
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಪಲ್ಲೆಕೆಲೆಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಸರಣಿಯನ್ನು ಈಗಾಗಲೇ ಟೀಂ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದ್ದರಿಂದ ಭಾರತ ತಂಡದಲ್ಲಿ ಬೆಂಚ್ ಕಾದಿದ್ದ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ನಿರೀಕ್ಷೆಯಂತೆ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದ ಶ್ರೀಲಂಕಾ ತಂಡ ಪಂದ್ಯ ಮುಗಿಯುವ ಕೊನೆಯ ಅರ್ಧಗಂಟೆಯವರೆಗೂ ವಿಜಯಲಕ್ಷ್ಮೀಯನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. ಆದರೆ ಭಾರತ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಅವರ ಚಾಣಾಕ್ಷ ನಿರ್ಧಾರಗಳ ಎದುರು ಆತಿಥೇಯ ಲಂಕಾ ತಂಡ ಗೆಲ್ಲುವ ಪಂದ್ಯವನ್ನು ಸೋಲಬೇಕಾಯಿತು. ಇಡೀ ಸರಣಿಯಲ್ಲಿ ಲಂಕಾ ತಂಡದ ಸೋಲಿಗೆ ಕಾರಣವಾಗಿದ್ದ ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕ ಈ ಪಂದ್ಯದ ಸೋಲಿಗೂ ಕಾರಣವಾಯಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳೆದೆರಡು ಪಂದ್ಯಗಳಲ್ಲಿ ಕೊಂಚ ದುರ್ಬಲವಾಗಿ ಕಾಣುತ್ತಿದ್ದ ಲಂಕಾ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಅದ್ಭುತ ಆರಂಭ ನೀಡಿತು. ಚೊಚ್ಚಲ ಪಂದ್ಯವನ್ನಾಡಿದ ಚಾಮಿಂದು ವಿಕ್ರಮಸಿಂಘೆ ರನ್ಗಳಿಗೆ ಕಡಿವಾಣ ಹಾಕಿ ಭಾರತದ ಆರಂಭಿಕರನ್ನು ಒತ್ತಡಕ್ಕೆ ಸಿಲುಕಿಸಿದರು. ಅದರ ಪರಿಣಾಮವಾಗಿ ಯಶಸ್ವಿ ಜೈಸ್ವಾಲ್ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಂಜು ಸ್ಯಾಮನ್ಸ್ ಈ ಪಂದ್ಯದಲ್ಲೂ ಖಾತೆ ತೆರೆಯದೆ ನಿರ್ಗಮಿಸಿದರು. ರಿಂಕು ಸಿಂಗ್ ಕೂಡ 1 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.
ಹೀಗಾಗಿ ತಂಡ ಕೇವಲ 14 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆ ನಂತರವೂ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ ಸಾಗಿತು. ಮೊದಲೆರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ನಾಯಕ ಸೂರ್ಯ ಕೂಡ ಈ ಪಂದ್ಯದಲ್ಲಿ ಒಂದಂಕಿಗೆ ಸುಸ್ತಾದರು. ಶಿವಂ ದುಬೆ ಕೂಡ 13 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಹೀಗಾಗಿ ಭಾರತ 48 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಆದರೆ ಆ ಬಳಿಕ ಜೊತೆಯಾದ ರಿಯಾನ್ ಪರಾಗ್ ಹಾಗೂ ಶುಭ್ಮನ್ ಗಿಲ್ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಈ ಇಬ್ಬರು ಅರ್ಧಶತಕದ ಜೊತೆಯಾಟ ಕೂಡ ಹಂಚಿಕೊಂಡರು. ಈ ವೇಳೆ ಪರಾಗ್ 26 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಶುಭ್ಮನ್ ಗಿಲ್ ಇನ್ನಿಂಗ್ಸ್ 39 ರನ್‌ಗಳ ಅಂತ್ಯವಾಯಿತು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 25 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. ಹೀಗಾಗಿ ತಂಡ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭ ಒದಗಿಸಿಕೊಟ್ಟರು. ಇಬ್ಬರ ನಡುವೆ ಮೊದಲ ವಿಕೆಟ್ಗೆ 58 ರನ್‌ಗಳ ಜೊತೆಯಾಟ ಕೂಡ ಇತ್ತು. ಈ ವೇಳೆ ಪಾತುಮ್ ನಿಸ್ಸಾಂಕ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕುಸಾಲ್ ಪೆರೇರಾ, ಮೆಂಡಿಸ್ ಜೊತೆಗೂಡಿ ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಮೆಂಡಿಸ್ ವಿಕೆಟ್ ಪತನವಾದ ಬಳಿಕ ಇಡೀ ಪಂದ್ಯದ ಚಿತ್ರಣವೇ ಬದಲಾಯಿತು. ಮೆಂಡಿಸ್ 46 ರನ್‌ಗಳ ಇನ್ನಿಂಗ್ಸ್ ಆಡುವಲ್ಲಿ ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೊಡುಗೆಯೂ ಇತ್ತು. ಮೆಂಡಿಸ್ ನೀಡಿದ ಸುಲಭ ಕ್ಯಾಚ್ ಅನ್ನು ಸಂಜು ಕೈಚೆಲ್ಲಿದರು.
