ಕೊಹ್ಲಿ, ರೋಹಿತ್ ಅಲ್ಲ, ಈತ ಟೀಮ್ ಇಂಡಿಯಾಗೆ ಕಪ್ ಗೆದ್ದು ಕೊಡಲಿದ್ದಾನೆ..!

TV9 Digital Desk

| Edited By: Zahir Yusuf

Updated on:Jul 30, 2021 | 10:53 PM

Team India: ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಕೊಹ್ಲಿ, ರೋಹಿತ್ ಅಲ್ಲ, ಈತ ಟೀಮ್ ಇಂಡಿಯಾಗೆ ಕಪ್ ಗೆದ್ದು ಕೊಡಲಿದ್ದಾನೆ..!
Rohit sharma-Virat kohli
Follow us

ಟೀಮ್ ಇಂಡಿಯಾ ಪರ ಸೂರ್ಯಕುಮಾರ್ ಯಾದವ್ ಹೊಸ ಭರವಸೆ ಹುಟ್ಟುಹಾಕಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಆಡಿರುವ ಮೂರು ಇನಿಂಗ್ಸ್​ನಲ್ಲಿ 2 ಅರ್ಧಶತಕ ಬಾರಿಸಿರುವ ಸೂರ್ಯ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವುದು ಬಹುತೇಕ ಖಚಿತ. ಈಗಾಗಲೇ ಚುಟುಕು ಕ್ರಿಕೆಟ್​ನಲ್ಲಿ ಭಾರತದ ಪರ 7 ಸಿಕ್ಸ್ ಹಾಗೂ 14 ಬೌಂಡರಿಗಳನ್ನು ಬಾರಿಸಿರುವ ಮುಂಬೈ ದಾಂಡಿಗ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಪ್ರಬಲ ಬ್ಯಾಟಿಂಗ್ ಶಕ್ತಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್.

ಅಕ್ಟೋಬರ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕುರಿತಾಗಿ ಮಾತನಾಡಿದ ಬ್ರಾಡ್ ಹಾಗ್, ಈ ಬಾರಿ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ಫಲಿತಾಂಶದಲ್ಲಿ ದೊಡ್ಡ ಬದಲಾವಣೆ ಮಾಡಲಿದ್ದಾರೆ ಎಂದಿದ್ದಾರೆ. ಅವರು ಪ್ರಸ್ತುತ ಫಾರ್ಮ್ ಹಾಗೂ ಬ್ಯಾಟಿಂಗ್ ಶೈಲಿ ನೋಡಿದರೆ ಖಂಡಿತವಾಗಿಯೂ ಆತ ಭಾರತಕ್ಕೆ ಟ್ರೋಫಿ ಗೆದ್ದುಕೊಡಲಿದ್ದಾರೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.

ನನ್ನ ಪ್ರಕಾರ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಪ್ರದರ್ಶನ ನೀಡಲಿದ್ದಾರೆ. ಆತ ವಿಭಿನ್ನ ರೀತಿಯ ಕ್ರಿಕೆಟಿಗ. ಆತನು ಅತ್ಯುತ್ತಮ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದು, ಅದರಲ್ಲೂ ರಾಂಪ್ ಶಾಟ್ ಅನ್ನು ವಿಭಿನ್ನ ರೀತಿಯಲ್ಲಿ ಆಡುತ್ತಾನೆ. ಅದು ಆಫ್ ಸೈಡ್ ಆಗಿರಲಿ ಅಥವಾ ಲೆಗ್ ಸೈಡ್ ಆಗಿರಲಿ. ಹೀಗಾಗಿಯೇ ಆತ ಬೌಲರುಗಳ ಪಾಲಿಗೆ ಅಪಾಯಕಾರಿಯಾಗಿದ್ದಾನೆ ಹಾಗ್ ತಿಳಿಸಿದರು.

ಇನ್ನು ಟಿ20 ವಿಶ್ವಕಪ್​ನಲ್ಲಿ 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಕಣಕ್ಕಿಳಿಯಲ್ಲಿದ್ದು, ಈ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಬ್ರಾಡ್ ಹಾಗ್ ಭವಿಷ್ಯ ನುಡಿದರು. ಹಾಗೆಯೇ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾ ಪರ 8 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಇದೀಗ ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ. 3 ಏಕದಿನ ಪಂದ್ಯಗಳಲ್ಲಿ 62 ರ ಸರಾಸರಿಯಲ್ಲಿ 124 ರನ್ ಗಳಿಸಿದ್ದಾರೆ. ಹಾಗೆಯೇ ಟಿ20 ಯಲ್ಲಿ ಅವರು 4 ಪಂದ್ಯಗಳಲ್ಲಿ 3 ಇನಿಂಗ್ಸ್ ಆಡಿದ್ದು, ಅದರಲ್ಲಿ 46.3 ಸರಾಸರಿಯಲ್ಲಿ 139 ರನ್ ಕಲೆಹಾಕಿದ್ದಾರೆ. ಪ್ರಸ್ತುತ ಫಾರ್ಮ್​ನಲ್ಲಿರುವ ಸೂರ್ಯಕುಮಾರ್ ಅವರ ಟಿ20 ಸ್ಟ್ರೈಕ್ ರೇಟ್ 170 ರ ಅಸುಪಾಸಿನಲ್ಲಿದೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಪ್ರಮುಖ ಪಾತ್ರವಹಿಸಲಿದ್ದಾರೆ.

ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ: ಸದ್ಯ ಶ್ರೀಲಂಕಾ ಸರಣಿಯಲ್ಲಿರುವ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್​ ವಿರುದ್ದದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೀಗ ಕೊರೋನಾ ಸೋಂಕಿಗೆ ಒಳಗಾಗಿರುವ ಕೃನಾಲ್ ಪಾಂಡ್ಯ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದ ಕಾರಣ ಸೂರ್ಯಕುಮಾರ್ ಯಾದವ್ ಐಸೋಲೇಷನ್​ನಲ್ಲಿದ್ದಾರೆ. ಈಗಾಗಲೇ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ನೆಗೆಟಿವ್ ವರದಿ ಬಂದರೆ ಶೀಘ್ರದಲ್ಲೇ ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(Suryakumar Yadav might be the Player the Series at T20 World Cup: Brad Hogg)

ತಾಜಾ ಸುದ್ದಿ

Related Stories

Click on your DTH Provider to Add TV9 Kannada