ಭಾರತದ ಸ್ಟಾರ್ ಆಲ್-ರೌಂಡರ್ ರವೀಂದ್ರ ಜಡೇಜಾಗೆ ಕುದುರೆಗಳ ಮೇಲಿರುವ ವ್ಯಾಮೋಹ ನಿಮಗೆ ಗೊತ್ತಾ?

ಜುಲೈ 10ರಂದು ತನ್ನ ಕುದುರೆಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಜಡೇಜಾ, ’ಮಿಸ್ಸಿಂಗ್ ಮೈ ಬಾಯ್ಸ್’ ಮೈ ಬಾಯ್ಸ್ ಎಂದು ಬರೆದುಕೊಂಡಿದ್ದರು. ಅವರ ಪೋಸ್ಟ್​ಗಳಿಂದ ರೋಮಾಂಚಿತರಾಗಿರುವ ಅಭಿಮಾನಿಗಳು ಅವರ ಮೇಲೆ ಪ್ರೀತಿಯ ಹೊಳೆ ಹರಿಸುತ್ತಿದ್ದಾರೆ.

ಭಾರತದ ಸ್ಟಾರ್ ಆಲ್-ರೌಂಡರ್ ರವೀಂದ್ರ ಜಡೇಜಾಗೆ ಕುದುರೆಗಳ ಮೇಲಿರುವ ವ್ಯಾಮೋಹ ನಿಮಗೆ ಗೊತ್ತಾ?
ರವೀಂದ್ರ ಜಡೇಜಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2021 | 1:56 AM

ಭಾರತ ಮತ್ತು ವಿಶ್ವದ ಅಗ್ರಮಾನ್ಯ ಆಲ್-ರೌಂಡರ್ ರವೀಂದ್ರ ಜಡೇಜಾ ಅರ್ಧ ಶತಕ ಬಾರಿಸಿದಾಗ ಇಲ್ಲವೇ ಖ್ಯಾತ ಬೌಲರ್​ನ ಎಸೆತವೊಂದನ್ನು ಸಿಕ್ಸರ್​ಗೆ ಎತ್ತಿದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಬ್ಯಾಟನ್ನು ಖಡ್ಗದಂತೆ ತಿರುಗಿಸುತ್ತಾ ಅವರು ಸಂಭ್ರಮಿಸುತ್ತಾರೆ. ಕ್ರಿಕೆಟ್​ ಮೈದಾನಗಳಲ್ಲಿ ಜಡೇಜಾ ತನ್ನ ಕರಾರುವಾಕ್ ಬೌಲಿಂಗ್, ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಉತ್ಕೃಷ್ಟ ಫೀಲ್ಡಿಂಗ್​ನಿಂದ ಹೆಸರು ಮಾಡಿದ್ದಾರೆ, ಆದರೆ ಮೈದಾನದ ಹೊಗಿನ ಅವರವ ಬದುಕಿನ ಬಗ್ಗೆ ಅವರ ಅಭಿಮಾನಗಳಿಗೆ ಗೊತ್ತಿರಬಹದು. ಸಾಕು ಪ್ರಾಣಿಗಳ ಮೇಲೆ ಅವರಿಗೆ ವಿಪರೀತ ವ್ಯಾಮೋಹ ಅಂತ ಕೆಲವರಿಗಷ್ಟೇ ಗೊತ್ತಿದೆ. ಪೆಟ್​ಗಳೆಂದಾಕ್ಷಣ ನಾವು ಕೇವಲ ಬೆಕ್ಕು ಮತ್ತು ನಾಯಿಗಖ ಮತ್ತೆ ಮಾತ್ರ ಯೋಚಿಸಿತ್ತೇವೆ. ಆದರೆ, ಜದ್ದುಗೆ ಕುದುರೆಗಳೆಂದರೆ ಎಲ್ಲಿಲ್ಲದ ಪ್ರೀತಿ. ತನ್ನ ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್​ ಖಾತೆಗಳಲ್ಲಿ ಅವರು ಕುದುರೆಗಳ ಮೇಲೆ ತನಗಿರುವ ಪ್ರೀತಿಯ ಸ್ಟೋರಿಗಳನ್ನು ಶೇರ್​ ಮಾಡುತ್ತಿರುತ್ತಾರೆ

