India vs England: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಭಾರತೀಯ ಕ್ರಿಕೆಟ್​ನ 23 ಸದಸ್ಯರು ಆಂಗ್ಲರ ನಾಡಿಗೆ ತೆರಳಿದ್ದರು. 20 ದಿನಗಳ ವಿರಾಮದ ಬಳಿಕ ಎಲ್ಲರೂ ಬಯೋ ಬಬಲ್​ನಿಂದ ಹೊರಬಂದಿದ್ದು ಈ ವೇಳೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

India vs England: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್
ಟೀಮ್ ಇಂಡಿಯಾ
Follow us
TV9 Web
| Updated By: Vinay Bhat

Updated on:Jul 15, 2021 | 9:58 AM

ಇಂಗ್ಲೆಂಡ್ (England) ವಿರುದ್ಧ ಆಗಸ್ಟ್​ 4 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್​ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿರುವ ಟೀಮ್ ಇಂಡಿಯಾ (Team India) ಆಟಗಾರರಲ್ಲಿ ಇಬ್ಬರಿಗೆ ಕೊರೋನಾ (Corona) ಸೋಂಕು ದೃಢಪಟ್ಟಿದೆ. ಆಟಗಾರರ ಹೆಸರನ್ನು ಇನ್ನೂ ಗೌಪ್ಯವಾಗಿ ಇಡಲಾಗಿದ್ದು, ಶೀಘ್ರವೇ ಬಿಸಿಸಿಐಯಿಂದ (BCCI) ಅಧಿಕೃತ ಪ್ರಕಟಣೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಭಾರತೀಯ ಕ್ರಿಕೆಟ್​ನ 23 ಸದಸ್ಯರು ಆಂಗ್ಲರ ನಾಡಿಗೆ ತೆರಳಿದ್ದರು. 20 ದಿನಗಳ ವಿರಾಮದ ಬಳಿಕ ಎಲ್ಲರೂ ಬಯೋ ಬಬಲ್​ನಿಂದ ಹೊರಬಂದಿದ್ದು ಈ ವೇಳೆ ಸೋಂಕು ತಗುಲಿರಬಹುದು ಎಂದು ಹೇಳಲಾಗಿದೆ.

“ಹೌದು, ಭಾರತದ ಇಬ್ಬರು ಆಟಗಾರನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ, ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ. ಅವರು ಸರಿಯಾದ ಸ್ಥಳದಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಅವರು ತಂಡದ ಜೊತೆ ಪ್ರಯಾಣ ಬೆಳೆಸುತ್ತಿಲ್ಲ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಜನದಟ್ಟನೆ ಇರುವ ಸ್ಥಳಗಳಿಗೆ ಹೋಗಬಾರದು ಎಂದು ಬಿಸಿಸಿಐ ಟೀಮ್ ಇಂಡಿಯಾ ಕ್ರಿಕೆಟಿಗರಿಗೆ ಖಡಕ್ ಆಗಿ ಹೇಳಿದೆ.

ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್​ ಆರಂಭವಾಗಲಿದ್ದು, ಈ ಪ್ರಯುಕ್ತತ ಇಡೀ ತಂಡ ಡರ್‌ಹ್ಯಾಮ್‌ನ ಬಯೋಬಬಲ್‌ನಲ್ಲಿ ಮರು ಒಟ್ಟು ಸೇರಲಿತ್ತು. ಆದರೆ ಇಬ್ಬರು ಆಟಗಾರರಿಗೆ ಕೊರೋನಾ ಕಾಣಿಸಿಕೊಂಡಿದೆ. ಈ ಪೈಕಿ ಒಬ್ಬರು ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಸೋಂಕಿರುವ ಮತ್ತೊಬ್ಬ ಆಟಗಾರ ಡರ್‌ಹ್ಯಾಮ್‌ಗೆ ಪ್ರಯಾಣಿಸುತ್ತಿಲ್ಲ.

ಇಂಗ್ಲೆಂಡ್​ನಲ್ಲಿ ಕೊರೋನಾ ವೈರಸ್ ಡೆಲ್ಟಾ ರೂಪಾಂತರದಿಂದಾಗಿ ಬಯೋ ಬಬಲ್​ನಲ್ಲಿ ಅಪಾಯ ಹೆಚ್ಚಾಗಿದೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳ ಸುಧಾರಣೆಗಾಗಿ ನಾವು ಪ್ರೋಟೋಕಾಲ್ ನಿಯಮವನ್ನು ಮಾಡಿದ್ದೇವೆ ಎಂದು ಇತ್ತೀಚೆಗಷ್ಟೆ ಇಸಿಬಿಯ ಮುಖ್ಯ ಕಾರ್ಯನಿರ್ವಾಹಕ ಟಾಮ್ ಹ್ಯಾರಿಸನ್ ಹೇಳಿದ್ದರು.

ಭಾರತೀಯ ತಂಡದಲ್ಲಿ ಈಗಾಗಲೇ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಗಾಯಕ್ಕೀಡಾಗಿದ್ದಾರೆ. ಭಾರತದ ಆರಂಭಿಕ ಸ್ಥಾನಕ್ಕೆ ಯಾರು ಬರಲಿದ್ದಾರೆ ಅನ್ನೋದು ತಲೆನೋವಾಗಿದೆ. ಇದರ ಬೆನ್ನಲ್ಲೇ ತಂಡದ ಒರ್ವ ಆಟಗಾರನಿಗೆ ಕೊರೋನಾ ದೃಢ ಪಟ್ಟಿರುವುದು ಆಘಾತಕ್ಕೆ ಕಾರಣವಾಗಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ.

INDW vs ENGW: ಮಂದಾನ ಸ್ಪೋಟಕ ಬ್ಯಾಟಿಂಗ್ ವ್ಯರ್ಥ: 8 ವಿಕೆಟ್​ಗಳಿಂದ ಗೆದ್ದ ಇಂಗ್ಲೆಂಡ್​ಗೆ ಟಿ-20 ಸರಣಿ

Tokyo Olympics: ಒಲಂಪಿಕ್ಸ್​ ಪದಕ ವಿತರಣೆ ಸಮಾರಂಭದಲ್ಲಿ ಮಹತ್ವದ ಬದಲಾವಣೆ.. ಏನದು?

(India vs England Two Indian cricketer in England tests positive one still in isolation)

Published On - 9:51 am, Thu, 15 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