Virat Kohli: ರೋಹಿತ್ ಶರ್ಮಾ ಶತಕ ಹೊಡೆಯುತ್ತಿದ್ದಂತೆ ವಿರಾಟ್ ಕೊಹ್ಲಿಯ ರಿಯಾಕ್ಷನ್ ವಿಡಿಯೋ ವೈರಲ್
Rohit Sharma: ವಿದೇಶದಲ್ಲಿ ಈವರೆಗೆ ಟೆಸ್ಟ್ನಲ್ಲಿ ಒಂದೂ ಶತಕ ಸಿಡಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ ಸೆಂಚುರಿಗೆ ಕೇವಲ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೆ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಆಟಗಾರರು ಕೂಡ ಕಾದುಕುಳಿತಿದ್ದರು.
ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ (India) ಪುಟಿದೆದ್ದಿದೆ. ಆಂಗ್ಲರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಟೀಮ್ ಇಂಡಿಯಾ (Team India) ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಅದರಲ್ಲೂ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ನಲ್ಲಿ 8ನೇ ಶತಕ ಪೂರೈಸಿದರು. ಅಲ್ಲದೆ ವಿದೇಶಿ ನೆಲದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ನ ಚೊಚ್ಚಲ ಸೆಂಚುರಿ ಬಾರಿಸಿ ಮೆರೆದರು. ರೋಹಿತ್ ಸೆಂಚುರಿಗೆ ಕ್ರೀಡಾಭಿಮಾನಿಗಳು ಮಾತ್ರವಲ್ಲದೆ ಭಾರತ ತಂಡ ಕಾದುಕುಳಿತಿತ್ತು.
ಹೌದು, ವಿದೇಶದಲ್ಲಿ ಈವರೆಗೆ ಟೆಸ್ಟ್ನಲ್ಲಿ ಒಂದೂ ಶತಕ ಸಿಡಿಸಿದ ಹಿಟ್ಮ್ಯಾನ್ ಅರ್ಧಶತಕ ಬಾರಿಸಿ ಔಟ್ ಆಗುತ್ತಿದ್ದರು. ಆದರೆ, ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಹಾಗಾಗಲಿಲ್ಲ. ರೋಹಿತ್ ಶತಕಕ್ಕೆ ಕೇವಲ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೆ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಆಟಗಾರರು ಕೂಡ ಕಾದುಕುಳಿತಿದ್ದರು. ತಮ್ಮದೇ ವಿಶಿಷ್ಠ ಶೈಲಿಯಲ್ಲಿ ಚೆಂಡನ್ನು ಸಿಕ್ಸರ್ಗೆ ಅಟ್ಟುವ ಮೂಲಕ ರೋಹಿತ್ ಸೆಂಚುರಿ ಬಾರಿಸಿದ ವೇಳೆ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಪ್ಲೇಯರ್ಸ್ ಸಂತಸ ಪಟ್ಟರು.
ಅದರಲ್ಲೂ ರೋಹಿತ್ ಬ್ಯಾಟ್ ಎತ್ತಿದ ವೇಳೆ ನಾಯಕ ವಿರಾಟ್ ಕೊಹ್ಲಿ ಹೊರಬಂದು ದೊಡ್ಡದಾಗಿ ನಗು ಬೀರಿ ವಿಶೇಷವಾಗಿ ಸಂಭ್ರಮಿಸಿದರು. ಅಲ್ಲದೆ ರೋಹಿತ್ ಮಡದಿ ರಿತಿಕಾ ಕೂಡ ಎದ್ದುನಿಂತು ಚಪ್ಪಾಳೆ ಹೊಡೆದು ಸಂತಸಪಟ್ಟರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
First century outside India for the Hitman! ? He gets there with a monster six over long on!
Tune into Sony Six (ENG), Sony Ten 3 (HIN), Sony Ten 4 (TAM, TEL) & SonyLIV (https://t.co/AwcwLCPFGm ) now! ?#ENGvINDOnlyOnSonyTen #BackOurBoys #RohitSharma pic.twitter.com/4HDSE276Ow
— Sony Sports (@SonySportsIndia) September 4, 2021
ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ, ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದ ರೋಹಿತ್ ಶರ್ಮಾ 256 ಎಸೆತಗಳನ್ನು ಎದುರಿಸಿ ಒಂದು ಭರ್ಜರಿ ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ 127 ರನ್ ಬಾರಿಸಿದರು. ವಿದೇಶಿ ನೆಲದಲ್ಲಿ ಚೊಚ್ಚಲ ಶತಕದ ಜೊತೆಗೆ ರೋಹಿತ್ ಶರ್ಮಾ ಪ್ರಸಕ್ತ ವರ್ಷದಲ್ಲಿ 1000 ರನ್ ಹಾಗೂ ಟೆಸ್ಟ್ ವೃತ್ತಿ ಜೀವನದಲ್ಲಿ 3000 ರನ್ ಪೂರ್ಣಗೊಳಿಸಿದ ಸಾಧನೆ ಮಾಡಿದರು.
ಸದ್ಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಕೊಹ್ಲಿ ಪಡೆ 3 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿದ್ದು, ಇಂಗ್ಲೆಂಡ್ಗಿಂತ 171 ರನ್ಗಳ ಮುಂದಿದೆ. ಕೆ. ಎಲ್ ರಾಹುಲ್ 46 ರನ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ 127 ಹಾಗೂ ಚೇತೇಶ್ವರ್ ಪೂಜಾರ 61 ರನ್ ಬಾರಿಸಿ ಆಸರೆಯಾದರು. ನಾಯಕ ವಿರಾಟ್ ಕೊಹ್ಲಿ 22 ರನ್ ಗಳಿಸಿ ಹಾಗೂ ರವೀಂದ್ರ ಜಡೇಜಾ 9 ರನ್ ಗಳಿಸಿದ್ದು ಇಂದು ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂದಿನ ದಿನದಾಟದ ಭಾರತಕ್ಕೆ ಮುಖ್ಯವಾಗಿದ್ದು, 300ರ ಆಸುಪಾಸಿನತ್ತ ಮುನ್ನಡೆಯನ್ನು ಕೊಂಡೊಯ್ಯಬೇಕಿದೆ.
Tokyo Paralympics: ಭಾರತಕ್ಕೆ 5ನೇ ಚಿನ್ನ: ಬ್ಯಾಡ್ಮಿಂಟನ್ ಫೈನಲ್ನಲ್ಲಿ ಕೃಷ್ಣ ನಗರ್ಗೆ ರೋಚಕ ಗೆಲುವು
(India vs England: Virat Kohli reaction Viral on social media after Rohit Sharma scored hundred in 4th test)