ಮಂಗಳವಾರದಂದು ಅವರು ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್​ನಲ್ಲಿ ತಾವು ಕುದುರೆ ಜೊತೆಗಿರುವ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಇಮೇಜ್​ನೊಂದಿಗೆ ಹೃದಯದಾಕಾರದ ಇಮೋಜಿಯನ್ನು ಬಳಸಿ ‘Forever love,’ ಅಂತ ಬರೆದಿದ್ದಾರೆ. ಕುದರಯ ಇಮೋಜಿಯನ್ನೂ ಜಡೇಜಾ ಅವುಗಳೊಟ್ಟಿಗೆ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಅಲುಗಾಡದೆ ನಿಂತಿರುವ ಕುದುರೆಯ ಕೂದಲಿನ ಮೇಲೆ ಕೈಯಾಡಿಸುತ್ತಿದ್ದಾರೆ. ಕಂದು ಮತ್ತು ಬಿಳಿ ಬಣ್ಣದ ಕುದುರೆ ಹಚ್ಚ ಹಸಿರು ಹುಲ್ಲಿನಿಂದ ಕಂಗೊಳಿಸುತ್ತಿರುವ ಬಯಲು ಪ್ರದೇಶವೊಂದರಲ್ಲಿ ನಿಂತಿದೆ ಮತ್ತು ಸಿಮೆಂಟ್​ ಬೇಲಿಯಂತೆ ಕಾಣುತ್ತಿರುವ ಗೋಡೆಯ ಮತ್ತೊಂದು ಪಕ್ಕದಲ್ಲಿ ನಿಂತಿರುವ ಜಡೇಜಾ ಅದರೊಂದಿಗೆ ಸಮಾಲೋಚನೆ ನಡೆಸುತ್ತಿರುವಂತಿದೆ.

ಜುಲೈ 10ರಂದು ತನ್ನ ಕುದುರೆಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಜಡೇಜಾ, ’ಮಿಸ್ಸಿಂಗ್ ಮೈ ಬಾಯ್ಸ್’ ಮೈ ಬಾಯ್ಸ್ ಎಂದು ಬರೆದುಕೊಂಡಿದ್ದರು. ಅವರ ಪೋಸ್ಟ್​ಗಳಿಂದ ರೋಮಾಂಚಿತರಾಗಿರುವ ಅಭಿಮಾನಿಗಳು ಅವರ ಮೇಲೆ ಪ್ರೀತಿಯ ಹೊಳೆ ಹರಿಸುತ್ತಿದ್ದಾರೆ.

ಅಂದಹಾಗೆ ಸರ್ ಜಡೇಜಾಗೆ ಪಾಕಿಸ್ತಾನದಲ್ಲೂ ಸಾಕಷ್ಟು ಫ್ಯಾನ್​ಗಳಿದ್ದಾರೆ. ಒಬ್ಬ ಪಾಕಿಸ್ತಾನಿ ಅಭಿಮಾನಿ ಪ್ರತಿಕ್ರಿಯಿಸಿ, ‘ಇಂಗ್ಲೆಂಡ್​ ವಿರುದ್ಧ ನಡೆಯುವ ಸರಣಿಗೆ ಗುಡ್​ ಲಕ್, ಲವ್ ಫ್ರಂ ಪಾಕಿಸ್ತಾನ,’ ಅಂತ ಬರೆದಿದ್ದಾರೆ.

ಸ್ಟಾರ್ ಆಲ್​-ರೌಂಡರ್ ಪ್ರಸ್ತುತವಾಗಿ ಟೀಮ್ ಇಂಡಿಯಾದೊಂದಿಗೆ ಇಂಗ್ಲೆಂಡ್​ ಪ್ರವಾಸದಲ್ಲಿದ್ದು, ಎರಡು ರಾಷ್ಟ್ರಗಳ ನಡುವೆ ಟೆಸ್ಟ್​ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಜಡೇಜಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಪರಿಣಿತರು ಹೇಳುತ್ತಿದ್ದಾರೆ.

ಮತ್ತೊಂದೆಡೆ ಇದೇ ವರ್ಷ ಪೆಬ್ರವರಿ-ಮಾರ್ಚ್​ನಲ್ಲಿ ಭಾರತ ಪ್ರವಾಸ ಬಂದಿದ್ದ ಆಂಗ್ಲರು, ಟೆಸ್ಟ್​ ಸರಣಿಯಲ್ಲಿ ಅನುಭವಿಸಿ ಹೀನಾಯ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಇದನ್ನೂ ಓದಿ: India vs England: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಕೊರೋನಾ ಪಾಸಿಟಿವ್

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