AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddaramaiah Anna Bhagya: ಅಕ್ಕಿಯ ಬದಲು ಖಾತೆಗೆ ಹಣ ಹಾಕುವ ವಿಚಾರಕ್ಕೆ ನಟ ಚೇತನ್ ಏನಂದರು?

Siddaramaiah Anna Bhagya: ಅಕ್ಕಿಯ ಬದಲು ಖಾತೆಗೆ ಹಣ ಹಾಕುವ ವಿಚಾರಕ್ಕೆ ನಟ ಚೇತನ್ ಏನಂದರು?

TV9 Web
| Updated By: ಸಾಧು ಶ್ರೀನಾಥ್​

Updated on: Jun 29, 2023 | 4:21 PM

Actor Chethan: ಕಾಂಗ್ರೆಸ್ ಸರ್ಕಾರ ಐದು ಬಾಗ್ಯಗಳನ್ನು ಜಾರಿ ಮಾಡಿ, ಕ್ರಾಂತಿ ಮಾಡಿದವರ ರೀತಿ ಮಾಡ್ತಿದ್ದಾರೆ. ಆದ್ರೆ ಮಾಡಬೇಕಾದ ಕೆಲಸಗಳು ಇನ್ನು ಬಹಳಷ್ಟಿವೆ ಅಂತ, ನಟ ಚೇತನ್ ಹೇಳಿದ್ದಾರೆ.

ಕಲಬುರಗಿ (Kalaburagi) ನಗರದಲ್ಲಿ ನಟ ಚೇತನ್ (Actor Chethan) ಹೇಳಿಕೆ. ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆ ಜಾರಿ ಮಾಡಿ ಕ್ರಾಂತಿ ಮಾಡಿದೆ ಅಂತ ಅಂದುಕೊಂಡಿದೆ. ಆದ್ರೆ ಇನ್ನೂ ಮಾಡಬೇಕಾಗಿರೋ ಕೆಲಸಗಳು ಬಹಳಷ್ಟಿವೆ. ಉಚಿತವಾಗಿ ಅಕ್ಕಿ ಮತ್ತು ಹಣ ಕೊಡ್ತಿರೋದು ಉತ್ತಮ. ಇನ್ನು ಹೆಚ್ಚು ಹಣ ಮತ್ತು ಅಕ್ಕಿಯನ್ನು ಸರ್ಕಾರ ನೀಡಬೇಕು. ಶ್ರೀಮಂತರ ಮೇಲೆ ಹೆಚ್ಚು ಹೆಚ್ಚು ತೆರಿಗೆ ಹಾಕಬೇಕು ಎಂದ ಚೇತನ್ (Siddaramaiah-led govt to give cash instead of rice under Anna Bhagya).

ಕಾಂಗ್ರೆಸ್ ಸರ್ಕಾರ ಐದು ಭಾಗ್ಯಗಳನ್ನು ಜಾರಿ ಮಾಡಿ, ಕ್ರಾಂತಿ ಮಾಡಿದವರ ರೀತಿ ಮಾಡ್ತಿದ್ದಾರೆ. ಆದ್ರೆ ಮಾಡಬೇಕಾದ ಕೆಲಸಗಳು ಇನ್ನು ಬಹಳಷ್ಟಿವೆ ಅಂತ, ನಟ ಚೇತನ್ ಹೇಳಿದ್ದಾರೆ. ಕಲಬುರಗಿ ನಗರದಲ್ಲಿ ಮಾತನಾಡಿದ ಚೇತನ್, ಸರ್ಕಾರ ಅಕ್ಕಿಯನ್ನು ಉಚಿತವಾಗಿ ನೀಡಬೇಕು.ಜೊತೆಗೆ ಹೆಚ್ಚಿನ ಹಣವನ್ನು ಕೂಡಾ ಬಡವರಿಗೆ ನೀಡಬೇಕು. ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಹಾಕಿ, ಬಡವರಿಗೆ ನೀಡಬೇಕು. ಕರೆಂಟ್ ಬಿಲ್ ಹೆಚ್ಚು ಮಾಡಿ, ಬಡವರಿಂದ ಕಿತ್ತು ಬಡವರಿಗೆ ನೀಡೋದನ್ನು ಬಿಡಬೇಕು ಅಂತ ಹೇಳಿದ್ದಾರೆ.

ಕಲಬುರಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