LLC 2023: ಲೆಜೆಂಡ್ಸ್ ಲೀಗ್​ನಲ್ಲಿ ಗಂಭೀರ್-ಶ್ರೀಶಾಂತ್ ನಡುವೆ ಮಾತಿನ ಚಕಮಕಿ: ವಿಡಿಯೋ ನೋಡಿ

Gautam Gambhir vs S Sreesanth Fight: ಲೆಜೆಂಡ್ಸ್ ಕ್ರಿಕೆಟ್‌ ಲೀಗ್​ನಲ್ಲಿ ಬುಧವಾರ ನಡೆದ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ಗೌತಮ್ ಗಂಭೀರ್ ಮತ್ತು ಎಸ್. ಶ್ರೀಶಾಂತ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

LLC 2023: ಲೆಜೆಂಡ್ಸ್ ಲೀಗ್​ನಲ್ಲಿ ಗಂಭೀರ್-ಶ್ರೀಶಾಂತ್ ನಡುವೆ ಮಾತಿನ ಚಕಮಕಿ: ವಿಡಿಯೋ ನೋಡಿ
Gautam Gambhir S Sreesanth Fight
Follow us
Vinay Bhat
|

Updated on:Dec 07, 2023 | 8:43 AM

ಭಾರತ ತಂಡವನ್ನು ಎರಡು ಬಾರಿ ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ (Gautam Gambhir) ಈಗ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಗಂಭೀರ್ ಪ್ರಸ್ತುತ ಲೆಜೆಂಡ್ಸ್ ಕ್ರಿಕೆಟ್‌ ಲೀಗ್​ನಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದು, ಭರ್ಜರಿ ರನ್ ಗಳಿಸುತ್ತಿದ್ದಾರೆ. ಬುಧವಾರ ಈ ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಗಂಭೀರ್ ತಮ್ಮ ಹಳೆಯ ಖದರ್​ನಲ್ಲಿ ಕಾಣಿಸಿಕೊಂಡಿದ್ದು ಮಾತ್ರವಲ್ಲದೆ ಎದುರಾಲಿ ಆಟಗಾರ ಎಸ್. ಶ್ರೀಶಾಂತ್ ಜೊತೆ ಮಾತಿನ ಚಕಮಕಿಗೆ ಇಳಿದಿದ್ದಾರೆ.

ಈ ಪಂದ್ಯದಲ್ಲಿ ಗಂಭೀರ್ ಪಡೆ ಮೊದಲು ಬ್ಯಾಟಿಂಗ್ ಮಾಡಿತು. ಪಂದ್ಯದ ಎರಡನೇ ಓವರ್ ಅನ್ನು ಶ್ರೀಶಾಂತ್ ಬೌಲ್ ಮಾಡಿದರು. ಶ್ರೀಶಾಂತ್ ಓವರ್​ನ ಎರಡನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಗಂಭೀರ್ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ, ಮುಂದಿನ ಎಸೆತದಲ್ಲಿ ರನ್ ಬರಲಿಲ್ಲ. ಈ ವೇಳೆ ಶ್ರೀಶಾಂತ್ ಅವರು ಗಂಭೀರ್​ಗೆ ಏನೋ ಹೇಳಿದ್ದಾರೆ. ಇದರಿಂದ ಗಂಭೀರ್ ಕೋಪಕೊಂಡು ಶ್ರೀಶಾಂತ್ ಕಡೆ ದಿಟ್ಟಿಸಿ ನೋಡಿದ್ದಾರೆ.

ಇದನ್ನೂ ಓದಿ
Image
ಯಾವಾಗ ನನಗೆ ನಡೆಯಲು ಆಗುವುದಿಲ್ಲವೊ ಅಲ್ಲಿಯವರೆಗೆ ಐಪಿಎಲ್ ಆಡುತ್ತೇನೆ: ಮ್ಯಾ
Image
ಗುಜರಾತ್ ಜೈಂಟ್ಸ್​ ವಿರುದ್ಧ ಇಂಡಿಯಾ ಕ್ಯಾಪಿಟಲ್ಸ್​ ತಂಡಕ್ಕೆ ರೋಚಕ ಜಯ
Image
IND vs ENG: ಟೀಮ್ ಇಂಡಿಯಾಗೆ ಸೋಲುಣಿಸಿದ ಇಂಗ್ಲೆಂಡ್
Image
IPL 2024: 3 ತಂಡಗಳಿಗೆ ಹೊಸ ನಾಯಕ..!

ಗಂಭೀರ್-ಶ್ರೀಶಾಂತ್ ನಡುವಣ ವಾಗ್ವಾದದ ವಿಡಿಯೋ ಇಲ್ಲಿದೆ:

ಗಂಭೀರ್-ಶ್ರೀಶಾಂತ್ ಇಬ್ಬರ ನಡುವೆ ಸ್ವಲ್ಪ ಮಟ್ಟಿನ ವಾಗ್ವಾದ ಕಾಣಿಸಿಕೊಂಡಿತು. ಈ ಪಂದ್ಯದಲ್ಲಿ ಗಂಭೀರ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. 30 ಎಸೆತಗಳನ್ನು ಎದುರಿಸಿದ ಅವರು ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಇದಕ್ಕೂ ಮುನ್ನ ಭಿಲ್ವಾರಾ ಕಿಂಗ್ಸ್ ವಿರುದ್ಧ ಗಂಭೀರ್ 63 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

IPL 2024: ಮೊಹಮ್ಮದ್ ಶಮಿಗೆ ತೆರೆಮರೆಯಲ್ಲೇ ಬಿಗ್ ಆಫರ್..!

ಭಾರತ 2007 ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಪಾಕಿಸ್ತಾನದ ವಿರುದ್ಧ ಆಡಿದ ಫೈನಲ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ ತಂಡವನ್ನು ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. 2011ರಲ್ಲಿ ಭಾರತ ಏಕದಿನ ವಿಶ್ವಕಪ್‌ ಗೆದ್ದುಕೊಂಡಿದ್ದ ಸಂದರ್ಭ ಕೂಡ ಫೈನಲ್‌ನಲ್ಲಿ ಗಂಭೀರ್ 97 ರನ್‌ಗಳ ಇನಿಂಗ್ಸ್‌ ಆಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು. ಈ ಎರಡೂ ಪಂದ್ಯಗಳಲ್ಲಿ ಶ್ರೀಶಾಂತ್ ಕೂಡ ಆಡಿದ್ದರು.

ಈ ಪಂದ್ಯದಲ್ಲಿ ಗಂಭೀರ್ ಅವರ 51 ರನ್, ಪೀಟರ್ಸನ್ 26 ರನ್, ಬೆನ್ ಡಕ್ 30 ರನ್ ಹಾಗೂ ಭರತ್ ಚಿಪ್ಲಿ 35 ರನ್ ಬಾರಿಸಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಇಂಡಿಯಾ ಕ್ಯಾಪಿಟಲ್ಸ್​ ತಂಡ 223 ರನ್ ಕಲೆಹಾಕಿತು. ಗುರಿಯನ್ನು ಬೆನ್ನತ್ತಿದ ಗುಜರಾತ್ ಜೈಂಟ್ಸ್ ಪರ ಕ್ರಿಸ್ ಗೇಲ್​ 84 ರನ್, ಓ ಬ್ರಿಯಾನ್ 57 ರನ್ ಸಿಡಿಸಿದರು. ಕೊನೆಯ ಓವರ್​ನಲ್ಲಿ ಗುಜರಾತ್ ತಂಡಕ್ಕೆ 20 ರನ್​ಗಳು ಬೇಕಿತ್ತು. ಆದರೆ ಅಂತಿಮ ಓವರ್​ನಲ್ಲಿ ಕೇವಲ 8 ರನ್ ಕಲೆಹಾಕಿದ ಪರಿಣಾಮ ಇಂಡಿಯಾ ಕ್ಯಾಪಿಟಲ್ಸ್ ರೋಚಕ ಜಯ ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 am, Thu, 7 December 23