‘ಶಾಂತ’ ಸಾರ್ವಕಾಲಿಕ ಇಲೆವೆನ್ ಹೆಸರಿಸಿದ ಶ್ರೀಶಾಂತ್

ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್ ಅವರ ಹೆಸರಿಸಿರುವ ಆಲ್​ಟೈಮ್ ಇಲೆವೆನ್​ನಲ್ಲಿ ಸೌರವ್ ಗಂಗೂಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ 5ನೇ ಸ್ಥಾನ ನೀಡಿದ್ದಾರೆ. ಹಾಗೆಯೇ ಬಾಂಗ್ಲಾದೇಶ್ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು 6ನೇ ಕ್ರಮಾಂಕಕ್ಕೆ ಹೆಸರಿಸಿದ್ದಾರೆ.

'ಶಾಂತ' ಸಾರ್ವಕಾಲಿಕ ಇಲೆವೆನ್ ಹೆಸರಿಸಿದ ಶ್ರೀಶಾಂತ್
Sreesanth
Follow us
|

Updated on:Sep 15, 2024 | 2:15 PM

ಟೀಮ್ ಇಂಡಿಯಾದ ಮಾಜಿ ಆಟಗಾರ ಶಾಂತಕುಮಾರನ್ ಶ್ರೀಶಾಂತ್ ವಿಶ್ವ ಕ್ರಿಕೆಟ್ ಕಂಡಂತಹ ಆಕ್ರೋಶಭರಿತ ಆಟಗಾರರ ಇಲೆವೆನ್ ಹೆಸರಿಸಿದ್ದಾರೆ. ಆದರೆ ಈ ಇಲೆವೆನ್​ಗೆ ಅವರು ನೀಡಿರುವ ಹೆಸರು ಸಾರ್ವಕಾಲಿಕ ಶಾಂತ ಆಟಗಾರರ ಆಡುವ ಬಳಗ ಎಂಬುದು ವಿಶೇಷ. ಮೈದಾನದಲ್ಲಿ ತಮ್ಮ ಕೋಪ-ತಾಪಗಳಿಂದ ಸುದ್ದಿಯಲ್ಲಿದ್ದ ಆಟಗಾರರನ್ನು ಒಳಗೊಂಡಿರುವ ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು ಇರುವುದು ವಿಶೇಷ. ಅದರಲ್ಲೂ ಶ್ರೀಶಾಂತ್ ತಮ್ಮನ್ನೂ ಕೂಡ ಆಯ್ಕೆ ಮಾಡಿಕೊಂಡಿದ್ದಾರೆ.

ವಿಶೇಷ ಎಂದರೆ ಈ ತಂಡದ ನಾಯಕರಾಗಿ ಆಯ್ಕೆ ಮಾಡಿಕೊಂಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು. ಇನ್ನು ಆರಂಭಿಕರಾಗಿ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಯನ್ನು ಹೆಸರಿಸಿದ್ದಾರೆ. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್​ಗೆ ಸ್ಥಾನ ನೀಡಿದ್ದಾರೆ.

ಇನ್ನು ಸೌರವ್ ಗಂಗೂಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡರೆ, ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ 5ನೇ ಸ್ಥಾನ ನೀಡಿದ್ದಾರೆ. ಹಾಗೆಯೇ ಬಾಂಗ್ಲಾದೇಶ್ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು 6ನೇ ಕ್ರಮಾಂಕಕ್ಕೆ ಹಾಗೂ ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್ ಅವರನ್ನು 7ನೇ ಕ್ರಮಾಂಕದಲ್ಲಿ ಹೆಸರಿಸಿದ್ದಾರೆ.

ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!

ಹಾಗೆಯೇ ಸ್ಪಿನ್ನರ್ ಆಗಿ ಹರ್ಭಜನ್ ಸಿಂಗ್ ಅವರನ್ನು ಹೆಸರಿಸಿರುವ ಶ್ರೀಶಾಂತ್ ವೇಗಿಗಳಾಗಿ ಪಾಕಿಸ್ತಾನದ ಶೊಯೇಬ್ ಅಖ್ತರ್ ಹಾಗೂ ಸೌತ್ ಆಫ್ರಿಕಾದ ಆಂಡ್ರೆ ನೆಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರ ಜೊತೆಗೆ 11ನೇ ಆಟಗಾರನಾಗಿ ಶ್ರೀಶಾಂತ್ ಕೂಡ ಈ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಶಾಂತಕುಮಾರ್ ಶ್ರೀಶಾಂತ್ ಅವರ ಶಾಂತವಲ್ಲದ ಇಲೆವೆನ್ ಈ ಕೆಳಗಿನಂತಿದೆ…

  1. ಗೌತಮ್ ಗಂಭೀರ್ (ಭಾರತ)
  2. ವಿರಾಟ್ ಕೊಹ್ಲಿ (ಭಾರತ)
  3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
  4. ಸೌರವ್ ಗಂಗೂಲಿ (ನಾಯಕ/ಭಾರತ)
  5. ಶಾಹಿದ್ ಅಫ್ರಿದಿ (ಪಾಕಿಸ್ತಾನ್)
  6. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)
  7. ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)
  8. ಹರ್ಭಜನ್ ಸಿಂಗ್ (ಭಾರತ)
  9. ಶೊಯೆಬ್ ಅಖ್ತರ್ (ಪಾಕಿಸ್ತಾನ್)
  10. ಆಂಡ್ರೆ ನೆಲ್ (ಸೌತ್ ಆಫ್ರಿಕಾ)
  11. ಶ್ರೀಶಾಂತ್ (ಭಾರತ)

Published On - 2:13 pm, Sun, 15 September 24