SL vs PAK 1st Test: ಶತಕದತ್ತ ಧನಂಜಯ ಡಿಸಿಲ್ವಾ, ಅಫ್ರಿದಿ 3 ವಿಕೆಟ್: ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 242-6

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಲ್ಲೇ ಶಾಹಿನ್ ಅಫ್ರಿದಿ ಲಂಕಾನ್ನರಿಗೆ ಆಘಾತ ನೀಡಿದರು. ತಂಡದ ಮೊತ್ತ 54 ಆಗುವಷ್ಟರಲ್ಲಿ 4 ವಿಕೆಟ್​ಗಳು ಪತನಗೊಂಡವು.

SL vs PAK 1st Test: ಶತಕದತ್ತ ಧನಂಜಯ ಡಿಸಿಲ್ವಾ, ಅಫ್ರಿದಿ 3 ವಿಕೆಟ್: ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 242-6
SL vs PAK 1st Test

Updated on: Jul 17, 2023 | 8:28 AM

ಸಿಂಹಳೀಯರ ನಾಡಿಗೆ ಪ್ರವಾಸ ಬೆಳೆಸಿರುವ ಪಾಕಿಸ್ತಾನ ಕ್ರಿಕೆಟ್ ತಂಡ (SL vs PAK) ಟೆಸ್ಟ್ ಸರಣಿ ಆಡುತ್ತಿದೆ. ಗಲ್ಲೆಯ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಪ್ರವಾಸಿ ಪಾಕಿಸ್ತಾನ ತಂಡ ಯಶಸ್ಸು ಸಾಧಿಸಿತು. ಶಾಹಿನ್ ಅಫ್ರಿದಿ (Shaheen Afridi) ಮಾರಕ ಬೌಲಿಂಗ್ ನಡೆಸಿದರು. ಲಂಕಾನ್ನರು ಪ್ರಥಮ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 242 ರನ್ ಗಳಿಸಿದೆ. ಏಕಾಂಗಿ ಹೋರಾಟ ನಡೆಸುತ್ತಿರುವ ಧನಂಜಯ ಡಿಸಿಲ್ವಾ (Dhananjay De Silva) 94 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣರತ್ನೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಲ್ಲೇ ಶಾಹಿನ್ ಅಫ್ರಿದಿ ಲಂಕಾನ್ನರಿಗೆ ಆಘಾತ ನೀಡಿದರು. ತಂಡದ ಮೊತ್ತ 54 ಆಗುವಷ್ಟರಲ್ಲಿ 4 ವಿಕೆಟ್​ಗಳು ಪತನಗೊಂಡವು. ನಿಶಾನ್ ಮಧುಶ್ಕಾ 4 ರನ್​ಗೆ ಔಟಾದರೆ, ಕುಸಲ್ ಮೆಂಡಿಸ್ 12 ರನ್​ಗೆ ನಿರ್ಗಮಿಸಿದರು. ನಾಯಕ ಕರುಣರತ್ನೆ ಆಟ 29 ರನ್​ಗಳಿಗೆ ಅಂತ್ಯವಾಯಿತು. ದಿನೇಶ್ ಚಂದಿಮಲ್ ಕೂಡ 1 ರನ್​ಗೆ ಬ್ಯಾಟ್ ಕೆಳಗಿಟ್ಟರು.

Amanjot Kaur: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಅಮನ್‌ಜೋತ್ ಕೌರ್

ಇದನ್ನೂ ಓದಿ
Virat Kohli: 500ನೇ ಅಂತಾರಾಷ್ಟ್ರೀಯ ಪಂದ್ಯ; ಕಿಂಗ್ ಕೊಹ್ಲಿ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ..!
Women’s Ashes 2023: ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ಮಣಿಸಿ ಆ್ಯಶಸ್ ಸರಣಿ ಗೆದ್ದ ಆಸ್ಟ್ರೇಲಿಯಾ..!
Wimbledon 2023 Final: ಜೊಕೊವಿಚ್​ಗೆ ಸೋಲುಣಿಸಿ ವಿಂಬಲ್ಡನ್ ​ಕಿರೀಟ ಗೆದ್ದ ಅಲ್ಕರಾಝ್
BAN vs AFG: ಅಫ್ಘಾನ್ ವಿರುದ್ಧ ಸೇಡು ತೀರಿಸಿಕೊಂಡ ಬಾಂಗ್ಲಾ ಹುಲಿಗಳು

