 41 ರನ್‌ಗಳ ಇನ್ನಿಂಗ್ಸ್ ಆಡಿ ನಬಿ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
11ನೇ ಓವರ್‌ನಲ್ಲಿ 64 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾ ಮೊದಲ ವಿಕೆಟ್ ಕಳೆದುಕೊಂಡಿದೆ. 28 ಎಸೆತಗಳಲ್ಲಿ 23 ರನ್ ಗಳಿಸಿ ತೆಂಬಾ ಬಾವುಮಾ ಔಟಾದರು. ಮುಜೀಬ್ ಉರ್ ರೆಹಮಾನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಬವುಮಾ ಸಿಕ್ಸರ್ ಬಾರಿಸಲು ಯತ್ನಿಸುತ್ತಿದ್ದಾಗ ಬೌಂಡರಿಯಲ್ಲಿ ಕ್ಯಾಚಿತ್ತು ಔಟಾದರು.
ಬವುಮಾ ಮತ್ತು ಡಿ ಕಾಕ್ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ಪೂರೈಸಿದರು.
231 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿದೆ. ಕ್ವಿಂಟನ್ ಡಿ ಕಾಕ್ 30 ರನ್ ಗಳಿಸಿ ಆಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಆರಂಭವಾಗಿದೆ. ತೆಂಬಾ ಬಾವುಮಾ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಬಂದಿದ್ದಾರೆ. ಮುಜೀಬ್ ಉರ್ ರೆಹಮಾನ್ ಮೊದಲ ಓವರ್‌ನಲ್ಲಿ ಐದು ರನ್ ನೀಡಿದರು.
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಇನ್ನಿಂಗ್ಸ್ ಅಂತ್ಯಗೊಂಡಿದೆ. ತಂಡ 50 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಗಳಿಸಿದೆ. ಉಮರ್ಜಾಯ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 97 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೂ ಶತಕ ವಂಚಿತರಾದರು. ಇದೀಗ ದಕ್ಷಿಣ ಆಫ್ರಿಕಾ ಗೆಲುವಿಗೆ 245 ರನ್‌ಗಳ ಅಗತ್ಯವಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ 9ನೇ ಹೊಡೆತ ಬಿದ್ದಿದೆ. ತಂಡದ ಬೌಲರ್ ಮುಜೀಬ್ ರಹಮಾನ್ 8 ರನ್ ಗಳಿಸಿ ಔಟಾದರು.
ಅಫ್ಘಾನಿಸ್ತಾನ ಕ್ರಿಕೆಟ್ ತಂಡ 200 ರನ್ ಪೂರೈಸಿದೆ. ತಂಡದ ಪರವಾಗಿ ಉಮರ್ಜಾಯ್ ಮತ್ತು ನೂರ್ ಅಹ್ಮದ್ ಕ್ರೀಸ್‌ನಲ್ಲಿದ್ದು ಅಮೋಘ ಆಟವಾಡುತ್ತಿದ್ದಾರೆ.
ಒಮರ್ಜಾಯ್ ಉತ್ತಮ ಫಾರ್ಮ್‌ನಲ್ಲಿದ್ದು, ಆಫ್ರಿಕನ್ನ್ ಬೌಲರ್‌ಗಳನ್ನು ತೀವ್ರವಾಗಿ ಥಳಿಸುತ್ತಿದ್ದಾರೆ. ಅಫ್ಘಾನಿಸ್ತಾನ ತಂಡದ ಸ್ಕೋರ್ 180 ದಾಟಿದೆ.
ಆಫ್ಘಾನಿಸ್ತಾನ ಮತ್ತೊಂದು ದೊಡ್ಡ ಹೊಡೆತವನ್ನು ಅನುಭವಿಸಿದೆ. ತಂಡದ ಆಲ್ ರೌಂಡರ್ ರಶೀದ್ ಖಾನ್ ಔಟ್ ಆಗಿದ್ದಾರೆ.
