
ಹೈದರಾಬಾದ್ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಮಣಿಸಿದ ಲಕ್ನೋ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿದೆ.
ಅಂತಿಮ ಹಂತದಲ್ಲಿ ಹೈದರಾಬಾದ್ ಹಳಿತಪ್ಪಿದೆ
ಭುವಿ ಬೌಲ್ ಮಾಡಿದ 18ನೇ ಓವರ್ನ ಕೊನೆಯ 2 ಎಸೆತಗಳಲ್ಲಿ ಪೂರನ್ 2 ಬೌಂಡರಿ ಬಾರಿಸಿದರು.
ನಟರಾಜನ್ ಬೌಲ್ ಮಾಡಿದ 5ನೇ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ ಕಟ್ಟಿದ ಪ್ರೇರಕ್ ನಂತರದ ಎಸೆತವನ್ನು ಕೀಪರ್ ಹಿಂದೆ ಬೌಂಡರಿ ಬಾರಿಸಿದರು.
ಲಕ್ನೋ 159/3
ಸ್ಟೋಯ್ನಿಸ್ ವಿಕೆಟ್ ಬಳಿಕ ಬಂದ ಪೂರನ್ ಎದುರಿಸಿದ 3 ಎಸೆತಗಳಲ್ಲೂ ಸತತ ಮೂರು ಸಿಕ್ಸರ್ ಸಿಡಿಸಿದರು.
ಅಭಿಷೇಕ್ ಬೌಲ್ ಮಾಡಿದ 16ನೇ ಓವರ್ನಲ್ಲಿ ಒಟ್ಟು 5 ಸಿಕ್ಸರ್ ಮೂಲಕ 31 ರನ್ ಬಂದವು
ಅಭಿಷೇಕ್ ಬೌಲ್ ಮಾಡಿದ 16ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಸ್ಟೋಯ್ನಿಸ್, ಮುಂದಿನ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಲಕ್ನೋ 127/3
ಭುವಿ ಬೌಲ್ ಮಾಡಿದ 15ನೇ ಓವರ್ನ 4ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಮಂಕಾಡ್ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು.
ಅಲ್ಲದೆ ಈ ಓವರ್ನ ಮುಂದಿನ ಎಸೆತದಲ್ಲಿ ಸ್ಟೋಯ್ನಿಸ್ ಸಿಕ್ಸರ್ ಕೂಡ ಬಾರಿಸಿದರು.
ಫಾರೂಕಿ ಬೌಲ್ ಮಾಡಿದ 13ನೇ ಓವರ್ನ 4ನೇ ಎಸೆತದಲ್ಲಿ ಮಂಕಾಡ್ ಬೌಂಡರಿ ಬಾರಿಸಿದರು.
13 ಓವರ್ ಅಂತ್ಯಕ್ಕೆ 85/2
ಅಭಿಷೇಕ್ ಬೌಲ್ ಮಾಡಿದ 10ನೇ ಓವರ್ನ 4ನೇ ಎಸೆತದಲ್ಲಿ ಮಂಕಾಡ್ ಡೀಪ್ ಕವರ್ನಲ್ಲಿ ಬೌಂಡರಿ ಬಾರಿಸಿದರು.
9ನೇ ಓವರ್ನ 2ನೇ ಎಸೆತದಲ್ಲಿ ಡಿ ಕಾಕ್ ಕ್ಯಾಚಿತ್ತು ಔಟಾದರು.
ಮಯಾಂಕ್ ಮಾರ್ಕಂಡೆಗೆ ಈ ವಿಕೆಟ್ ಸಿಕ್ಕಿತು.
ಲಕ್ನೋ 52/2
ಲಕ್ನೋ 8ನೇ ಓವರ್ನ ಕೊನೆಯ ಎಸೆತದಲ್ಲಿ ಸಿಂಗಲ್ ಮೂಲಕ ಅರ್ಧಶತಕ ಪೂರೈಸಿತು
ಈ ಓವರ್ನಲ್ಲಿ ಯಾವುದೇ ಬಿಗ್ ಶಾಟ್ ಬರಲಿಲ್ಲ.
