IND vs SL: ಇಂದು ಭಾರತ-ಶ್ರೀಲಂಕಾ 3ನೇ ಟಿ-20: ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ

TV9 Digital Desk

| Edited By: Vinay Bhat

Updated on:Jul 29, 2021 | 11:13 AM

India vs Sri Lanka: ಇಂದು ನಡೆಯಲಿರುವ ಮೂರನೇ ಟಿ-20 ಯಲ್ಲೂ ಭಾರತದಲ್ಲಿ ಬದಲಾವಣೆ ಅನುಮಾನ. ಆದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಅದಲು-ಬದಲು ಮಾಡುವ ಸಾಧ್ಯತೆ ಇದೆ.

IND vs SL: ಇಂದು ಭಾರತ-ಶ್ರೀಲಂಕಾ 3ನೇ ಟಿ-20: ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ
Shikhar Dhawan

ಇಂದು ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಗೆಲುವಿಗಾಗಿ ಅಂತಿಮ ಹಂತದವರೆಗೂ ಹೋರಾಡಿ ಭಾರತದ (Team India) ಯುವ ಪಡೆ 2ನೇ ಟಿ-20 ಪಂದ್ಯದಲ್ಲಿ ಸೋಲುಂಡಿತು. ಆತಿಥೇಯ ಶ್ರೀಲಂಕಾ ತಂಡ 4 ವಿಕೆಟ್‌ಗಳ ಜಯದೊಂದಿಗೆ ಮೂರು ಪಂದ್ಯಗಳ ಸರಣಿ 1-1 ರಿಂದ ಸಮಬಲ ಕಂಡಿತು. ಹೀಗಾಗಿ ಇಂದು ನಡೆಯಲಿರುವ ನಿರ್ಣಾಯಕ 3ನೇ (3rd T20I) ಹಾಗೂ ಅಂತಿಮ ಟಿ-20 ಪಂದ್ಯ ಕುತೂಹಲ ಕೆರಳಿಸಿದೆ.

ಮೊದಲ ಟಿ-20 ಪಂದ್ಯದಲ್ಲಿ 38 ರನ್​ಗಳ ಭರ್ಜರಿ ಜಯದೊಂದಿಗೆ ಸರಣಿ ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾಕ್ಕೆ ಎರಡನೇ ಪಂದ್ಯ ಆರಂಭಕ್ಕೂ ಮುನ್ನ ಆಘಾತ ಉಂಟಾಯಿತು. ತಂಡದ ಪ್ರಮುಖ ಆಲ್ರೌಂಡರ್ ಕ್ರುನಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಬಂದು ಅವರ ಸಂಪರ್ಕದಲ್ಲಿದ್ದ ಕೆಲವು ಆಟಗಾರರು ಕೂಡ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯದಂತಾಯಿತು. ಹೀಗಾಗಿ ಪ್ರಮುಖ ಆಟಗಾರರ ಅಲಭ್ಯತೆ ನಡುವೆ ಬುಧವಾರ ಎರಡನೇ ಪಂದ್ಯವನ್ನಾಡಿದ ಭಾರತ ಅಂದುಕೊಂಡಂತೆ ಉತ್ತಮ ಪ್ರದರ್ಶನ ನೀಡಲಿಲ್ಲ.

ಇಂದು ನಡೆಯಲಿರುವ ಮೂರನೇ ಟಿ-20 ಯಲ್ಲೂ ಭಾರತದಲ್ಲಿ ಬದಲಾವಣೆ ಅನುಮಾನ. ಆದರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಅದಲು-ಬದಲು ಮಾಡುವ ಸಾಧ್ಯತೆ ಇದೆ. ಓಪನರ್ ಆಗಿ ಶಿಖರ್ ಧವನ್ ಜೊತೆ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಸ್ಯಾಮ್ಸನ್​ಗೆ ಏಕದಿನ ಸರಣಿಯಿಂದಲೂ ಅವಕಾಶ ನೀಡಲಾಗುತ್ತಿದೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬರುತ್ತಿರುವ ಇವರು ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಓಪನರ್ ಆಗಿ ಆಡಬಹುದು.

