‘ಫಿಕ್ಸರ್ ಎಂದು ನಿಂದಿಸಿದರು’; ಗೌತಮ್ ಮೇಲೆ ಶ್ರೀಶಾಂತ್ ಗಂಭೀರ ಆರೋಪ! ಹೊಸ ವಿಡಿಯೋ ರಿಲೀಸ್

|

Updated on: Dec 08, 2023 | 9:51 AM

Gautam Gambhir-Sreesanth argument: ಈ ಇಬ್ಬರ ನಡುವೆ ಅಂದು ನಡೆದಿದ್ದು ಏನು ಎಂಬುದು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್​ ಆಗಿದ್ದು, ಇದೀಗ ಈ ಹೊಸ ವೀಡಿಯೊ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಶ್ರೀಶಾಂತ್ ಅವರು, ಗಂಭೀರ್ ನನ್ನನ್ನು ಫಿಕ್ಸರ್...ಫಿಕ್ಸರ್ ಎಂದು ಹೇಗೆ ಹೇಳಬಹುದು ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ.

‘ಫಿಕ್ಸರ್ ಎಂದು ನಿಂದಿಸಿದರು’; ಗೌತಮ್ ಮೇಲೆ ಶ್ರೀಶಾಂತ್ ಗಂಭೀರ ಆರೋಪ! ಹೊಸ ವಿಡಿಯೋ ರಿಲೀಸ್
ಶ್ರೀಶಾಂತ್
Follow us on

ಟೀಂ ಇಂಡಿಯಾದಲ್ಲಿ (Team India) ಕೆಲವು ಕ್ರಿಕೆಟಿಗರು ಮೈದಾನದಲ್ಲಿ ತಮ್ಮ ಪ್ರದರ್ಶನದ ಹೊರತಾಗಿ, ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಿರಾಟ್ ಕೊಹ್ಲಿ (Virat Kohli) ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರಿಗಿಂತ ಮೊದಲು ಗೌತಮ್ ಗಂಭೀರ್ (Gautam Gambhir) ಮತ್ತು ಎಸ್ ಶ್ರೀಶಾಂತ್ (S Sreesanth) ಈ ರೀತಿಯ ವರ್ತನೆಗೆ ಉದಾಹರಣೆಗಳಾಗಿದ್ದರು. ಈ ಇಬ್ಬರು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮೈದಾನದಲ್ಲಿ ಅದ್ಭುತ ಪ್ರದರ್ಶನವನ್ನು ತೋರಿಸುವುದರ ಜೊತೆಗೆ, ಎದುರಾಳಿ ಆಟಗಾರರೊಂದಿಗಿನ ಸಂಘರ್ಷದಿಂದಲೂ ಸುದ್ದಿಯಲ್ಲಿರುತ್ತಿದ್ದರು. ಆದರೆ ಇದೀಗ ಈ ಇಬ್ಬರೂ ಕ್ರಿಕೆಟಿಗರ ನಡುವೆಯೇ ಜಗಳ ಏರ್ಪಟ್ಟಿದೆ. ಇದರಲ್ಲಿ ವೇಗಿ ಶ್ರೀಶಾಂತ್, ಬ್ಯಾಟರ್ ಗೌತಮ್ ಗಂಭೀರ್ ವಿರುದ್ಧ ಕೆಲವು ದೊಡ್ಡ ಆರೋಪಗಳನ್ನು ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಗಂಭೀರ್ ಮತ್ತು ಶ್ರೀಶಾಂತ್ ಇತ್ತೀಚಿನ ದಿನಗಳಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇದರಲ್ಲಿ ಗಂಭೀರ್ ಇಂಡಿಯಾ ಕ್ಯಾಪಿಟಲ್ಸ್ ಪರ ಮತ್ತು ಶ್ರೀಶಾಂತ್ ಗುಜರಾತ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. ಬುಧವಾರ ಡಿಸೆಂಬರ್ 6 ರಂದು ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಗಂಭೀರ್, ಶ್ರೀಶಾಂತ್ ಬೌಲ್ ಮಾಡಿದ ಓವರ್​ನಲ್ಲಿ ಸತತ ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಇಲ್ಲಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಇದು ತೀವ್ರ ಸ್ವರೂಪ ಪಡೆದುಕೊಂಡಿತು.

LLC 2023: ಲೆಜೆಂಡ್ಸ್ ಲೀಗ್​ನಲ್ಲಿ ಗಂಭೀರ್-ಶ್ರೀಶಾಂತ್ ನಡುವೆ ಮಾತಿನ ಚಕಮಕಿ: ವಿಡಿಯೋ ನೋಡಿ

ಫಿಕ್ಸರ್ ಎಂದು ನಿಂದನೆ

ನಿವೃತ್ತಿಯ ನಂತರವೂ ಈ ನಡುವೆ ಈ ರೀತಯ ಜಗಳ ನಡೆದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪಂದ್ಯದ ಬಳಿಕ ಶ್ರೀಶಾಂತ್ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಗಂಭೀರ್ ನನ್ನನ್ನು ಫಿಕ್ಸರ್-ಫಿಕ್ಸರ್ ಎಂದು ಕರೆಯುತ್ತಿದ್ದಾರೆ. ಇದು ತನಗೆ ಅವಮಾನಕರವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಗಂಭೀರ್ ಕೂಡ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸಾಲಿನ ತಿರುಗೇಟು ನೀಡಿದ್ದರು. ಇದೀಗ ಈ ಪ್ರಕರಣದಲ್ಲಿ ಸ್ಟಂಪ್ ಮೈಕ್‌ನ ರೆಕಾರ್ಡಿಂಗ್ ಸಿಕ್ಕಿದ್ದು, ಅದರೊಂದಿಗೆ ಹೊಸ ವೀಡಿಯೊ ವೈರಲ್ ಆಗುತ್ತಿದೆ.

ಸ್ಟಂಪ್ ಮೈಕ್‌ನಲ್ಲಿ ಏನು ದಾಖಲಾಗಿದೆ?

ಈ ಇಬ್ಬರ ನಡುವೆ ಅಂದು ನಡೆದಿದ್ದು ಏನು ಎಂಬುದು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್​ ಆಗಿದ್ದು, ಇದೀಗ ಈ ಹೊಸ ವೀಡಿಯೊ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಶ್ರೀಶಾಂತ್ ಅವರು, ಗಂಭೀರ್ ನನ್ನನ್ನು ಫಿಕ್ಸರ್…ಫಿಕ್ಸರ್ ಎಂದು ಹೇಗೆ ಹೇಳಬಹುದು ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ಆದರೆ ಗದ್ದಲದಿಂದಾಗಿ ಗಂಭೀರ್ ಈ ಬಗ್ಗೆ ಏನು ಹೇಳಿದ್ದಾರೆ ಎಂಬುದು ಕೇಳಿಸಿಲ್ಲ.

ಈ ವಿಡಿಯೋ ಹರಿಬಿಟ್ಟ ಬಳಿಕ ಮಾತನಾಡಿರುವ ಶ್ರೀಶಾಂತ್, ‘ಗಂಭೀರ್ ನನ್ನನ್ನು ನಿಂದಿಸಿದರು ಮತ್ತು ಫಿಕ್ಸರ್ ಎಂದು ಕರೆಯಲು ಪ್ರಾರಂಭಿಸಿದರು. ಅಂಪೈರ್‌ಗಳ ಮುಂದೆಯೂ ಗಂಭೀರ್ ತಮ್ಮ ವಿರುದ್ಧ ಇದೇ ರೀತಿಯ ಭಾಷೆ ಬಳಸಿದರು ಎಂದು ಆರೋಪಿಸಿದ್ದಾರೆ.

ಐಪಿಎಲ್​ನಲ್ಲಿ ಕಳ್ಳಾಟ

ವಾಸ್ತವವಾಗಿ 2013ರ ಐಪಿಎಲ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ನಂತರ ಬಿಸಿಸಿಐ ಶ್ರೀಶಾಂತ್ ಮೇಲೆ ಆಜೀವ ನಿಷೇಧ ಹೇರಿತ್ತು. ಆದಾಗ್ಯೂ, 2019 ರಲ್ಲಿ, ಶ್ರೀಶಾಂತ್‌ಗೆ ಸುಪ್ರೀಂ ಕೋರ್ಟ್‌ನಿಂದ ಕ್ಲೀನ್ ಚಿಟ್ ಸಿಕ್ಕಿತು ಮತ್ತು ಅವರ ನಿಷೇಧವನ್ನು 7 ವರ್ಷಕ್ಕೆ ಇಳಿಸಲಾಯಿತು. ಇದಾದ ನಂತರವೇ ಶ್ರೀಶಾಂತ್ ಕ್ರಿಕೆಟ್‌ಗೆ ಮರಳಿದ್ದರು.

ಗಂಭೀರ್​ನನ್ನು ಹೊಗಳಿದ್ದ ಶ್ರೀಶಾಂತ್

ಇಬ್ಬರು ಆಟಗಾರರ ನಡುವಿನ ಜಗಳದ ನಂತರ, ಶ್ರೀಶಾಂತ್ ಅವರ ಹಳೆಯ ವೀಡಿಯೊ ಕೂಡ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ವಕಪ್‌ಗೆ ಸಂಬಂಧಿಸಿದ ಚರ್ಚೆಯಲ್ಲಿ ಇಬ್ಬರೂ ಆಟಗಾರರು ಉಪಸ್ಥಿತರಿದ್ದರು. ಈ ಸಮಯದಲ್ಲಿ, ಶ್ರೀಶಾಂತ್, ಗಂಭೀರ್ ಅವರನ್ನು ಹೊಗಳಿ ಮಾತನಾಡಿದಲ್ಲದೆ, ಅವರು ಪ್ರತಿಯೊಬ್ಬ ಆಟಗಾರನನ್ನು ಬೆಂಬಲಿಸುತ್ತಾನೆ ಎಂದು ಶ್ರೀಶಾಂತ್ ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 am, Fri, 8 December 23