ಸುರೇಶ್ ರೈನಾ ನಿಸ್ಸಂದೇಹವಾಗಿ ಭಾರತ ಕಂಡು ಅತ್ಯುತ್ತಮ ಎಡಗೈ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ತನ್ನ ಪಾದಾರ್ಪಣೆಯ ಟೆಸ್ಟ್ನಲ್ಲೇ ಶತಕ ಬಾರಿಸಿ ಸಾಂಪ್ರದಾಯಿಕ ಕ್ರಿಕೆಟ್ ಕರೀಯರ್ ಅನ್ನು ಅದ್ಭುತವಾಗಿ ಆರಂಭಿಸಿದರೂ ದುರದೃಷ್ಟವಶಾತ್ ಕೇವಲ 18 ಟೆಸ್ಟ್ಗಳಲ್ಲಿ ಮಾತ್ರ ಭಾರತದ ಪರ ಕಾಣಿಸಿಕೊಂಡರು. ಆದರೆ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತಕ್ಕೆ ಬಹಳ ವರ್ಷಗಳ ಕಾಲ ಆಡಿದರು. ಟೀಮ್ ಇಂಡಿಯಾದಲ್ಲಿ ಎಡಚರ ಕೊರತೆ ಮೊದಲಿನಿಂದಲೂ ಇದೆ. ಈ ಕೊರತೆಯನ್ನು ರೈನಾ ಕೆಲ ವರ್ಷಗಳ ಮಟ್ಟಿಗೆ ನೀಗಿದ್ದರು. ಅಂದಹಾಗೆ, ಟೆಸ್ಟ್ ಕ್ರಿಕೆಟ್ನಲ್ಲಿ ಇವರ ಸ್ಥಾನ ಕಸಿದುಕೊಂಡ ಆಟಗಾರ ಯಾರು ಗೊತ್ತಾ? ಟೀಮ್ ಇಂಡಿಯಾದ ಈಗಿನ ಮಿಸ್ಟರ್ ಡಿಪೆಂಡೇಬಲ್ ಚೇತೇಶ್ವರ್ ಫೂಜಾರಾ!
ಓಕೆ, ನಾವಿಲ್ಲಿ ರೈನಾ ಅವರ ಕ್ರಿಕೆಟ್ ಕರೀಯರ್ ಬದಲು ಮತ್ತೊಂದು ಹವ್ಯಾಸದ ಬಗ್ಗ್ಗೆ ಮಾತಾಡುತ್ತಿದ್ದೇವೆ. ವಿಷಯ ಏನು ಗೊತ್ತುಂಟಾ ಮಾರಾಯ್ರೇ, ರೈನಾ ಒಬ್ಬ ಉತ್ಯಮ ಕುಕ್ ಕೂಡಾ ಹೌದು. ತಾನು ಕಿಚನ್ ನಲ್ಲಿ ಆಗಾಗ ಕುಕ್ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲೊಂದು ವಿಡಿಯೋ ಇದೆ. ಅವರು ಒಗ್ಗರಣೆ ಹಾಕುತ್ತರುವಂತೆ ಕಾಣುತ್ತಿರುವ ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೊ, ಮೆಣಸಿನಕಾಯಿ ಕಾಣಿಸುತ್ತಿವೆ.
ರೈನಾ ಖುಷಿಯಿಂದ ಕುಕ್ ಮಾಡುತ್ತಿದ್ದರೆ ಅವರ ಮಗಳು ಅವರ ಸುತ್ತಮುತ್ತ ಓಡಾಡಿಕೊಂಡಿದ್ದಾಳೆ. ಅವವ ಅರ್ಧಾಂಗಿನಿ ಪ್ರಿಯಾಂಕಾ ಚೌಧುರಿ ಈ ಸುಂದರ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ಹಿನ್ನೆಲೆಯಲ್ಲಿ ಯಾವುದೋ ಒಂದು ಹಾಡು ಕೇಳಿಬರುತ್ತಿದೆ.
ಈ ಪೋಸ್ಟ್ಗೆ ರೈನಾ ‘ಆಫ್ ಡೇಸ್ ಮೀನ್ಸ್ ಕುಕಿಂಗ್ ಡೇಸ್’ ಎಂಬ ಶೀರ್ಷಿಕೆ ನೀಡಿ, ವಾಟ್ಸ್ ಕುಕಿಂಗ್, ಡಿನ್ನರ್, ಲವ್ ಕುಕಿಂಗ್ ಅಂತ ಹ್ಯಾಷ್ ಟ್ಯಾಗ್ಗಳನ್ನು ನೀಡಿದ್ದಾರೆ.
ಕಳೆದ ಬಾರಿಯ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ ಯುಎಈ ಯಲ್ಲಿ ನಡೆದಾಗಲೂ ರೈನಾ ತಮ್ಮ ಹೊಟೆಲ್ ಕೋಣೆಯ ಕಿಚನ್ನಲ್ಲಿ ಪಾಕಶಾಸ್ತ್ರದಲ್ಲಿನ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದರು.
ಪನ್ನೀರ್ ಸಬ್ಜಿ ಮಾಡಿದ್ದ ಅವರು ಅದರಲ್ಲಿ ಗೆಜ್ಜರಿ, ಕಾಲಿಫ್ಲಾವರ್, ಅಲೂಗಡ್ಡೆ, ಈರುಳ್ಳಿ, ಸೇರಿದಂತೆ ಹತ್ತಾರು ತರಕಾರಿಗಳನ್ನು ಅದಕ್ಕೆ ಸೇರಿಸಿದ್ದರು. ಅವುಗಳಿಗೆ, ಸಾಸಿವೆ, ಕರಿಬೇವುಮ ಮೆಣಸಿನಕಾಯಿ, ಪ್ಯೂರೀ, ಪನೀರ್ ಕ್ಯೂಬ್ ಮೊದಲಾದವುಗಳನ್ನು ಸಹ ಸೇರಿಸಿದ್ದರು.
ಅದಕ್ಕೆ ಶೀರ್ಷಿಕೆ ‘ಕ್ವಾರಂಟಿನ್ ಕುಕಿಂಗ್ ಫಾರ್ ದಿ ಫ್ಯಾಮಿಲಿ,’ ಅಂತ ನೀಡಿ, ಕುಕಿಂಗ್ ಲವರ್ಸ್, ಪುಡೀ, ಎಂಬ ಹ್ಯಾಷ್ ಟ್ಯಾಗ್ಗಳನ್ನು ಉಪಯೋಗಿಸಿದ್ದರು.
ಇದನ್ನೂ ಓದಿ: ಮಹೀ ನಿರ್ಧಾರ ಸರಿಯಾಗಿತ್ತು! ಟೆಸ್ಟ್ ಕ್ರಿಕೆಟ್ಗೆ ಧೋನಿ ಇದಕ್ಕಿದ್ದಂತೆ ವಿದಾಯ ಹೇಳಿದರ ಬಗ್ಗೆ ಕೋಚ್ ರವಿಶಾಸ್ತ್ರಿ ಮಾತು