ದೇವದತ್ ಪಡಿಕ್ಕಲ್ ಮೂರನೇ ಕ್ರಮಾಂಕದಲ್ಲಿ ಆಡಿದರೆ, ರುತುರಾಜ್ ಗಾಯಕ್ವಾಡ್ ನಂತರದ ಸ್ಥಾನದಲ್ಲಿ ಬರಬಹುದು. ಬೌಲಿಂಗ್​ನಲ್ಲೂ ಭಾರತ ಎರಡನೇ ಪಂದ್ಯದಲ್ಲಿ ಅಷ್ಟೊಂದು ಕಮಾಲ್ ಮಾಡಿಲ್ಲ. ಚೇತನ್ ಸಕರಿಯಾ ದುಬಾರಿಯಾದರು. ಹೀಗಾಗಿ ಗೆಲ್ಲಲೇ ಬೇಕಾದ ಪಂದ್ಯವಾಗಿದ್ದರಿಂದ ಧವನ್ ಮಾಸ್ಟರ್ ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ.

ಮಳೆಯ ಕಾಟವಿದೆಯೇ:

ಇಂದಿನ ಪಂದ್ಯಕ್ಕೆ ಮಳೆಯ ಕಾಟವಿದೆಯೇ ಎಂಬುದನ್ನು ನೋಡುವುದಾದರೆ, ದಿನದ ಒಟ್ಟಾರೆ ಮುನ್ಸೂಚನೆಯ ಹವಾಮಾನವು ಭಾಗಶಃ ಬಿಸಿಲಿನಿಂದ ಕೂಡಿರುತ್ತದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ, ಪಂದ್ಯಕ್ಕೆ ಮಳೆ ಅಡ್ಡಿಸುವ ಸಾಧ್ಯತೆ ಇಲ್ಲ ಎಂದು ಹವಮಾನ ಇಲಾಖೆ ತಿಳಿಸಿದೆ.

3ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಶಿಖರ್ ಧವನ್ (ನಾಯಕ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ದೇವದತ್ ಪಡಿಕ್ಕಲ್ , ರುತುರಾಜ್ ಗಾಯಕ್ವಾಡ್ , ನಿತೀಶ್ ರಾಣ, ಭುವನೇಶ್ವರ್ ಕುಮಾರ್ , ಕುಲ್ದೀಪ್ ಯಾದವ್ , ರಾಹುಲ್ ಚಹಾರ್ , ನವ್​ದೀಪ್ ಸೈನಿ , ಚೇತನ್ ಸಕರಿಯಾ , ವರುಣ್ ಚಕ್ರವರ್ತಿ.

ಪಂದ್ಯ ಆರಂಭ: ಟಾಸ್ ಪ್ರಕ್ರಿಯೆ ಸಂಜೆ 7:30ಕ್ಕೆ, ಪಂದ್ಯ ಆರಂಭ ರಾತ್ರಿ 8 ಗಂಟೆಗೆ.

ನೇರ ಪ್ರಸಾರ: ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ಡಿ, ಸೋನಿ ಟೆನ್ 3, ಸೋನಿ ಟೆನ್ 3 ಎಚ್ಡಿ ಯಲ್ಲಿ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

Tokyo Olympic: ಬಾಕ್ಸಿಂಗ್, ಬ್ಯಾಡ್ಮಿಂಟನ್, ಹಾಕಿಯಲ್ಲಿ ಕ್ವಾರ್ಟರ್ ಫೈನಲ್, ಆರ್ಚರಿಯಲ್ಲಿ ಪ್ರೀಕ್ವಾರ್ಟರ್: ಭಾರತ ಭರ್ಜರಿ ಪ್ರದರ್ಶನ

Devdutt Padikkal: ಚೊಚ್ಚಲ ಪಂದ್ಯದಲ್ಲೇ ದೇವದತ್ ಪಡಿಕ್ಕಲ್ ಸ್ಟನ್ನಿಂಗ್ ಸಿಕ್ಸ್: ಇಲ್ಲಿದೆ ನೋಡಿ ರೋಚಕ ವಿಡಿಯೋ

(India vs Sri Lanka 3rd T20 Full Schedule Full Squads Live Streaming Date Time Venue all you need to know)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada