ಭಾರತ ಮತ್ತು ವಿಶ್ವದ ಅಗ್ರಮಾನ್ಯ ಆಲ್-ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಬಾರಿಸಿದಾಗ ಇಲ್ಲವೇ ಖ್ಯಾತ ಬೌಲರ್ನ ಎಸೆತವೊಂದನ್ನು ಸಿಕ್ಸರ್ಗೆ ಎತ್ತಿದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಬ್ಯಾಟನ್ನು ಖಡ್ಗದಂತೆ ತಿರುಗಿಸುತ್ತಾ ಅವರು ಸಂಭ್ರಮಿಸುತ್ತಾರೆ. ಕ್ರಿಕೆಟ್ ಮೈದಾನಗಳಲ್ಲಿ ಜಡೇಜಾ ತನ್ನ ಕರಾರುವಾಕ್ ಬೌಲಿಂಗ್, ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಉತ್ಕೃಷ್ಟ ಫೀಲ್ಡಿಂಗ್ನಿಂದ ಹೆಸರು ಮಾಡಿದ್ದಾರೆ, ಆದರೆ ಮೈದಾನದ ಹೊಗಿನ ಅವರವ ಬದುಕಿನ ಬಗ್ಗೆ ಅವರ ಅಭಿಮಾನಗಳಿಗೆ ಗೊತ್ತಿರಬಹದು. ಸಾಕು ಪ್ರಾಣಿಗಳ ಮೇಲೆ ಅವರಿಗೆ ವಿಪರೀತ ವ್ಯಾಮೋಹ ಅಂತ ಕೆಲವರಿಗಷ್ಟೇ ಗೊತ್ತಿದೆ. ಪೆಟ್ಗಳೆಂದಾಕ್ಷಣ ನಾವು ಕೇವಲ ಬೆಕ್ಕು ಮತ್ತು ನಾಯಿಗಖ ಮತ್ತೆ ಮಾತ್ರ ಯೋಚಿಸಿತ್ತೇವೆ. ಆದರೆ, ಜದ್ದುಗೆ ಕುದುರೆಗಳೆಂದರೆ ಎಲ್ಲಿಲ್ಲದ ಪ್ರೀತಿ. ತನ್ನ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಅವರು ಕುದುರೆಗಳ ಮೇಲೆ ತನಗಿರುವ ಪ್ರೀತಿಯ ಸ್ಟೋರಿಗಳನ್ನು ಶೇರ್ ಮಾಡುತ್ತಿರುತ್ತಾರೆ
ಮಂಗಳವಾರದಂದು ಅವರು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ತಾವು ಕುದುರೆ ಜೊತೆಗಿರುವ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಇಮೇಜ್ನೊಂದಿಗೆ ಹೃದಯದಾಕಾರದ ಇಮೋಜಿಯನ್ನು ಬಳಸಿ ‘Forever love,’ ಅಂತ ಬರೆದಿದ್ದಾರೆ. ಕುದರಯ ಇಮೋಜಿಯನ್ನೂ ಜಡೇಜಾ ಅವುಗಳೊಟ್ಟಿಗೆ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಅಲುಗಾಡದೆ ನಿಂತಿರುವ ಕುದುರೆಯ ಕೂದಲಿನ ಮೇಲೆ ಕೈಯಾಡಿಸುತ್ತಿದ್ದಾರೆ. ಕಂದು ಮತ್ತು ಬಿಳಿ ಬಣ್ಣದ ಕುದುರೆ ಹಚ್ಚ ಹಸಿರು ಹುಲ್ಲಿನಿಂದ ಕಂಗೊಳಿಸುತ್ತಿರುವ ಬಯಲು ಪ್ರದೇಶವೊಂದರಲ್ಲಿ ನಿಂತಿದೆ ಮತ್ತು ಸಿಮೆಂಟ್ ಬೇಲಿಯಂತೆ ಕಾಣುತ್ತಿರುವ ಗೋಡೆಯ ಮತ್ತೊಂದು ಪಕ್ಕದಲ್ಲಿ ನಿಂತಿರುವ ಜಡೇಜಾ ಅದರೊಂದಿಗೆ ಸಮಾಲೋಚನೆ ನಡೆಸುತ್ತಿರುವಂತಿದೆ.
❤️? pic.twitter.com/CQi9msLzeN
— Ravindrasinh jadeja (@imjadeja) July 27, 2021
ಜುಲೈ 10ರಂದು ತನ್ನ ಕುದುರೆಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಜಡೇಜಾ, ’ಮಿಸ್ಸಿಂಗ್ ಮೈ ಬಾಯ್ಸ್’ ಮೈ ಬಾಯ್ಸ್ ಎಂದು ಬರೆದುಕೊಂಡಿದ್ದರು. ಅವರ ಪೋಸ್ಟ್ಗಳಿಂದ ರೋಮಾಂಚಿತರಾಗಿರುವ ಅಭಿಮಾನಿಗಳು ಅವರ ಮೇಲೆ ಪ್ರೀತಿಯ ಹೊಳೆ ಹರಿಸುತ್ತಿದ್ದಾರೆ.
ಅಂದಹಾಗೆ ಸರ್ ಜಡೇಜಾಗೆ ಪಾಕಿಸ್ತಾನದಲ್ಲೂ ಸಾಕಷ್ಟು ಫ್ಯಾನ್ಗಳಿದ್ದಾರೆ. ಒಬ್ಬ ಪಾಕಿಸ್ತಾನಿ ಅಭಿಮಾನಿ ಪ್ರತಿಕ್ರಿಯಿಸಿ, ‘ಇಂಗ್ಲೆಂಡ್ ವಿರುದ್ಧ ನಡೆಯುವ ಸರಣಿಗೆ ಗುಡ್ ಲಕ್, ಲವ್ ಫ್ರಂ ಪಾಕಿಸ್ತಾನ,’ ಅಂತ ಬರೆದಿದ್ದಾರೆ.
Best of luck for ur series against England.
Love from Pakistan ??❤??— Arslan Pakistani♡ (@Honestking786) July 27, 2021
ಸ್ಟಾರ್ ಆಲ್-ರೌಂಡರ್ ಪ್ರಸ್ತುತವಾಗಿ ಟೀಮ್ ಇಂಡಿಯಾದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಎರಡು ರಾಷ್ಟ್ರಗಳ ನಡುವೆ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಜಡೇಜಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪರಿಣಿತರು ಹೇಳುತ್ತಿದ್ದಾರೆ.
ಮತ್ತೊಂದೆಡೆ ಇದೇ ವರ್ಷ ಪೆಬ್ರವರಿ-ಮಾರ್ಚ್ನಲ್ಲಿ ಭಾರತ ಪ್ರವಾಸ ಬಂದಿದ್ದ ಆಂಗ್ಲರು, ಟೆಸ್ಟ್ ಸರಣಿಯಲ್ಲಿ ಅನುಭವಿಸಿ ಹೀನಾಯ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಇದನ್ನೂ ಓದಿ: India vs England: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್