Sign In

By signing in or creating an account, you agree with Associated Broadcasting Company's Terms & Conditions and Privacy Policy.

Rachin Ravindra: ಬೆಂಗಳೂರಿನಲ್ಲಿರುವ ಅಜ್ಜಿ ಮನೆಗೆ ರಚಿನ್ ರವೀಂದ್ರ ಭೇಟಿ: ಮೊಮ್ಮಗನನ್ನು ಕಂಡು ಹಿರಿಯ ಜೀವ ಏನು ಮಾಡಿತು ನೋಡಿ

Rachin Ravindra: ಬೆಂಗಳೂರಿನಲ್ಲಿರುವ ಅಜ್ಜಿ ಮನೆಗೆ ರಚಿನ್ ರವೀಂದ್ರ ಭೇಟಿ: ಮೊಮ್ಮಗನನ್ನು ಕಂಡು ಹಿರಿಯ ಜೀವ ಏನು ಮಾಡಿತು ನೋಡಿ

Vinay Bhat
|

Updated on: Nov 10, 2023 | 10:22 AM

Rachin Ravindra at Grand Mother House in Bengaluru: ನ್ಯೂಝಿಲೆಂಡ್​ಗೆ ಗುರುವಾರ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಿತ್ತು. ಇದಕ್ಕೂ ಮುನ್ನ ರಚಿನ್ ರವೀಂದ್ರ ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ. ಇಲ್ಲಿ ಅವರ ಅಜ್ಜಿ ರಚಿನ್ ಅವರನ್ನು ಕೂರಿಸಿ ದೃಷ್ಟಿ ತೆಗೆದಿದ್ದಾರೆ.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ನ್ಯೂಝಿಲೆಂಡ್ ತಂಡದ ಪರ ಆಡುತ್ತಿರುವ ರಚಿನ್ ರವೀಂದ್ರ (Rachin Ravindra) ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಇವರು ಮೂಲತಃ ಭಾರತದವರು, ಅದರಲ್ಲೂ ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ. ಈ ಬಾರಿಯ ವಿಶ್ವಕಪ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆದು ಮಿಂಚಿತ್ತಿರುವ ರಚಿನ್ ಅವರ ಕುಟುಂಬ ಈಗಲೂ ಬೆಂಗಳೂರಿನಲ್ಲೇ ಇದೆ. ರಚಿನ್ ಅವರು ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ​ ​ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಝಿಲೆಂಡ್​​ಗೆ ತೆರಳಿದ್ದರು. ಆ ಬಳಿಕ ಅಲ್ಲಿಯೇ ನೆಲೆಸಿದ್ದರು. ನ್ಯೂಝಿಲೆಂಡ್​ಗೆ ಗುರುವಾರ ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಿತ್ತು. ಇದಕ್ಕೂ ಮುನ್ನ ರಚಿನ್ ಅವರು ಬೆಂಗಳೂರಿನಲ್ಲಿರುವ ತಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದ್ದಾರೆ. ಇಲ್ಲಿ ಅವರ ಅಜ್ಜಿ ರಚಿನ್ ಅವರನ್ನು ಕೂರಿಸಿ ದೃಷ್ಟಿ ತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