Amanjot Kaur: ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಅಮನ್‌ಜೋತ್ ಕೌರ್
IND vs BAN: ಅಮನ್‌ಜೋತ್ ಕೌರ್ ಒಟ್ಟು 9 ಓವರ್ಗಳನ್ನು ಬೌಲ್ ಮಾಡಿದ್ದರು. ಈ ವೇಳೆ ಕೇವಲ 31 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದರು.

India vs Bangladesh: ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮಹಿಳೆಯರು 40 ರನ್ಗಳಿಂದ ಸೋಲನುಭವಿಸಿದ್ದಾರೆ. ಆದರೆ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ ಅಮನ್‌ಜೋತ್ ಕೌರ್ ವಿಶೇಷ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿರುವುದು ವಿಶೇಷ. ಟೀಮ್ ಇಂಡಿಯಾ ಪರ ಮೊದಲ ಏಕದಿನ ಪಂದ್ಯವಾಡಿದ ಅಮನ್‌ಜೋತ್ ಕೌರ್ ಒಟ್ಟು 9 ಓವರ್ಗಳನ್ನು ಬೌಲ್ ಮಾಡಿದ್ದರು. ಈ ವೇಳೆ ಕೇವಲ 31 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದರು.
ಇದರೊಂದಿಗೆ ಪಾದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ದಾಳಿ ಸಂಘಟಿಸಿದ ಟೀಮ್ ಇಂಡಿಯಾದ 2ನೇ ಮಹಿಳಾ ಬೌಲರ್ ಎಂಬ ವಿಶೇಷ ದಾಖಲೆ ಅಮನ್‌ಜೋತ್ ಕೌರ್ ಪಾಲಾಯಿತು. ಅಂದರೆ ಅಮನ್‌ಜೋತ್ ಕೇವಲ 3.40 ಎಕನಾಮಿ ರೇಟ್ನಲ್ಲಿ ರನ್ ನೀಡಿ ಒಟ್ಟು 4 ವಿಕೆಟ್ ಕಬಳಿಸಿದ್ದರು.
1987 ರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ್ತಿ ಪೂರ್ಣಿಮಾ ಚೌಧರಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 8 ಓವರ್‌ಗಳಲ್ಲಿ 21 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಇದೀಗ ಚೊಚ್ಚಲ ಪಂದ್ಯದಲ್ಲೇ 31 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಅಮನ್‌ಜೋತ್ ಕೌರ್ ಟೀಮ್ ಇಂಡಿಯಾ ಪರ ಮೊದಲ ಮ್ಯಾಚ್ನಲ್ಲೇ ಅತ್ಯುತ್ತಮ ದಾಳಿ ಸಂಘಟಿಸಿದ ಹಿರಿಮೆಗೆ ಪಾತ್ರರಾದರು.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್ ನ್ಯೂಸ್
ಬಾಂಗ್ಲಾ ತಂಡಕ್ಕೆ ಮೊದಲ ಗೆಲುವು:
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಮಹಿಳಾ ತಂಡ 43 ಓವರ್‌ಗಳಲ್ಲಿ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಎದುರಾಳಿ ತಂಡ ನೀಡಿದ 153 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡ 35.5 ಓವರ್‌ಗಳಲ್ಲಿ 113 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಬಾಂಗ್ಲಾದೇಶ್ ತಂಡವು 40 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಅಂದಹಾಗೆ ಇದು ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಇದು ಬಾಂಗ್ಲಾದೇಶ್ ಮಹಿಳಾ ತಂಡ ಮೊದಲ ಗೆಲುವು ಎಂಬುದು ವಿಶೇಷ.