ಅದಾಗ್ಯೂ ಈ ಜೋಡಿ 110 ರನ್ಗಳಿಗೆ ತಂಡದ ಸ್ಕೋರನ್ನು ಕೊಂಡೊಯ್ದಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಲಂಕಾ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳಾಯಿತು. ಈ ವೇಳೆ ನಾಯಕತ್ವದಲ್ಲಿ ಬುದ್ದಿವಂತಿಕೆ ತೋರಿದ ಸೂರ್ಯ, ಸೂಕ್ತ ಬೌಲರ್ಗಳನ್ನು ಬಳಸಿದರು. ಇದರಿಂದ ಲಂಕಾ ತಂಡ ರನ್ಗಳಿಸಲು ಸಾಧ್ಯವಾಗದೆ ಒತ್ತಡಕ್ಕೆ ಸಿಲುಕಿತು. ಜೊತೆಗೆ ವಿಕೆಟ್ಗಳನ್ನು ಕಳೆದುಕೊಂಡಿತು. ಈ ವೇಳೆ 18ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ 5 ವೈಡ್ ಎಸೆದು ತಂಡವನ್ನು ಸೋಲಿನ ದವಡೆಗೆ ತಳ್ಳಿದ್ದರು. ಆದರೆ ಮತ್ತೊಮ್ಮೆ ಸೂರ್ಯ ತಮ್ಮ ನಾಯಕತ್ವದ ನಿರ್ಧಾರದಿಂದ ಪಂದ್ಯವನ್ನು ಭಾರತದ ವಾಲಿಸಿದರು.
ಕೊನೆಯ ಎರಡು ಓವರ್‌ಗಳಲ್ಲಿ ಯಾರೂ ನಿರೀಕ್ಷಿಸದ ನಿರ್ಧಾರಗಳನ್ನು ಸೂರ್ಯ ತೆಗೆದುಕೊಂಡರು. 19ನೇ ಓವರ್ ಅನ್ನು ರಿಂಕು ಸಿಂಗ್ ಬೌಲ್ ಮಾಡಿ ಕೇವಲ 3 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರೆ, 20 ನೇ ಓವರ್ ಬೌಲ್ ಮಾಡಿದ ನಾಯಕ ಸೂರ್ಯಕುಮಾರ್ ಯಾದವ್ ಕೂಡ 2 ವಿಕೆಟ್ ಪಡೆದು ಕೇವಲ 5 ರನ್ ಬಿಟ್ಟುಕೊಟ್ಟರು. ಹೀಗಾಗಿ ಪಂದ್ಯ ಟೈ ಆಗಿ ಸೂಪರ್ ಓವರ್ನತ್ತ ಸಾಗಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಕೇವಲ 2 ರನ್ ಕಲೆಹಾಕಿತು. ಸುಂದರ್ ಎಸೆದ ಈ ಓವರ್‌ನಲ್ಲಿ 1 ರನ್ ವೈಡ್ನಿಂದ ಬಂತು. ಉಳಿದಂತೆ ಮುಂದಿನ ಎರಡು ಎಸೆತಗಳಲ್ಲಿ ಲಂಕಾ ಸತತ 2 ವಿಕೆಟ್ ಕಳೆದುಕೊಂಡಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ನಾಯಕ ಸೂರ್ಯ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಭಾರತ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿತು. ಶ್ರೀಲಂಕಾ ಭಾರತಕ್ಕೆ ಮೂರು ರನ್ ಟಾರ್ಗೆಟ್ ನೀಡಿತ್ತು. ಸೂರ್ಯಕುಮಾರ್ ಯಾದವ್ ಸೂಪರ್ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಪಂದ್ಯ ಗೆದ್ದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕೇವಲ 2 ರನ್ ಗಳಿಸಲಷ್ಟೇ ಶಕ್ತವಾಯಿತು. ವಾಷಿಂಗ್ಟನ್ ಸುಂದರ್ 3 ಎಸೆತಗಳಲ್ಲಿ ಸತತ 2 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು.