ಕುಂಟುತ್ತ ಸಾಗುತ್ತಿದ್ದ ಲಕ್ನೋ ಇನ್ನಿಂಗ್ಸ್ ವೇಗ ಪಡೆದುಕೊಂಡಿದೆ.
7ನೇ ಓವರ್ನ 5ನೇ ಎಸೆತದಲ್ಲಿ ಡಿ ಕಾಕ್ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಂತು.
7 ಓವರ್ ಅಂತ್ಯಕ್ಕೆ 44/1
ಪವರ್ ಪ್ಲೇ ಕೊನೆಯ ಓವರ್ನಲ್ಲಿ 10 ರನ್ ಬಂದವು
ಈ ಓವರ್ನಲ್ಲಿ ಪ್ರೇರಕ್ ಮಂಕಡ್ ಸತತ 2 ಬೌಂಡರಿ ಬಾರಿಸಿದರು
6 ಓವರ್ ಅಂತ್ಯಕ್ಕೆ 30/1
ಫಿಲಿಪ್ಸ್ ಬೌಲ್ ಮಾಡಿದ 3ನೇ ಓವರ್ನ 2ನೇ ಎಸೆತದಲ್ಲಿ ಆರಂಭಿಕ ಮೇಯರ್ಸ್ ಮಿಡ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
ಈ ಓವರ್ನಲ್ಲಿ 1 ಬೌಂಡರಿ ಕೂಡ ಬಂತು.
4 ಓವರ್ ಅಂತ್ಯಕ್ಕೆ 16/1
ಲಕ್ನೋ ಇನ್ನಿಂಗ್ಸ್ ಆರಂಭವಾಗಿದ್ದು, ಮೇಯರ್ಸ್ ಹಾಗೂ ಡಿ ಕಾಕ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಭುವಿ ಓವರ್ನಲ್ಲಿ ಕೇವಲ 2 ರನ್ ಮಾತ್ರ ಬಂತು
20ನೇ ಓವರ್ನಲ್ಲಿ ಸಮದ್ 1 ಸಿಕ್ಸರ್ ಬಾರಿಸಿದ್ದು ಬಿಟ್ಟರೆ ಮತ್ತ್ಯಾವುದು ಬಿಗ್ ಶಾಟ್ ಬರಲಿಲ್ಲ.
20 ಓವರ್ ಅಂತ್ಯಕ್ಕೆ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು.
19ನೇ ಓವರ್ನ ಕೊನೆಯ ಎಸೆತದಲ್ಲಿ ಕ್ಲಾಸೆನ್ ಲಾಂಗ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
ಇದೇ ಓವರ್ನಲ್ಲಿ 12 ರನ್ ಕೂಡ ಬಂದವು
ಅಲ್ಲದೆ ನೋ ಬಾಲ್ ವಿವಾದವೂ ಕಂಡು ಬಂತು.
ಹಾಗೆಯೇ ಯಾವುದೋ ಕಾರಣದಿಂದ ಕೆಲ ಕಾಲ ಆಟ ಕೂಡ ಸ್ಥಗಿತಕೊಂಡಿತ್ತು.
18ನೇ ಓವರ್ ಬೌಲ್ ಮಾಡಿದ ಯಶ್ ಹೆಚ್ಚಿನ ರನ್ ನಿಡಲಿಲ್ಲ
ಈ ಓವರ್ನ ಕೊನೆಯ ಎಸೆತವನ್ನು ಸಮದ್ ಕೀಪರ್ ತಲೆಯ ಮೇಲೆ ಬೌಂಡರಿಗಟ್ಟಿದರು
17ನೇ ಓವರ್ನಲ್ಲಿ ಹೈದರಾಬಾದ್ 150 ರನ್ ಪೂರೈಸಿತು
ಕೃನಾಲ್ ಎಸೆದ ಈ ಓವರ್ನ 4ನೇ ಎಸೆತವನ್ನು ಬೌಲರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದ ಸಮದ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಅಮಿತ್ ಬೌಲ್ ಮಾಡಿದ 16ನೇ ಓವರ್ನ 2 ಮತ್ತು 3 ನೇ ಎಸೆತವನ್ನು ಕ್ಲಾಸೆನ್ ಸಿಕ್ಸರ್ಗಟ್ಟಿದರು.
