AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Dravid: ರಾಹುಲ್ ದ್ರಾವಿಡ್ ಬೆಸ್ಟ್ ಕೋಚ್ ಎಂಬುದಕ್ಕೆ ಇದುವೇ ಸಾಕ್ಷಿ

India vs Sri Lanka T20:

Rahul Dravid: ರಾಹುಲ್ ದ್ರಾವಿಡ್ ಬೆಸ್ಟ್ ಕೋಚ್ ಎಂಬುದಕ್ಕೆ ಇದುವೇ ಸಾಕ್ಷಿ
Rahul Dravid
TV9 Web
| Edited By: |

Updated on: Jul 29, 2021 | 4:22 PM

Share

ಕೊಲಂಬೋದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ದದ 2ನೇ ಟಿ20 ಪಂದ್ಯವನ್ನು ಶ್ರೀಲಂಕಾ ತಂಡವು 4 ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಟೀಮ್ ಇಂಡಿಯಾ ನೀಡಿದ 133 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಲಂಕಾ ಬ್ಯಾಟ್ಸ್​ಮನ್ 19.4 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು.

ಈ ಪಂದ್ಯದ ವೇಳೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡ ಗಮನ ಸೆಳೆದಿದ್ದರು. ಪಂದ್ಯಕ್ಕೆ ಮಳೆಯಿಂದ  ಉಂಟಾದ ಅಡಚಣೆ ಸಂದರ್ಭದಲ್ಲಿ ದ್ರಾವಿಡ್ ಕಾರ್ಯಪ್ರವೃತ್ತರಾಗಿದ್ದರು. ಅಲ್ಲದೆ ತಕ್ಷಣವೇ ನಾಯಕ ಶಿಖರ್ ಧವನ್​ಗೆ 12ನೇ ಆಟಗಾರ ಸಂದೀಪ್ ವಾರಿಯರ್ ಅವರ ಕೈಯಲ್ಲಿ ಚೀಟಿಯೊಂದನ್ನು ರವಾನಿಸಿದ್ದರು.

18ನೇ ಓವರ್​ ವೇಳೆ ಮಳೆಯಿಂದ ಉಂಟಾದ ಅಡಚಣೆಯಿಂದ ಅಂಪೈರ್​ಗಳು ಸ್ವಲ್ಪ ಸಮಯದವರೆಗೆ ಪಂದ್ಯವನ್ನು ನಿಲ್ಲಿಸಿದರು. ಅಲ್ಲದೆ ಪಿಚ್ ಅನ್ನು ಮುಚ್ಚಲು ಗ್ರೌಂಡ್ ಸಿಬ್ಬಂದಿಗಳು ಕೂಡ ಸಿದ್ಧರಾಗಿದ್ದರು. ಇದೇ ವೇಳೆ ಶ್ರೀಲಂಕಾ ತಂಡವು 18 ಓವರ್‌ಗಳಲ್ಲಿ 6 ವಿಕೆಟ್‌ಗೆ 113 ರನ್ ಗಳಿಸಿ ಗೆಲುವಿನತ್ತ ಮುಖ ಮಾಡಿತ್ತು. ಈ ವೇಳೆ 12ನೇ ಆಟಗಾರನ ಮೂಲಕ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾಗೆ ನೀಡಿದ ಸಂದೇಶ ಏನಾಗಿತ್ತು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

ಇದೀಗ ಸಂದೀಪ್ ವಾರಿಯರ್ ಮೂಲಕ ದ್ರಾವಿಡ್ ನೀಡಿದ ಸಂದೇಶ ಏನೆಂಬುದು ಬಹಿರಂಗವಾಗಿದೆ. ಮಳೆ ಬಂದರೆ ಡಕ್​ವರ್ತ್​ ಲೂಯಿಸ್ ನಿಯಮ ಅನ್ವಯವಾಗುವ ಸಾಧ್ಯತೆಯಿತ್ತು. ಇದನ್ನು ಮುಂಗಡಿದ್ದ ರಾಹುಲ್ ದ್ರಾವಿಡ್ ಡಕ್​ವರ್ತ್ ನಿಯಮ ಅನ್ವಯವಾದರೆ ಏನು ಮಾಡಬೇಕು, ಯಾರಿಗೆ ಲಾಭವಾಗುವ ಸಾಧ್ಯತೆಯಿದೆ ಎಂಬುದರ ಸ್ಪಷ್ಟ ಮಾಹಿತಿಯನ್ನು ತಕ್ಷಣವೇ ಚೀಟಿ ಮೂಲಕ ಟೀಮ್ ಇಂಡಿಯಾ ನಾಯಕನಿಗೆ ಬರೆದು ಕಳುಹಿಸಿದ್ದರು.

