ದಾವಣಗೆರೆಯಲ್ಲಿ ಕುಡಿದ ಮತ್ತಲ್ಲಿ ವಾಹನಗಳಿಗೆ ಕಲ್ಲೆಸೆದ ವ್ಯಕ್ತಿ; ಕುಡುಕನ ಅವಾಂತರಕ್ಕೆ ಬಸ್, ಆಟೋ ಗಾಜು ಪುಡಿ ಪುಡಿ!
ಕುಡಿದ ಮತ್ತಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೆಸೆದ ವ್ಯಕ್ತಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ದಾವಣಗೆರೆ (Davanagere) ನಗರದ ಪಿಬಿ ರಸ್ತೆಯ ಗಾಂಧಿ ಸರ್ಕಲ್ ಬಳಿ ನಡೆದಿದೆ. ಕುಡುಕನ ಅವಾಂತರಕ್ಕೆ ಬಸ್ ಹಾಗೂ ಆಟೋ ಗಾಜುಗಳು ಪುಡಿಯಾಗಿದೆ.
ದಾವಣಗೆರೆ, ನ.09: ಮದ್ಯಪಾನ ಪ್ರಿಯನ ಹಾವಳಿಗೆ ಇಂದು ದಾವಣಗೆರೆ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಹೌದು, ಕುಡಿದ ಮತ್ತಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೆಸೆದ ವ್ಯಕ್ತಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ದಾವಣಗೆರೆ (Davanagere) ನಗರದ ಪಿಬಿ ರಸ್ತೆಯ ಗಾಂಧಿ ಸರ್ಕಲ್ ಬಳಿ ನಡೆದಿದೆ. ಕುಡುಕನ ಅವಾಂತರಕ್ಕೆ ಬಸ್ ಹಾಗೂ ಆಟೋ ಗಾಜುಗಳು ಪುಡಿಯಾಗಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