IPL 2021: ಆರ್​ಸಿಬಿಗೆ ಬಂತು ಆನೆ ಬಲ! ಕೊಹ್ಲಿ ತಂಡ ಸೇರಿದ ಶ್ರೀಲಂಕಾದ ಗೂಗ್ಲಿ ಸ್ಪಿನ್ನರ್ ವನಿಂದು ಹಸರಂಗ

| Updated By: ಪೃಥ್ವಿಶಂಕರ

Updated on: Aug 21, 2021 | 3:49 PM

IPL 2021: 19 ಸೆಪ್ಟೆಂಬರ್ 2021 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಪರ ಶ್ರೀಲಂಕಾದ ಗೂಗ್ಲಿ ಸ್ಪಿನ್ನರ್ ವಸುಂದು ಹಸರಂಗ ಕಣಕ್ಕಿಳಿಯಲಿದ್ದಾರೆ.

IPL 2021: ಆರ್​ಸಿಬಿಗೆ ಬಂತು ಆನೆ ಬಲ! ಕೊಹ್ಲಿ ತಂಡ ಸೇರಿದ ಶ್ರೀಲಂಕಾದ ಗೂಗ್ಲಿ ಸ್ಪಿನ್ನರ್ ವನಿಂದು ಹಸರಂಗ
ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ತಂಡದಲ್ಲಿ ಪ್ರಮುಖ ಹೊಸ ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ.
Follow us on

19 ಸೆಪ್ಟೆಂಬರ್ 2021 ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ದ್ವಿತೀಯಾರ್ಧದ ಪಂದ್ಯಾವಳಿಯಲ್ಲಿ ಆರ್​ಸಿಬಿ ಪರ ಶ್ರೀಲಂಕಾದ ಗೂಗ್ಲಿ ಸ್ಪಿನ್ನರ್ ವಸುಂದು ಹಸರಂಗ ಕಣಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಬದಲಿಗೆ ಹಸರಂಗ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಮಾಹಿತಿಯನ್ನು ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ.ಇತ್ತೀಚೆಗೆ, ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಟಿ 20 ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಭಾರತದ ಸೋಲಿಗೆ ಒಂದು ದೊಡ್ಡ ಕಾರಣವೆಂದರೆ ಆತಿಥೇಯ ತಂಡದ ವನಿದು ಹಸರಂಗ. ಅವರ ಅದ್ಭುತ ಬೌಲಿಂಗ್ ಲಂಕಾ ಪಾಳಯಕ್ಕೆ ನೆರವಾಯ್ತು. ಈ ಸರಣಿಯಲ್ಲಿ ಹಸರಂಗ ಪ್ರದರ್ಶನ ಕಂಡಿದ್ದ ಕೊಹ್ಲಿ ಹಾಗೂ ಆರ್​ಸಿಬಿ ಮಂಡಳಿ ಹಸರಂಗ ಮೇಲೆ ಅಂದೆ ಕಣ್ಣೀಟ್ಟಿತ್ತು. ಹಲವು ದಿನಗಳಿಂದಲು ಹಸರಂಗ ಆರ್​ಸಿಬಿ ಸೆರ್ತಾರೆ ಎಂಬ ಊಹೆಗಳಿದ್ದವು. ಇಂದು ಅದಕ್ಕೆಲ್ಲಾ ಆರ್​ಸಿಬಿ ಅಧಿಕೃತ ಫುಲ್​ಸ್ಟಾಪ್ ಇಟ್ಟಿದೆ.

ಭಾರತದ ವಿರುದ್ಧ ಮೂರು ಪಂದ್ಯಗಳ ಟಿ -20 ಸರಣಿಯನ್ನು ಶ್ರೀಲಂಕಾ 2-1ರಿಂದ ಸರಣಿ ಗೆದ್ದುಕೊಂಡಿತು. ಹಸರಂಗ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ. ಈ ಸರಣಿಯಲ್ಲಿ ಹಸರಂಗ ಏಳು ವಿಕೆಟ್ ಪಡೆದರು. ಇದಲ್ಲದೇ, ಅವರು 130 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 29 ಪ್ರಮುಖ ರನ್ ಗಳಿಸಿದ್ದರು. ಇಡೀ ಸರಣಿಯಲ್ಲಿ ಅವರ ಆರ್ಥಿಕತೆಯು ಆರಕ್ಕಿಂತ ಕಡಿಮೆ ಇತ್ತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಆಡಲು ತೊಂದರೆ ಅನುಭವಿಸುತ್ತಿರುವುದು ಸ್ಪಷ್ಟವಾಗಿತ್ತು. ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ, ಅವರು ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್ ನೀಡಿ 3 ವಿಕೆಟ್ ಪಡೆದರು.

ಆರ್​ಸಿಬಿ ತಂಡದಲ್ಲಾಗಿರುವ ಪ್ರಮುಖ ಬದಲಾವಣೆಗಳು ಹೀಗಿವೆ
ಆಸ್ಟ್ರೇಲಿಯಾದ ಸ್ಪಿನ್ನರ್ ಆಡಂ ಜಂಪಾ ಬದಲಿಗೆ ಶ್ರೀಲಂಕಾದ ಆಲ್​ರೌಂಡರ್ ಹಸರಂಗವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹಾಗೆಯೇ ಕೇನ್ ರಿಚರ್ಡ್​ಸನ್ ಬದಲಿಗೆ ಶ್ರೀಲಂಕಾದ ಮತ್ತೊಬ್ಬ ವೇಗದ ಬೌಲರ್ ಆದ ದುಶ್ಮಂತ್ ಚಮೀರಾ ಅವರನ್ನು ತಂಡಕ್ಕೆ ಕರೆತರಲಾಗಿದೆ. ಫಿನ್ ಅಲೆನ್ ಬದಲಿಗೆ ಟಿಮ್ ಡೇವಿಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆರ್​​ಸಿಬಿಯ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಅದು ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್​, ಅವರ ಬದಲಿಗೆ ಈಗ ಮೈಕ್ ಹೇಸನ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸಲಿದ್ದಾರೆ.

Published On - 3:30 pm, Sat, 21 August 21