4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಹಿರಿಯ ಅನುಭವಿ ಬ್ಯಾಟರ್​ಗಳಾದ ಆ್ಯಂಜಲೋ ಮ್ಯಾಥ್ಯೂಸ್ ಹಾಗೂ ಧನಂಜಯ ಡಿಸಿಲ್ವಾ ಆಸರೆಯಾದರು. ಪಾಕ್ ಬೌಲರ್​ಗಳು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ 131 ರನ್​ಗಳ ಕಾಣಿಕೆ ನೀಡಿತು. ಮ್ಯಾಥ್ಯೂಸ್ 109 ಎಸೆತಗಳಲ್ಲಿ 64 ರನ್​ಗೆ ಔಟಾದರು. ಬಳಿಕ ಕ್ರೀಸ್​ಗೆ ಬಂದ ವಿಕೆಟ್ ಕೀಪರ್ ಸದೀರ ಸಮರವಿಕ್ರಮ ಚೆನ್ನಾಗಿಯೆ ಬ್ಯಾಟಿಂಗ್ ನಡೆಸುತ್ತಿದ್ದರು. ಆದರೆ, ದಿನದಾಟ ಅಂತ್ಯವಾಗುವ ಹೊತ್ತಿಗೆ ಔಟಾದರು.

ಸದೀರ 57 ಎಸೆತಗಳಲ್ಲಿ 36 ರನ್ ಗಳಿಸಿ ನಿರ್ಗಮಿಸಿದಾಗ ದಿನದಾಟವನ್ನು ಕೊನೆಗೊಳಿಸಲಾಯಿತು. ಶ್ರೀಲಂಕಾ 65.4 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 242 ರನ್ ಬಾರಿಸಿದೆ. ಧನಂಜಯ 157 ಎಸೆತಗಳಲ್ಲಿ 94 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಾಕಿಸ್ತಾನ ಪರ ಶಾಹಿನ್ ಅಫ್ರಿದಿ 3 ವಿಕೆಟ್ ಕಿತ್ತಿದ್ದರೆ, ನಸೀಂ ಶಾ, ಅಬ್ರರ್ ಅಹ್ಮದ್ ಹಾಗೂ ಅಘ ಸಲ್ಮಾನ್ ತಲಾ 1 ವಿಕೆಟ್ ಪಡೆದರು.

100 ವಿಕೆಟ್ ಕಿತ್ತ ಶಾಹಿನ್ ಅಫ್ರಿದಿ:

ಶಾಹಿನ್ ಅಫ್ರಿದಿ ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಿಶಾನ್ ಮಧುಶಂಕ ಅವರನ್ನು 4 ರನ್​ಗಳಿಗೆ ಔಟ್ ಮಾಡುವ ಮೂಲಕ ಆಫ್ರಿದಿ ವಿಕೆಟ್​ಗಳ ಶತಕ ಪೂರೈಸಿದರು. ಈ ಪಂದ್ಯಕ್ಕೂ ಮುನ್ನ ಅಫ್ರಿದಿ ತಮ್ಮ ವಿಕೆಟ್​ಗಳ ಶತಕಕ್ಕೆ ಕೇವಲ ಒಂದು ವಿಕೆಟ್ ಅಂತರದಲ್ಲಿದ್ದರು. ಆದರೆ ಈ ವಿಕೆಟ್ ಪಡೆಯಲು ಅವರು ಒಂದು ವರ್ಷ ಕಾಯಬೇಕಾಯಿತು. ಈ ಹಿಂದೆ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಈ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿ ಕ್ರಿಕೆಟ್‌ನಿಂದ ಬಹಳ ಕಾಲ ದೂರ ಉಳಿದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