Devdutt Padikkal: ಚೊಚ್ಚಲ ಪಂದ್ಯದಲ್ಲೇ ದೇವದತ್ ಪಡಿಕ್ಕಲ್ ಸ್ಟನ್ನಿಂಗ್ ಸಿಕ್ಸ್: ಇಲ್ಲಿದೆ ನೋಡಿ ರೋಚಕ ವಿಡಿಯೋ
India vs Sri Lanka T20I: ದೇವದತ್ ಪಡಿಕ್ಕಲ್ ನಿರೀಕ್ಷೆಯನ್ನು ಹುಸಿ ಮಾಡದೆ 23 ಎಸೆತಗಳಲ್ಲಿ 1 ಬೌಂಡರಿ, ಸಿಕ್ಸರ್ ಸಿಡಿಸಿ 29 ರನ್ ಗಳಿಸಿದರು. ಅದರಲ್ಲೂ ಪಡಿಕ್ಕಲ್ ಸಿಡಿಸಿದ ಒಂದು ಸಿಕ್ಸ್ ಅತ್ಯುತ್ತಮವಾಗಿತ್ತು.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಕಣಕ್ಕಿಳಿದ ಭಾರತ ತಂಡ ಸೋಲುಕಂಡಿತು. 4 ವಿಕೆಟ್ಗಳ ರೋಚಕ ಜಯ ಸಾಧಿಸಿದ ಸಿಂಹಳೀಯರು ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದ್ದಾರೆ. ಟೀಮ್ ಇಂಡಿಯಾ ಪರ ಎರಡನೇ ಟಿ-20 ಪಂದ್ಯದಲ್ಲಿ ಸಾಕಷ್ಟು ಹೊಸ ಆಟಗಾರರು ಕಣಕ್ಕಿಳಿದರು. ಈ ಪೈಕಿ ಕನ್ನಡಿಗ ದೇವದತ್ ಪಡಿಕ್ಕಲ್ಗೆ ಕೂಡ ಅವಕಾಶ ನೀಡಲಾಯಿತು. ಚೊಚ್ಚಲ ಪಂದ್ಯದಲ್ಲೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಭರವಸೆ ಮೂಡಿಸಿದ್ದಾರೆ.
ಕ್ರುನಾಲ್ ಪಾಂಡ್ಯ ಅವರಿಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಇವರ ಸಂಪರ್ಕದಲ್ಲಿದ್ದ ಆಟಗಾರರನ್ನು ಐಸೋಲೇಷನ್ಗೆ ಒಳಪಡಿಸಲಾಗಿದೆ. ಹೀಗಾಗಿ ನಿನ್ನೆಯ ಪಂದ್ಯದಲ್ಲಿ ಬೆಂಚ್ ಕಾಯುತ್ತಿದ್ದ ಆಟಗಾರರಿಗೆ ಅವಕಾಶ ಒದಗಿಬಂತು. ಓಪನರ್ ಆಗಿ ಧವನ್ ಜೊತೆ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದು 21 ರನ್ ಗಳಿಸಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ದೇವದತ್ ಪಡಿಕ್ಕಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಐಪಿಎಲ್ ಮಾತ್ರವಲ್ಲದೆ ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಪಡಿಕ್ಕಲ್ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯಾವರೀತಿ ಆಡಬಹುದು ಎಂಬುದು ಕುತೂಹಲ ಕೆರಳಿಸಿತ್ತು.
ಅದರಂತೆ ಪಡಿಕ್ಕಲ್ ನಿರೀಕ್ಷೆಯನ್ನು ಹುಸಿ ಮಾಡದೆ 23 ಎಸೆತಗಳಲ್ಲಿ 1 ಬೌಂಡರಿ, ಸಿಕ್ಸರ್ ಸಿಡಿಸಿ 29 ರನ್ ಗಳಿಸಿದರು. ಅದರಲ್ಲೂ ಪಡಿಕ್ಕಲ್ ಸಿಡಿಸಿದ ಒಂದು ಸಿಕ್ಸ್ ಅತ್ಯುತ್ತಮವಾಗಿತ್ತು. 11ನೇ ಓವರ್ನ ಸಿಲ್ವಾ ಅವರ ಬೌಲಿಂಗ್ನಲ್ಲಿ ಕ್ರೀಸ್ನಲ್ಲೇ ಕೂತು ಚೆಂಡನ್ನು ಮಿಡ್ ವಿಕೆಟ್ನಲ್ಲಿ ಸಿಕ್ಸ್ಗೆ ಅಟ್ಟಿದರು. ಚೆಂಡು ಭಾರತದ ಡಗೌಟ್ ಕಡೆ ಬಿತ್ತು. ತಂಡದ ಕೋಚ್ ದ್ರಾವಿಡ್ ಕೂಡ ಪಡಿಕ್ಕಲ್ ಸಿಡಿಸಿದ ಸಿಕ್ಸ್ ಕಂಡು ಸಂತಸಗೊಂಡರು.
? ??????? ?
Padikkal clears deep mid-wicket with ease ?
Tune into #SonyLIV now ? https://t.co/1qIy7cs7B6 ??#SLvsINDonSonyLIV #SLvIND #DevduttPadikkal #Six pic.twitter.com/bLIDNk8d6H
— SonyLIV (@SonyLIV) July 28, 2021
ಎರಡನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಾಯಕ ಶಿಖರ್ ಧವನ್ ಅವರ 40 ರನ್, ಪಡಿಕ್ಕಲ್ ಅವರ 29 ಹಾಗೂ ರುತುರಾಜ್ ಗಾಯಕ್ವಾಡ್ ಅವರ 21 ರನ್ಗಳ ನೆರವಿನಿಂದ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾಕ್ಕೆ ಭಾರತ ಕಠಿಣ ಪೈಪೋಟಿ ನೀಡಿದ್ದು ಮಾತ್ರ ಸುಳ್ಳಲ್ಲ. ಕೊನೆಯ ಓವರ್ ವರೆಗೂ ಪಂದ್ಯವನ್ನು ತಂದಿಟ್ಟರು. 19.4 ಓವರ್ನಲ್ಲಿ ಲಂಕಾ 6 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ ರೋಚಕ ಜಯ ಸಾಧಿಸಿತು. ಧನಂಜಯ ಡಿ ಸಿಲ್ವಾ ಅಜೇಯ 40 ರನ್ ಬಾರಿಸಿದರೆ, ಮಿನೋದ್ ಭಾನುಕಾ 36 ರನ್ ಗಳಿಸಿದರು.
4 ವಿಕೆಟ್ಗಳ ಜಯದೊಂದಿಗೆ ಶ್ರೀಲಂಕಾ ತಂಡ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ. ಇಂದು ನಿರ್ಣಾಯಕ ಅಂತಿಮ ಪಂದ್ಯ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯವಾಗುವ ನಿರೀಕ್ಷೆ ಇದೆ.
Tokyo Olympics: ಹಾಕಿಯಲ್ಲಿ ಭಾರತ ಪುರುಷರ ತಂಡಕ್ಕೆ ರೋಚಕ ಜಯ: ಕ್ವಾರ್ಟರ್ ಫೈನಲ್ಗೆ ಮನ್ಪ್ರೀತ್ ಪಡೆ
Tokyo Olympics: ಗೆಲುವಿನ ಓಟ ಮುಂದುವರೆಸಿದ ಪಿವಿ ಸಿಂಧೂ: ಕ್ವಾರ್ಟರ್ ಫೈನಲ್ಗೆ ಲಗ್ಗೆ
(India vs Sri Lanka Devdutt Padikkal brilliant six the ball directly reached Team Indias dugout viral video)