ಈ ಓವರ್ನಲ್ಲಿ 15 ರನ್ ಬಂದವು
16 ಓವರ್ ಅಂತ್ಯಕ್ಕೆ 145/5
ಯಶ್ ಬೌಲ್ ಮಾಡಿದ 14ನೇ ಓವರ್ನ 3ನೇ ಎಸೆತವನ್ನು ಸಮದ್ ಲಾಂಗ್ ಆಫ್ ಕಡೆ ಸಿಕ್ಸರ್ಗಟ್ಟಿದರು.
14 ಓವರ್ ಅಂತ್ಯಕ್ಕೆ 128/5
ಮಾರ್ಕ್‌ರಾಮ್ ಔಟ್ ವಿಕೆಟ್ ಬಳಿಕ ಬಂದ ಫಿಲಿಪ್ಸ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ
ಕೃನಾಲ್ ಎಸೆತದಲ್ಲಿ ಫಿಲಿಪ್ಸ್ ಕ್ಲೀನ್ ಬೌಲ್ಡ್ ಆದರು.
ಹೈದರಾಬಾದ್ ನಾಯಕ ಮತ್ತೊಮ್ಮೆ ವಿಫಲ
13ನೇ ಓವರ್ನ ಮೊದಲ ಎಸೆತದಲ್ಲಿ ಮಾರ್ಕ್‌ರಾಮ್ ಸ್ಟಂಪ್ ಔಟ್ ಆದರು
ಕೃನಾಲ್ ಪಾಂಡ್ಯಗೆ ಈ ವಿಕೆಟ್ ಸಿಕ್ಕಿತು
ಹೈದರಾಬಾದ್ 115/4
ಬಿಷ್ಣೋಯಿ ಬೌಲ್ ಮಾಡಿದ 12ನೇ ಓವರ್ನ 3ನೇ ಎಸೆತವನ್ನು ಕ್ಲಾಸೆನ್ ಲಾಂಗ್ ಆನ್ನಲ್ಲಿ ಸಿಕ್ಸರ್ಗಟ್ಟಿದರು. ಅಲ್ಲದೆ ಈ ಓವರ್ನ ಮೊದಲ ಎಸೆತದಲ್ಲೂ ಬೌಂಡರಿ ಬಂತು
12 ಓವರ್ ಅಂತ್ಯಕ್ಕೆ 115/3
11ನೇ ಓವರ್ನಲ್ಲಿ 2 ರನ್ ತೆಗೆದುಕೊಳ್ಳುವ ಮೂಲಕ ಮಾಕ್ರ್ರಾಮ್ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದ್ದಾರೆ.
ಬಿಷ್ಣೋಯಿ ಬೌಲ್ ಮಾಡಿದ 10ನೇ ಓವರ್ನಲ್ಲಿ 1 ಬೌಂಡರಿ ಬಂತು
10 ಓವರ್ ಅಂತ್ಯಕ್ಕೆ 94/3
9ನೇ ಓವರ್ನಲ್ಲಿ ಹೈದರಾಬಾದ್ 3ನೇ ವಿಕೆಟ್ ಕಳೆದುಕೊಂಡಿದೆ
ಅಮಿತ್ ಬೌಲ್ ಮಾಡಿದ 9ನೇ ಓವರ್ನ 4ನೇ ಎಸೆತದಲ್ಲಿ ಅನ್ಮೋಲ್‌ಪ್ರೀತ್ ಬೌಲರ್ಗೆ ಕ್ಯಾಚಿತ್ತು ಔಟಾದರು.
ಅನ್ಮೋಲ್‌ಪ್ರೀತ್ 36 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.
ಅಮಿತ್ ಮಿಶ್ರಾ ಬೌಲ್ ಮಾಡಿದ 9ನೇ ಓವರ್ನ 2ನೇ ಎಸೆತದಲ್ಲಿ ಮಾರ್ಕ್‌ರಾಮ್ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿದರು.
