
ಇಂದು ನಡೆದ ಮೊದಲ ಡಬಲ್ ಹೆಡರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಆಡಿದ ಮೊದಲ ಪಂದ್ಯದಲ್ಲೇ 72 ರನ್‌ಗಳ ಸೋಲನುಭವಿಸಿದೆ. ಮಿನಿ ಹರಾಜಿಗೂ ಮುನ್ನ ತಂಡದ ಬಹುತೇಕ ಪ್ರಮುಖ ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರನ್ನು ಖರೀದಿಸಿದ ಹೈದರಾಬಾದ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ಬರೋಬ್ಬರಿ 204 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿ 131 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೈದರಾಬಾದ್ ಪರ ಉಮ್ರಾನ್ ಮಲಿಕ್ 12 ರನ್ ಹಾಗೂ ಸಮದ್ 17 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಮಲಿಕ್ ಭರ್ಜರಿ ಸಿಕ್ಸರ್ ಬಾರಿಸಿದರು.
ಹೈದರಾಬಾದ್ ತಂಡದ ಎಂಟನೇ ವಿಕೆಟ್ ಪತನ. ನಾಯಕ ಭುವನೇಶ್ವರ್ ಕುಮಾರ್ 6 ರನ್ ಗಳಿಸಿ ಔಟಾದರು. ಚಹಾಲ್ 4 ವಿಕೆಟ್ ಪಡೆದರು.
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 4 ಹಾಗೂ ಶಮದ್ 14 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್ ಸ್ಕೋರ್ 17 ಓವರ್‌ಗಳ ನಂತರ 92/7
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 2 ಹಾಗೂ ಶಮದ್ 11 ರನ್ ಗಳಿಸಿ ಆಡುತ್ತಿದ್ದಾರೆ.
ಹೈದರಾಬಾದ್ ತಂಡದ ಏಳನೇ ವಿಕೆಟ್ ಪತನವಾಗಿದೆ. ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಆದಿಲ್ ರಶೀದ್ ಸ್ಟಂಪ್ ಔಟ್ ಆಗಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಂತಿಮವಾಗಿ 27 ರನ್ಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಹೈದರಾಬಾದ್ ಸೋಲು ಖಚಿತ ಎಂದು ಹೇಳಬಹುದು.
ಹೈದರಾಬಾದ್‌ನ ಅರ್ಧದಷ್ಟು ತಂಡ ಪೆವಿಲಿಯನ್ ಸೇರಿಕೊಂಡಿದೆ. ಸುಂದರ್ ವಿಕೆಟ್ ಬಳಿಕ ಬಂದ ಗ್ಲೆನ್ ಫಿಲಿಪ್ಸ್ ಒಂದು ಸಿಕ್ಸರ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ.
ಹೈದರಾಬಾದ್ ನಾಲ್ಕನೇ ವಿಕೆಟ್ ಪತನವಾಗಿದೆ. ವಾಷಿಂಗ್ಟನ್ ಸುಂದರ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಹೈದರಾಬಾದ್ ಪರ ಸುಂದರ್ 1 ರನ್ ಹಾಗೂ ಮಾನ್ಯಕ್ ಅಗರ್ವಾಲ್ 20 ರನ್ ಗಳಿಸಿ ಆಡುತ್ತಿದ್ದಾರೆ.
ಹೈದರಾಬಾದ್ ಮೂರನೇ ವಿಕೆಟ್ ಪತನ, ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಕೇವಲ 13 ರನ್ ಗಳಿಸಿ ಔಟಾಗಿದ್ದಾರೆ.
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 10 ರನ್ ಮತ್ತು ಮಾನ್ಯಕ್ ಅಗರ್ವಾಲ್ 20 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಫೋರ್ ಬಂತು.
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 4 ಮತ್ತು ಮಾನ್ಯಕ್ ಅಗರ್ವಾಲ್ 14 ರನ್ ಗಳಿಸಿ ಆಡುತ್ತಿದ್ದಾರೆ. 4 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 17/2
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 4 ರನ್ ಮತ್ತು ಮಾನ್ಯಕ್ ಅಗರ್ವಾಲ್ 8 ರನ್ ಗಳಿಸಿ ಆಡುತ್ತಿದ್ದಾರೆ. ಬೋಲ್ಟ್ ಎಸೆದ ಈ ಓವರ್ನಲ್ಲಿ ಮಯಾಂಕ್ 1 ಬೌಂಡರಿ ಕೂಡ ಬಾರಿಸಿದರು.
ಹೈದರಾಬಾದ್ ಪರ ಹ್ಯಾರಿ ಬ್ರೂಕ್ 4 ರನ್ ಮತ್ತು ಮಾನ್ಯಕ್ ಅಗರ್ವಾಲ್ 3 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್ನಲ್ಲಿ ಬ್ರೂಕ್ 1 ಬೌಂಡರಿ ಹೊಡೆದರು.
ಮೊದಲ ಓವರ್ ಎಸೆದ ಬೋಲ್ಟ್ ಮೊದಲ ಓವರ್ನಲ್ಲಿಯೇ ಹೈದರಾಬಾದ್‌ನ ಇಬ್ಬರು ಆರಂಭಿಕರನ್ನು ಶೂನ್ಯಕ್ಕೆ ಔಟ್ ಮಾಡಿದ್ದಾರೆ. ಅಭಿಷೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.
ರಾಜಸ್ಥಾನದ ಮೂವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸಿದರು. 20 ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ 203/5. ಹೈದರಾಬಾದ್‌ಗೆ 204 ರನ್‌ಗಳ ಗುರಿ ಸಿಕ್ಕಿದೆ.
ರಾಜಸ್ಥಾನ ಪರ ಹೆಟ್ಮೆಯರ್ 11 ರನ್ ಹಾಗೂ ಅಶ್ವಿನ್ 1 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳ ನಂತರ ರಾಜಸ್ಥಾನ ಸ್ಕೋರ್ 193/5
ರಾಜಸ್ಥಾನದ ಐದನೇ ವಿಕೆಟ್ ಪತನಗೊಂಡಿತು, ನಟರಾಜನ್ ಅವರ ಓವರ್‌ನಲ್ಲಿ ಸಂಜು ಸ್ಯಾಮ್ಸನ್ 55 ರನ್ ಗಳಿಸಿ ಔಟಾದರು.
ರಾಜಸ್ಥಾನ ಪರ ಹೆಟ್ಮೆಯರ್ 10 ರನ್ ಹಾಗೂ ನಾಯಕ ಸ್ಯಾಮ್ಸನ್ 55 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಂತು.
ರಾಜಸ್ಥಾನ ಪರ ಹೆಟ್ಮೆಯರ್ 2 ರನ್ ಮತ್ತು ಕ್ಯಾಪ್ಟನ್ ಸ್ಯಾಮ್ಸನ್ 50 ರನ್ ಗಳಿಸಿ ಆಡುತ್ತಿದ್ದಾರೆ. 17 ಓವರ್‌ಗಳಲ್ಲಿ ರಾಜಸ್ಥಾನ ಸ್ಕೋರ್ 172/4
ರಾಜಸ್ಥಾನದ ನಾಲ್ಕನೇ ವಿಕೆಟ್ ಪತನ, ರಿಯಾನ್ ಪರಾಗ್ 7 ರನ್ ಗಳಿಸಿ ಕ್ಯಾಚಿತ್ತು ಔಟಾದರು
ಪಡಿಕಲ್ ವಿಕೆಟ್ ಬಳಿಕ ಪಂದ ಪರಾಗ್ ಎದುರಿಸದ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದರು. 15 ಓವರ್ ಅಂತ್ಯಕ್ಕೆ ರಾಜಸ್ಥಾನ್ 160 ರನ್ ಗಳಿಸಿದೆ.
ಜೈಸ್ವಾಲ್ ವಿಕೆಟ್ ಬಳಿಕ ಬಂದಿದ್ದ ಕನ್ನಡಿಗ ಪಡಿಕಲ್ ಕೇವಲ 4 ರನ್ ಗಳಿಸಿ, ಉಮ್ರಾನ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು.
ರಾಜಸ್ಥಾನ್ ರಾಯಲ್ಸ್ 13 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿದೆ. ಜೈಸ್ವಾಲ್ 54 ಮತ್ತು ಬಟ್ಲರ್ 54 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ರಾಜಸ್ಥಾನದ ಎರಡನೇ ವಿಕೆಟ್ ಪತನ, ಜೈಸ್ವಾಲ್ 54 ರನ್ ಗಳಿಸಿ ಔಟಾದರು. ಫಜಲ್ಹಕ್ ಫಾರೂಕಿ ಮತ್ತೊಂದು ದೊಡ್ಡ ವಿಕೆಟ್ ಪಡೆದರು.
ಬಟ್ಲರ್ ನಂತರ ರಾಜಸ್ಥಾನದ ಎರಡನೇ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅರ್ಧಶತಕ ಬಾರಿಸಿದ್ದಾರೆ. ಈ ಬ್ಯಾಟ್ಸ್‌ಮನ್ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ 48 ರನ್ ಹಾಗೂ ಕ್ಯಾಪ್ಟನ್ ಸ್ಯಾಮ್ಸನ್ 29 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 1 ಸಿಕ್ಸರ್ ಕೂಡ ಬಂತು.
ರಾಜಸ್ಥಾನ್ ಇನ್ನಿಂಗ್ಸ್ನ 10 ಓವರ್‌ಗಳ ಆಟ ಮುಗಿದಿದೆ. ಈ 10 ಓವರ್‌ಗಳಲ್ಲಿ ತಂಡ 122 ರನ್ ಗಳಿಸಿದರೆ, ಸಂಜು ಹಾಗೂ ಜೈಸ್ವಾಲ್ ಕ್ರೀಸ್ನಲ್ಲಿದ್ದಾರೆ. ಈ 10ನೇ ಓವರ್ನಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಂತು.
