Virat Kohli: ನಿಯಮ ಉಲ್ಲಂಘಿಸಿದ್ರ ಕೊಹ್ಲಿ?: ಭಾರತೀಯರು ತಂಗಿರುವ ಬೆಂಗಳೂರಿನ ಹೋಟೆಲ್‌ನಲ್ಲಿ ವಿರಾಟ್ ಜೊತೆ ಅನುಷ್ಕಾ
India vs Netherlands, ICC ODI World Cup 2023: ನಿಯಮದ ಪ್ರಕಾರ ತಂಡದ ಸದಸ್ಯರು ಮಾತ್ರ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು. ಆದರೆ, ಹೋಟೆಲ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಇರುವುದು ಕಂಡುಬಂದಿದೆ. ಕೊಹ್ಲಿ-ಅನುಷ್ಕಾ ಹೋಟೆಲ್‌ನಿಂದ ಹೊರ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ತಂಡ ಸೆಮಿ ಫೈನಲ್ಗು ಮುನ್ನ ತನ್ನ ಕೊನೆಯ ಪಂದ್ಯವನ್ನು ಭಾನುವಾರ (ನವೆಂಬರ್ 12) ನೆದರ್ಲೆಂಡ್ಸ್ (India vs Netherlands) ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಟೀಮ್ ಇಂಡಿಯಾ ಆಟಗಾರರು ಬೆಂಗಳೂರಿಗೆ ತಲುಪಿದ್ದು, ಹೋಟೆಲ್‌ನಲ್ಲಿ ತಂಗಿದ್ದಾರೆ. ನಿಯಮದ ಪ್ರಕಾರ ತಂಡದ ಸದಸ್ಯರು ಮಾತ್ರ ಹೋಟೆಲ್‌ನಲ್ಲಿ ಉಳಿದುಕೊಳ್ಳಬಹುದು. ಆದರೆ, ಹೋಟೆಲ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಇರುವುದು ಕಂಡುಬಂದಿದೆ. ಕೊಹ್ಲಿ-ಅನುಷ್ಕಾ ಹೋಟೆಲ್‌ನಿಂದ ಹೊರ ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಕೊಹ್ಲಿ ನಿಯಮ ಉಲ್ಲಂಘಿಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಟೀಮ್ ಇಂಡಿಯಾ ಇಂದು ಮತ್ತು ನಾಳೆ ಐಚ್ಛಿಕ ತರಬೇತಿಯನ್ನು ಹೊಂದಿದೆ. ಕೊಹ್ಲಿ ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos