ಜನವರಿ 3 ರಿಂದ ಶುರುವಾಗಲಿರುವ ಭಾರತದ ವಿರುದ್ಧದ ಸರಣಿಗಾಗಿ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. 20 ಸದಸ್ಯರನ್ನು ಒಳಗೊಂಡಿರುವ ಈ ತಂಡವನ್ನು ದಸುನ್ ಶನಕ ಮುನ್ನಡೆಸಲಿದ್ದು, ಉಪನಾಯಕರಾಗಿ ಕುಸಾಲ್ ಮೆಂಡಿಸ್ (ಏಕದಿನ) ಹಾಗೂ ವನಿಂದು ಹಸರಂಗ (ಟಿ20) ಕಾಣಿಸಿಕೊಳ್ಳಲಿದ್ದಾರೆ. ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದ ಬಹುತೇಕ ಆಟಗಾರರನ್ನು ತಂಡದಲ್ಲೇ ಮುಂದುವರೆಸಲಾಗಿದೆ. ಇದಾಗ್ಯೂ ಏಕದಿನ ತಂಡದಲ್ಲಿ ಭಾನುಕಾ ರಾಜಪಕ್ಸೆ ಮತ್ತು ನುವಾನ್ ಕುರಶೇಖರ ಅವರನ್ನು ಆಯ್ಕೆ ಮಾಡಲಾಗಿಲ್ಲ. ಹಾಗೆಯೇ ಜೆಫ್ರಿ ವಾಂಡರ್ಸೆ ಮತ್ತು ನುವಾನಿಡು ಫೆರ್ನಾಂಡೋಗೆ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜನವರಿ 3 ರಂದು ಆರಂಭವಾಗಲಿದೆ. ಹಾಗೆಯೇ ಏಕದಿನ ಸರಣಿಯು ಜನವರಿ 10 ರಿಂದ ಶುರುವಾಗಲಿದೆ. ಈ ಟಿ20 ಸರಣಿಯು ಮುಂಬೈ, ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ಜನವರಿ 3 ರಿಂದ 7 ರವರೆಗೆ ನಡೆಯಲಿದ್ದು, ಇದಾದ ಬಳಿಕ ಜನವರಿ 10 ರಿಂದ 15ರವರೆಗೆ ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ಏಕದಿನ ಸರಣಿ ನಡೆಯಲಿದೆ.
ಭಾರತದ ವಿರುದ್ಧದ ಸರಣಿಗೆ ಶ್ರೀಲಂಕಾ ತಂಡ ಹೀಗಿದೆ:
ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೊ, ಸಧೀರ ಸಮರವಿಕ್ರಮ, ಕುಸಾಲ್ ಮೆಂಡಿಸ್ (ಉಪನಾಯಕ-ಏಕದಿನ ತಂಡ), ಭಾನುಕಾ ರಾಜಪಕ್ಸೆ (ಟಿ20), ಚರಿತ್ ಅಸಲಂಕಾ, ಧನಂಜಯ್ ಡಿಸಿಲ್ವ, ವನಿಂದು ಹರರಂಗ (ಉಪನಾಯಕ-ಟಿ20 ತಂಡ), ಮಹೀಶ್ ತಿಕ್ಷಣ , ಜೆಫ್ರಿ ವಾಂಡರ್ಸೆ (ಏಕದಿನ), ಚಾಮಿಕಾ ಕರುಣಾರತ್ನೆ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ನುವಾನಿಡು ಫೆರ್ನಾಂಡೋ (ಏಕದಿನ), ದುನಿತ್ ವೆಲಾಲಗೆ, ಪ್ರಮೋದ್ ಮದುಶನ್, ಲಹಿರು ಕುಮಾರ (ಟಿ20), ನುವನ್ ಕುರಶೇಖರ (ಟಿ20)
ಈ ಸರಣಿಗೆ ಭಾರತ ತಂಡ ಹೀಗಿದೆ:
ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.
ಟೀಮ್ ಇಂಡಿಯಾ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
ಭಾರತ-ಶ್ರೀಲಂಕಾ ಸರಣಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ:
ಟಿ20 ಸರಣಿ ವೇಳಾಪಟ್ಟಿ:-
ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
ಏಕದಿನ ಸರಣಿ ವೇಳಾಪಟ್ಟಿ:-