ಆದರೆ ಟೀಮ್ ಇಂಡಿಯಾ ದುರಾದೃಷ್ಟ ಸ್ವಲ್ಪ ಸಮಯದಲ್ಲೇ ಮಳೆ ನಿಂತಿದ್ದರಿಂದ ಪಂದ್ಯವನ್ನು ಮುಂದುವರೆಸಲಾಯಿತು. ಹೀಗಾಗಿ ಶ್ರೀಲಂಕಾ ತಂಡವು 133 ರನ್​ಗಳ ಗುರಿಯನ್ನು ಸುಲಭವಾಗಿ ಚೇಸ್ ಮಾಡಿತು. ಇದೀಗ ಪಂದ್ಯದ ವೇಳೆ ದ್ರಾವಿಡ್ ತೆಗೆದುಕೊಂಡಿದ್ದ ಪೂರ್ವ ಸಿದ್ಧತೆಗಳ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಎಲ್ಲರೂ ಪಂದ್ಯಕ್ಕೆ ಮಳೆಯ ಅಡಚಣೆ ಎಂದು ಭಾವಿಸುತ್ತಿದ್ದ ವೇಳೆ ರಾಹುಲ್ ದ್ರಾವಿಡ್ ಮುಂದೇನಾಗಲಿದೆ ಎಂದು ಯೋಚಿಸುತ್ತಿದ್ದರು. ಅದರಂತೆ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ಟೀಮ್ ಇಂಡಿಯಾ ನಾಯಕನಿಗೆ ರವಾನಿಸಿದ್ದರು. ಒಬ್ಬ ಬೆಸ್ಟ್ ಕೋಚ್ ಮೈದಾನದ ಹೊರಗೆ ಹೀಗಿರಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೂ ದಿ ಲೆಜೆಂಡ್ ರಾಹುಲ್ ದ್ರಾವಿಡ್ ಸ್ಪಷ್ಟ ಉದಾಹರಣೆಯಾಗಿ ನಿಂತಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ರಾಹುಲ್ ದ್ರಾವಿಡ್ ಅವರು ಬೆಸ್ಟ್ ಕೋಚ್ ಎಂಬುದಕ್ಕೆ ಶ್ರೀಲಂಕಾ-ಭಾರತ ನಡುವಣ 2ನೇ ಟಿ20 ಪಂದ್ಯವೇ ಸಾಕ್ಷಿ ಎಂದು ಹಲವರು ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಕಣಕ್ಕಿಳಿದ ಯುವಪಡೆ: ಭಾರತ-ಶ್ರೀಲಂಕಾ ನಡುವಣ 2ನೇ ಟಿ20 ಪಂದ್ಯದ ವೇಳೆ ಟೀಮ್ ಇಂಡಿಯಾ ಯುವ ಪಡೆ ಕಣಕ್ಕಿಳಿದಿತ್ತು. ಕೊರೋನಾ ಸೋಂಕಿಗೆ ಒಳಗಾಗಿದ್ದ ಕಾರಣ ಕೃನಾಲ್ ಪಾಂಡ್ಯ ಆಡಿರಲಿಲ್ಲ. ಹಾಗೆಯೇ ಅವರ ಸಮೀಪವರ್ತಿ 8 ಆಟಗಾರರು ಕೂಡ ಐಸೋಲೇಷನ್​ಗೆ ಒಳಗಾಗಿದ್ದರು. ಹೀಗಾಗಿ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಮನೀಶ್ ಪಾಂಡೆ ಮತ್ತು ಇಶಾನ್ ಕಿಶನ್ ಕಣಕ್ಕಿಳಿದಿರಲಿಲ್ಲ. ಇವರ ಬದಲಿಗೆ ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ನಿತೀಶ್ ರಾಣಾ, ಕುಲದೀಪ್ ಯಾದವ್, ರಾಹುಲ್ ಚಹರ್, ಚೇತನ್ ಸಕಾರಿಯಾ ಅವಕಾಶ ಪಡೆದಿದ್ದರು.

2ನೇ ಟಿ20 ಪಂದ್ಯದ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಚೇತನ್ ಸಕಾರಿಯಾ, ರಾಹುಲ್ ಚಹರ್

ಇದನ್ನೂ ಓದಿ: Viral Story: ಹಿಂದೂಗಳು ಹೋಗಲು ಹೆದರುವ ಏಕೈಕ ದೇವಸ್ಥಾನ ಇದು..!

ಇದನ್ನೂ ಓದಿ: T20 ವಿಶ್ವಕಪ್​ಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ನ್ನು ಪ್ರಕಟಿಸಿದ ವಿರೇಂದ್ರ ಸೆಹ್ವಾಗ್

(Rahul Dravid sent a 12th man with chit during Sri Lanka vs India 2nd T20I)