ಭಾರತ ಮತ್ತು ಶ್ರೀಲಂಕಾ ಪಂದ್ಯ ಟೈ ಆಗಿದೆ. ಈಗ ಉಭಯ ತಂಡಗಳು ಸೂಪರ್ ಓವರ್ ಆಡಲಿವೆ. ಸೂರ್ಯಕುಮಾರ್ ಯಾದವ್ ಕೊನೆಯ ಓವರ್‌ನಲ್ಲಿ 5 ರನ್ ನೀಡಿ ಎರಡು ವಿಕೆಟ್ ಪಡೆದರು.
ಭಾರತ ತಂಡ ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳಿದ್ದು, ಈ ಬಾರಿ ನಾಯಕ ಸೂರ್ಯಕುಮಾರ್ ಯಾದವ್ ಈ ಅದ್ಭುತವನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಬಾರಿಗೆ ಬೌಲಿಂಗ್ ಮಾಡಲು ಬಂದಿದ್ದ ನಾಯಕ ಸೂರ್ಯ ಸತತ 2 ಎಸೆತಗಳಲ್ಲಿ 2 ವಿಕೆಟ್ ಕಬಳಿಸಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ರಿಂಕು ಸಿಂಗ್ ತಮ್ಮ ಎರಡನೇ ಎಸೆತದಲ್ಲಿ ವಿಕೆಟ್ ಪಡೆದರು. 19ನೇ ಓವರ್‌ನ ಎರಡನೇ ಎಸೆತದಲ್ಲಿ ರಿಂಕು ಕುಸಲ್ ಪೆರೆರಾ (46) ಅವರ ಪ್ರಮುಖ ವಿಕೆಟ್ ಪಡೆದರು. ಹಾಗೆಯೇ ಕೊನೆಯ ಎಸೆತದಲ್ಲೂ ರಮೇಶ್ ಮೆಂಡಿಸ್ ವಿಕೆಟ್ ಬಂತು.
ಸುಂದರ್ ಟೀಂ ಇಂಡಿಯಾಕ್ಕೆ ತೋರಿದ್ದ ಭರವಸೆಯ ಕಿರಣವನ್ನು ಖಲೀಲ್ 18ನೇ ಓವರ್‌ನಲ್ಲಿ ನಂದಿಸಿದರು. ಖಲೀಲ್ ಅವರ ಓವರ್ 11 ಎಸೆತಗಳ ನಂತರ ಕೊನೆಗೊಂಡಿತು. 5 ವೈಡ್ ಬಾಲ್ ಎಸೆದ ಅವರು ಒಟ್ಟು 12 ರನ್ ನೀಡಿದರು.
ವಾಷಿಂಗ್ಟನ್ ಸುಂದರ್ ಇದ್ದಕ್ಕಿದ್ದಂತೆ ಟೀಂ ಇಂಡಿಯಾಗೆ ಭರವಸೆಯ ಕಿರಣವನ್ನು ತೋರಿಸಿದ್ದಾರೆ. 17ನೇ ಓವರ್‌ನಲ್ಲಿ ಸುಂದರ್ ಸತತ ಎಸೆತಗಳಲ್ಲಿ ವನಿಂದು ಹಸರಂಗ ಮತ್ತು ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಅವರ ವಿಕೆಟ್ ಪಡೆದರು. ಇನ್ನು ಶ್ರೀಲಂಕಾಕ್ಕೆ 18 ಎಸೆತಗಳಲ್ಲಿ 21 ರನ್‌ಗಳ ಅಗತ್ಯವಿದೆ.
ಗೆಲುವಿನತ್ತ ಸಾಗುತ್ತಿದ್ದ ಶ್ರೀಲಂಕಾ ಎರಡನೇ ವಿಕೆಟ್ ಕಳೆದುಕೊಂಡಿದೆ. ರವಿ ಬಿಷ್ಣೋಯ್ ಮತ್ತೊಮ್ಮೆ ಕುಸಾಲ್ ಮೆಂಡಿಸ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಯಶಸ್ಸು ನೀಡಿದರು.
ಶ್ರೀಲಂಕಾ 15ನೇ ಓವರ್‌ನಲ್ಲಿ 100 ರನ್ ಪೂರೈಸುವ ಮೂಲಕ ಗೆಲುವಿನತ್ತ ಹೆಜ್ಜೆ ಹಾಕಿದೆ. ಕುಸಾಲ್ ಪೆರೇರಾ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಮೆಂಡಿಸ್ ಜೊತೆ ಅರ್ಧಶತಕದ ಜೊತೆಯಾಟ ನಡೆಸಿದರು.
ಕುಸಾಲ್ ಮೆಂಡಿಸ್ ಜೊತೆಗೆ ಕುಸಾಲ್ ಪೆರೇರಾ ತಂಡದ ಸಾರಥ್ಯ ವಹಿಸಿಕೊಂಡಿದ್ದು, 12 ಓವರ್‌ಗಳ ಬಳಿಕ ಶ್ರೀಲಂಕಾ ತಂಡ ಗೆಲುವಿನ ಧಾವಂತ ತೋರುತ್ತಿದೆ. ಕೇವಲ ಒಂದು ವಿಕೆಟ್ ಕಳೆದುಕೊಂಡು 82 ರನ್ ಗಳಿಸಿದೆ. ಇನ್ನು 8 ಓವರ್‌ಗಳಲ್ಲಿ 56 ರನ್‌ಗಳ ಅಗತ್ಯವಿದೆ.
ಅಂತಿಮವಾಗಿ 9ನೇ ಓವರ್‌ನಲ್ಲಿ ಭಾರತಕ್ಕೆ ಮೊದಲ ವಿಕೆಟ್ ಸಿಕ್ಕಿತು. ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ (26) ರವಿ ಬಿಷ್ಣೋಯ್ ಎಸೆತದಲ್ಲಿ ಲಾಂಗ್ ಆನ್‌ನಲ್ಲಿ ಕ್ಯಾಚ್ ನೀಡಿ ಔಟಾದರು.
ಪವರ್‌ಪ್ಲೇ ಮುಗಿದಿದೆ. ನಿಸ್ಸಾಂಕ 21 ರನ್ ಮತ್ತು ಮೆಂಡಿಸ್ 12 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಆರು ಓವರ್‌ಗಳ ನಂತರ ಸ್ಕೋರ್ 35/0.
ಶ್ರೀಲಂಕಾ ತಂಡಕ್ಕೆ ಪಾಥುಮ್ ನಿಸ್ಸಾಂಕಾ ಮತ್ತು ಕುಸಾಲ್ ಮೆಂಡಿಸ್ ಉತ್ತಮ ಆರಂಭ ನೀಡಿದ್ದಾರೆ. ಮೂರನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಮೇಲೆ ನಿಸ್ಸಾಂಕ 3 ಬೌಂಡರಿಗಳನ್ನು ಬಾರಿಸಿದರು. ಶ್ರೀಲಂಕಾ ಇನ್ನೂ ವೇಗವಾಗಿ ರನ್ ಗಳಿಸಿಲ್ಲವಾದರೂ, ಭಾರತದಂತೆ ಬೇಗನೆ ವಿಕೆಟ್ ಕಳೆದುಕೊಂಡಿಲ್ಲ.
ಶ್ರೀಲಂಕಾ ಇನ್ನಿಂಗ್ಸ್ ಆರಂಭವಾಗಿದೆ. ಪಾಥುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ಆರಂಭಿಕ ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಬಂದಿದ್ದಾರೆ.
ಭಾರತ, ಶ್ರೀಲಂಕಾಗೆ 138 ರನ್‌ಗಳ ಗುರಿ ನೀಡಿದೆ. ಶುಭ್ಮನ್ ಗಿಲ್ 39, ರಿಯಾನ್ ಪರಾಗ್ 26 ಮತ್ತು ವಾಷಿಂಗ್ಟನ್ ಸುಂದರ್ 25 ರನ್ ಗಳಿಸಿ ತಂಡವನ್ನು ಈ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.
ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಹಸರಂಗ ಭಾರತದ ಭರವಸೆಗೆ ಶಾಕ್ ನೀಡಿದ್ದಾರೆ. ಗಿಲ್ ನಂತರ, ಹಸರಂಗಾ ಅದೇ ಓವರ್‌ನಲ್ಲಿ ರಿಯಾನ್ ಪರಾಗ್ ಅವರ ವಿಕೆಟ್ ಪಡೆದರು. ಪರಾಗ್ ಅವರು ಸಿಕ್ಸರ್ ಹೊಡೆಯಲು ಪ್ರಯತ್ನಿಸುತ್ತಿರುವಾಗ ಡೀಪ್ ಮಿಡ್‌ವಿಕೆಟ್ ಬೌಂಡರಿಯಲ್ಲಿ ಕ್ಯಾಚ್ ನೀಡಿದರು.
ಆರಂಭಿಕರಾಗಿ ಬಂದ ಶುಭ್‌ಮನ್ ಗಿಲ್ (39) ಅವರ ಹೋರಾಟದ ಇನ್ನಿಂಗ್ಸ್ ಅಂತ್ಯ ಕಂಡಿತು. ವನಿಂದು ಹಸರಂಗ ಅವರ ಚೆಂಡಿನಲ್ಲಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿರುವಾಗ, ಗಿಲ್ ಸುಲಭವಾಗಿ ಸ್ಟಂಪ್ ಔಟ್ ಆದರು.
ಶ್ರೀಲಂಕಾದ ಬಿಗಿಯಾಗಿ ಬೌಲಿಂಗ್ ಮುಂದೆ ಟೀಂ ಇಂಡಿಯಾದ ಬ್ಯಾಟಿಂಗ್ ವಿಫಲವಾಗಿದೆ. ಸತತ ವಿಕೆಟ್ ಪತನದಿಂದಾಗಿ ರನ್‌ಗಳ ವೇಗವೂ ತಗ್ಗಿದ್ದು, 11ನೇ ಓವರ್‌ನ ಮೂರನೇ ಎಸೆತದಲ್ಲಿ ರಿಯಾನ್ ಪರಾಗ್ ಬ್ಯಾಟ್ನಿಂದ ಬಂದ ಬೌಂಡರಿಗಾಗಿ ಟೀಂ ಇಂಡಿಯಾ 33 ಎಸೆತಗಳನ್ನು ಕಾಯಬೇಕಾಯಿತು.
48 ರನ್ಗಳಿದ್ದಾಗ ಭಾರತದ ಐದನೇ ವಿಕೆಟ್ ಪತನವಾಯಿತು. ರಮೇಶ್ ಮೆಂಡಿಸ್ ಶಿವಂ ದುಬೆ ಅವರನ್ನು ಔಟ್ ಮಾಡಿದರು. ಏಳನೇ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರನ್ನು ಬೆಂಬಲಿಸಲು ಗಿಲ್ ಇದ್ದಾರೆ. ಒಂಬತ್ತು ಓವರ್‌ಗಳ ನಂತರ ಭಾರತದ ಸ್ಕೋರ್ 53/5.
ಭಾರತ 4ನೇ ವಿಕೆಟ್ ಕಳೆದುಕೊಂಡಿದೆ. ನಾಯಕ ಸೂರ್ಯಕುಮಾರ್ ಕೇವಲ 9 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ಪವರ್ ಪ್ಲೇ ಒಳಗೆ ಭಾರತ ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ.
ಭಾರತ ಮೂರನೇ ವಿಕೆಟ್ ಕಳೆದುಕೊಂಡಿದೆ. ಮಹಿಷ್ ತೀಕ್ಷಣ ರಿಂಕು ಸಿಂಗ್ ಅವರನ್ನು ಔಟ್ ಮಾಡಿದರು. ರಿಂಕು ಕೇವಲ ಒಂದು ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದಾರೆ.