ರಾಜಸ್ಥಾನ ಪರ ಜೈಸ್ವಾಲ್ 37 ರನ್ ಹಾಗೂ ನಾಯಕ ಸ್ಯಾಮ್ಸನ್ 1 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್ನಲ್ಲಿ ಜೈಸ್ವಾಲ್ 1 ಬೌಂಡರಿ ಬಾರಿಸಿದರು.
ರಾಜಸ್ಥಾನ ಪರ ಯಸ್ವಿ ಜೈಸ್ವಾಲ್ 30 ರನ್ ಹಾಗೂ ನಾಯಕ ಸ್ಯಾಮ್ಸನ್ 1 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಮೂರು ಬೌಂಡರಿಗಳು ಬಂದವು.
6ನೇ ಓವರ್ನಲ್ಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಬಟ್ಲರ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 22ನೇ ಎಸೆತದಲ್ಲಿ ಬೌಲ್ಡ್ ಆಗಿ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದ್ದಾರೆ.
ಒಂದೇ ಓವರ್ನಲ್ಲಿ ಬಟ್ಲರ್ 4 ಬೌಂಡರಿ ಬಾರಿಸಿದರು. ನಟರಾಜನ್ ಎಸೆದ 5ನೇ ಓವರ್ನಲ್ಲಿ 2 ಎಸೆತ ಡಾಟ್ ಬಾಲ್ ಆಗಿದ್ದು ಬಿಟ್ಟರೆ, ಮಿಕ್ಕ 4 ಎಸೆತಗಳು ಬೌಂಡರಿ ಸೇರಿದವು.
4ನೇ ಓವರ್ ಎಸೆದ ಸುಂದರ್ ಸಾಕಷ್ಟು ದುಬಾರಿಯಾದರು. ಈ ಓವರ್ನಲ್ಲಿ ಬಟ್ಲರ್ 2 ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದರು. ಜೈಸ್ವಾಲ್ ಕೂಡ ಬೌಂಡರಿ ಬಾರಿಸಿದರು. ಈ ಮೂಲಕ ರಾಜಸ್ಥಾನ್ ಅರ್ಧಶತಕ ಪೂರ್ಣಗೊಳಿಸಿದೆ.
ಭುವಿ ಎಸೆದ 3ನೇ ಓವರ್ನಲ್ಲಿ ಬಟ್ಲರ್ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು. ಆ ನಂತರ 4 ಮತ್ತು 5 ನೇ ಎಸೆತದಲ್ಲಿ ಜೈಸ್ವಾಲ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು. ಓವರ್ನಿಂದ 17 ರನ್
ಫರೂಕಿ ಎಸೆದ ಎರಡನೇ ಓವರ್ ಮೊದಲ ಎಸೆತದಲ್ಲೇ ಜೈಸ್ವಾಲ್ ಬೌಂಡರಿ ಬಾರಿಸಿದರು. ನಂತರ 5ನೇ ಎಸೆತದಲ್ಲೂ ಮತ್ತೊಂದು ಬೌಂಡರಿ ಬಂತು. ಈ ಓವರ್ನಿಂದ 14 ರನ್ ಬಂದವು.
ರಾಜಸ್ಥಾನ್ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಜೈಸ್ವಾಲ್ ಹಾಗೂ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೈದರಾಬಾದ್ ಪರ ಭುವಿ ಬೌಲಿಂಗ್ ಆರಂಭಿಸಿದರು. ಈ ಓವರ್ನಲ್ಲಿ 1 ಬೌಂಡರಿ ಸೇರಿದಂತೆ 6 ರನ್ ಬಂದವು.
ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್ (ಕೀಪರ್), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್ (ನಾಯಕ), ಟಿ.ನಟರಾಜನ್, ಫಜಲ್‌ಹಕ್ ಫಾರೂಕಿ.
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಕೀಪರ್/ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.
ಸನ್ ರೈಸರ್ಸ್ ಹೈದರಾಬಾದ್ ದಕ್ಷಿಣ ಆಫ್ರಿಕಾದ ಈಡನ್ ಮಾರ್ಕ್ರಾಮ್ ಅವರನ್ನು ನಾಯಕನನ್ನಾಗಿ ಮಾಡಿದೆ. ಆದರೆ ಇಂದಿನ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಇಂದು ಭಾರತ ತಂಡದ ಬೌಲರ್ ಭುವನೇಶ್ವರ್ ಕುಮಾರ್ ನಾಯಕತ್ವ ವಹಿಸಲಿದ್ದಾರೆ.
ಟಾಸ್ ಗೆದ್ದ ಹೈದರಾಬಾದ್ ನಾಯಕ ಭುವನೇಶ್ವರ್ ಕುಮಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 3:01 pm, Sun, 2 April 23