Bengaluru: ಟ್ರಿಪ್ಗೆ ಹೋದ ಪತ್ನಿ ಇನ್ನೂ ಬಂದಿಲ್ಲ, ಬಸ್ ಟೈರ್ ಕೆಳಗೆ ತಲೆಕೊಟ್ಟು ಕುಡುಕ ಪತಿ ಆಕ್ರಂದನ
ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ಎಂದು ಮಧ್ಯಪ್ರಿಯ ಪತಿರಾಯ ಅವಾಂತರ ಸೃಷ್ಠಿಸಿದ್ದಾನೆ. ನನ್ನ ಹೆಂಡತಿ ಪ್ರವಾಸಕ್ಕೆ ಹೋದವಳು ಇನ್ನು ವಾಪಸ್ ಬಂದಿಲ್ಲವೆಂದು ಸರ್ಕಾರಿ ಬಸ್ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ, (Congress Government) ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel for Women) ಅವಕಾಶ ನೀಡಿದೆ. ಈ ಹಿನ್ನೆಲೆ ಮಹಿಳೆಯರು ಪುಣ್ಯಕ್ಷೇತ್ರ ಹಾಗೂ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಹೀಗೆ ಪ್ರವಾಸಕ್ಕೆ ಹೋದ ಪತ್ನಿ ಮನೆಗೆ ಬಂದಿಲ್ಲ ಎಂದು ಮಧ್ಯಪ್ರಿಯ ಪತಿರಾಯ ಅವಾಂತರ ಸೃಷ್ಠಿಸಿದ್ದಾನೆ. ನನ್ನ ಹೆಂಡತಿ ಪ್ರವಾಸಕ್ಕೆ ಹೋದವಳು ಇನ್ನು ವಾಪಸ್ ಬಂದಿಲ್ಲವೆಂದು ಸರ್ಕಾರಿ ಬಸ್ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್; ವಾಯುವ್ಯ ಸಾರಿಗೆ ವಿಭಾಗದ ಬಸ್ಸುಗಳಲ್ಲಿ 2 ಕೋಟಿಗೂ ಹೆಚ್ಚು ಮಹಿಳೆಯರ ಪ್ರಯಾಣ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಕುಡಕ ಪತಿರಾಯ ತನ್ನ ಪತ್ನಿ ಪ್ರವಾಸಕ್ಕೆ ಹೋದವಳು ಇನ್ನು ಬಂದಿಲ್ಲವೆಂದು ಬಿಎಂಟಿಸಿ ಬಸ್ ಟೈರ್ ಕೆಳಗಡೆ ಮಲಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಅರ್ದಗಂಟೆಗೂ ಹೆಚ್ಚು ಕಾಲ ಕಿರಿಕ್ ಮಾಡಿದ್ದಾನೆ. ಈತನ ಅವಾಂತರದಿಂದ ಬಸ್ನಲ್ಲಿ ಕುಳಿತ ಪ್ರಯಾಣಿಕರ ಪರದಾಡುವಂತಾಯಿತು.
ಸಿದ್ದರಾಮಯ್ಯ ಸರಿಯಿಲ್ಲ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ ರದ್ದುಗೊಳಿಸಿ. ಉಚಿತ ಬಸ್ ಪ್ರಯಾಣವನ್ನು ತೆಗೆದು ಹಾಕಬೇಕು ಎಂದು ಅಂತ ಪತಿರಾಯ ವಾಗ್ದಾಳಿ ಮಾಡಿದನು. ಕೊನೆಗೆ ಸ್ಥಳೀಯರು ಈತನನ್ನು ಬಸ್ ಕೆಳಗಡೆಯಿಂದ ಹೊರಗೆ ಎಳೆದರು. ನಂತರ ಹೊಸಕೋಟೆ ಪೊಲೀಸರಿಗೆ ಒಪ್ಪಿಸಿದರು. ಈತನ ಅವಾಂತರವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Thu, 29 June 23