ಯುದ್ವೀರ್ ಬೌಲ್ ಮಾಡಿದ 8ನೇ ಓವರ್ನ 4ನೇ ಎಸೆತದಲ್ಲಿ ಐಡೆನ್ ಮಾರ್ಕ್‌ರಾಮ್ ಬೌಲರ್ ತಲೆಯ ಮೇಲೆ ಬೌಂಡರಿ ಬಾರಿಸಿದರು. ಹಾಗೆಯೇ ಕೊನೆಯ ಎಸೆತದಲ್ಲೂ ಬೌಂಡರಿ ಬಂತು
8 ಓವರ್ ಅಂತ್ಯಕ್ಕೆ 73/2
ಯಶ್ ಬೌಲ್ ಮಾಡಿದ 6ನೇ ಓವರ್ನಲ್ಲಿ ಹೈದರಾಬಾದ್ 2ನೇ ವಿಕೆಟ್ ಕಳೆದುಕೊಂಡಿತು.
ಓವರ್ನ 4ನೇ ಎಸೆತದಲ್ಲಿ ತ್ರಿಪಾಠಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು
ಹೈದರಾಬಾದ್ 56/2
5ನೇ ಓವರ್ನಲ್ಲೇ ಹೈದರಾಬಾದ್ ಅರ್ಧಶತಕ ಪೂರೈಸಿದೆ
ಅವೇಶ್ ಬೌಲ್ ಮಾಡಿದ ಈ ಓವರ್ನಲ್ಲಿ 18 ರನ್ ಬಂದವು
ಈ ಓವರ್ನಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ ಬರೋಬ್ಬರಿ 4 ಬೌಂಡರಿ ಬಾರಿಸಿದರು.
ಕೃನಾಲ್ ಬೌಲ್ ಮಾಡಿದ 4ನೇ ಓವರ್ನಲ್ಲಿ 11 ರನ್ ಬಂದವು
ಈ ಓವರ್ನಲ್ಲಿ ತ್ರಿಪಾಠಿ 2 ಬೌಂಡರಿ ಬಾರಿಸಿದರು
4 ಓವರ್ ಅಂತ್ಯಕ್ಕೆ 37/1
ಯುದ್ವೀರ್ ಬೌಲ್ ಮಾಡಿದ 3ನೇ ಓವರ್ನ ಮೊದಲ ಎಸೆತದಲ್ಲಿ ಅಭಿಷೇಕ್ ಶರ್ಮಾ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಮೇಯರ್ಸ್ ಬೌಲ್ ಮಾಡಿದ 2ನೇ ಓವರ್ನಲ್ಲಿ 2 ಬೌಂಡರಿ ಬಂದವು.
ಹೈದರಾಬಾದ್ 2 ಓವರ್ ಅಂತ್ಯಕ್ಕೆ 19/0
ಹೈದರಾಬಾದ್ ಇನ್ನಿಂಗ್ಸ್ ಆರಂಭವಾಗಿದೆ.
ಅನ್ಮೋಲ್‌ಪ್ರೀತ್ ಸಿಂಗ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದ್ದಾರೆ
ಯದ್ವೀರ್ ಬೌಲ್ ಮಾಡಿದ ಮೊದಲ ಓವರ್ನಲ್ಲಿ ಅನ್ಮೋಲ್‌ಪ್ರೀತ್ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರು.
ಅನ್ಮೋಲ್‌ಪ್ರೀತ್ ಸಿಂಗ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್‌ರಾಮ್, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ
ಕ್ವಿಂಟನ್ ಡಿ ಕಾಕ್, ಕೈಲ್ ಮೈಯರ್ಸ್, ಕೃನಾಲ್ ಪಾಂಡ್ಯ, ಪ್ರೇರಕ್ ಮಂಕಾಡ್, ಮಾರ್ಕಸ್ ಸ್ಟಾಯಿನಿಸ್, ನಿಕೋಲಸ್ ಪೂರನ್, ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ವೀರ್ ಸಿಂಗ್, ಆವೇಶ್ ಖಾನ್.
ಟಾಸ್ ಗೆದ್ದ ಹೈದರಾಬಾದ್ ನಾಯಕ ಲಕ್ನೋ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:02 pm, Sat, 13 May 23