ಒಂದು ತುದಿಯಿಂದ ಇನ್ನಿಂಗ್ಸ್ ನಿಭಾಯಿಸುತ್ತಿರುವ ಅಫ್ಘಾನಿಸ್ತಾನದ ಬಲಿಷ್ಠ ಆಲ್ ರೌಂಡರ್ ಒಮರ್ಜೈ 51 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಅಫ್ಘಾನಿಸ್ತಾನ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದಾರೆ.ಅಫ್ಘಾನಿಸ್ತಾನಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ತಂಡದ ಬ್ಯಾಟ್ಸ್‌ಮನ್ ಇಕ್ರಮ್ 12 ರನ್ ಗಳಿಸಿ ಔಟಾದರು.
ನಾಲ್ಕನೇ ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನ ಒತ್ತಡಕ್ಕೆ ಸಿಲುಕಿದೆ. ರಹಮತ್ ಶಾ 26 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ.
ಆರಂಭಿಕ ಆಘಾತದ ಬಳಿಕ ಅಫ್ಘಾನಿಸ್ತಾನ ತಂಡ ಮತ್ತೆ ಹಿಡಿತ ಸಾಧಿಸಿದೆ. 25 ಓವರ್‌ಗಳಲ್ಲಿ ತಂಡ 100 ರನ್ ಗಳಿಸಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಕೋರ್ 50 ದಾಟಿದೆ. ರಹಮತ್ ಷಾ ಮತ್ತು ಒಮರ್ಜಾಯ್ ಕ್ರೀಸ್‌ನಲ್ಲಿದ್ದಾರೆ.
ಅಫ್ಘಾನಿಸ್ತಾನಕ್ಕೆ ದಕ್ಷಿಣ ಆಫ್ರಿಕಾ ತಂಡ ಮೂರನೇ ಹೊಡೆತ ನೀಡಿದೆ. ತಂಡದ ನಾಯಕ ಹಶ್ತ್ಮುಲ್ಲಾ ಶಾಹಿದಿ 2 ರನ್ ಗಳಿಸಿ ಔಟಾದರು. ಇದು ಕೇಶವ್ ಮಹಾರಾಜ್ ಅವರ ಎರಡನೇ ವಿಕೆಟ್.
ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಎರಡನೇ ಹಿನ್ನಡೆಯಾಗಿದೆ. ತಂಡದ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಔಟಾಗಿದ್ದಾರೆ.
ಕೇಶವ ಮಹಾರಾಜ್ ಅವರು ದಕ್ಷಿಣ ಆಫ್ರಿಕಾಕ್ಕೆ ಮೊದಲ ಯಶಸ್ಸನ್ನು ನೀಡಿದ್ದಾರೆ. ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಉತ್ತಮ ಆರಂಭದ ನಂತರ ಮತ್ತೊಮ್ಮೆ ಔಟಾಗಿದ್ದಾರೆ.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಬೌಲಿಂಗ್ ಮಾಡುವಾಗ ಇದ್ದಕ್ಕಿದ್ದಂತೆ ಗಾಯಗೊಂಡಿದ್ದಾರೆ. ಅವರು ಕಾಲಿನ ಸೆಳೆತಕ್ಕೆ ಒಳಗಾಗಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡ ನಿಧಾನಗತಿಯ ಆರಂಭವನ್ನು ಮಾಡಿದೆ. ತಂಡ 3 ಓವರ್‌ಗಳಲ್ಲಿ ಕೇವಲ 14 ರನ್ ಗಳಿಸಿದೆ. ಆದರೂ ಇಬ್ಬರೂ ಓಪನರ್‌ಗಳು ಇನ್ನೂ ಕ್ರೀಸ್‌ನಲ್ಲಿದ್ದಾರೆ.
ಇಬ್ರಾಹಿತ್ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ದಾಳಿಯಲ್ಲಿ ಕಗಿಸೊ ರಬಾಡ.
ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಇಕ್ರಮ್ ಅಲಿಖಿಲ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್.
ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸೆನ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಆಂಡಿಲ್ ಫೆಹ್ಲುಕ್ವಾಯೊ, ಡೇವಿಡ್ ಮಿಲ್ಲರ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ.
ಅಫ್ಘಾನ್ ನಾಯಕ ಹಸ್ಮತುಲ್ಲಾ ಶಾಹಿದಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
Published On - 1:36 pm, Fri, 10 November 23