ಭಾರತ ಎರಡನೇ ವಿಕೆಟ್ ಕಳೆದುಕೊಂಡಿದೆ. ವನಿಂದು ವಿಕ್ರಮಸಿಂಘೆ ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದರು. ಸಂಜು ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಕಳೆದ ಪಂದ್ಯದಲ್ಲೂ ಅವರು ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ರಿಂಕು ಸಿಂಗ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ (10) ಎರಡನೇ ಓವರ್‌ನಲ್ಲಿಯೇ ಔಟಾದ ಕಾರಣ ಭಾರತಕ್ಕೆ ಮೊದಲ ಹೊಡೆತ ಬಿದ್ದಿತು. ಸ್ಪಿನ್ನರ್ ಮಹಿಷ್ ಟೀಕ್ಷಣ ಎಸೆತದಲ್ಲಿ ಜೈಸ್ವಾಲ್ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು.
ಭಾರತದ ಇನ್ನಿಂಗ್ಸ್ ಆರಂಭವಾಗಿದೆ. ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರಂಭಿಸಿದ್ದಾರೆ.
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಕುಸಲ್ ಪೆರೆರಾ, ಕಮಿಂದು ಮೆಂಡಿಸ್, ಚರಿತ್ ಅಸಲಂಕಾ (ನಾಯಕ), ಚಮಿಂದು ವಿಕ್ರಮಸಿಂಘೆ, ವನಿಂದು ಹಸರಂಗಾ, ರಮೇಶ್ ಮೆಂಡಿಸ್, ಮಹಿಷ್ ಟೀಕ್ಷಣ, ಮತಿಶ ಪತಿರಾನ, ಅಸಿತ ಫೆರ್ನಾಂಡೊ.
ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಖಲೀಲ್ ಅಹ್ಮದ್.
ಕಾವೇರಿ ಜಲಾನಯನ ಹಾಗೂ ವಯನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಕಾವೇರಿ ನದಿ ಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮ ಅಲರ್ಟ್ ಮಾಡಿದೆ. ಕೆಆರ್‌ಎಸ್ ಡ್ಯಾಂನಿಂದ 1,10,000 ಕ್ಯೂಸೆಕ್ ಹೊರಗೆ ಬಿಡಲಾಗಿದೆ. ಇನ್ನು 80,000 ಕ್ಯೂಸೆಕ್ ನೀರು ಕಬಿನಿ ಜಲಾಶಯದಿಂದ ಹೊರಕ್ಕೆ ಬಿಡುಗಡೆ ಮಾಡಲಾಗಿದೆ. ಯಾವಾಗ ಬೇಕಾದ್ರು 2,00,000 ಕ್ಯೂಸೆಕ್‌ಗೂ ಹೆಚ್ಚಾಗಬಹುದು. ಹೀಗಾಗಿ ನದಿ ಪಾತ್ರದ ಜನರು ನದಿಯ ತಟಕ್ಕೆ ಹೋಗಬೇಡಿ. ಜನರು ತಮ್ಮ ಆಸ್ತಿಪಾಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ನದಿ ದಂಡೆಯ ಜನರು ಸುರಕ್ಷಿತ ಪ್ರದೇಶಗಳಲ್ಲಿ ಇರಬೇಕೆಂದು ಸೂಚನೆ ರವಾನಿಸಲಾಗಿದೆ.
ಟಾಸ್ ಗೆದ್ದ ಶ್ರೀಲಂಕಾ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಕರ್ನಾಟಕದ ಕೆಲವೆಡೆ ಪ್ರವಾಹ, ಭೂಕುಸಿತ ಭೀತಿ ಶುರುವಾಗಿರುವುದರಿಂದ ಕಟ್ಟೆಚ್ಚರ ವಹಿಸಿ ಅಗತ್ಯ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿಡೆ ಭಾರಿ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿ ಎದುರಿಸಲು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಹೇಳಿದ್ದಾರೆ. ಅಲ್ಲದೇ ಜಲಾಶಯಗಳ ನೀರಿನ ಮಟ್ಟದ ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಮಳೆಯಿಂದಾಗಿ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಟಿ20 ಪಂದ್ಯದ ಟಾಸ್ ವಿಳಂಬವಾಗಿದೆ.
Published On - 6:36 pm, Tue, 30 July 24