AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Story: ಹಿಂದೂಗಳು ಹೋಗಲು ಹೆದರುವ ಏಕೈಕ ದೇವಸ್ಥಾನ ಇದು..!

Trending news: ನಂಬಿಕೆಯ ಪ್ರಕಾರ, ದೇವಾಲಯವು ಚಿನ್ನ, ಬೆಳ್ಳಿ, ಕಂಚು ಮತ್ತು ಕಬ್ಬಿಣದಿಂದ ಮಾಡಿದ ನಾಲ್ಕು ಅಗೋಚರ ಬಾಗಿಲುಗಳನ್ನು ಹೊಂದಿದೆ.

Viral Story: ಹಿಂದೂಗಳು ಹೋಗಲು ಹೆದರುವ ಏಕೈಕ ದೇವಸ್ಥಾನ ಇದು..!
Hindu temple
TV9 Web
| Updated By: Digi Tech Desk|

Updated on:Jul 29, 2021 | 3:18 PM

Share

ಭಾರತದಂತಹ ಸಾಂಸ್ಕೃತಿಕವಾಗಿ ವೈವಿಧ್ಯಮಯ ದೇಶದಲ್ಲಿ, ವಿಭಿನ್ನ ಸಮುದಾಯಗಳು ವಿಶಿಷ್ಟ ಧಾರ್ಮಿಕ ಮತ್ತು ಸಾಮಾಜಿಕ ನಂಬಿಕೆಯನ್ನು ಅನುಸರಿಸುತ್ತವೆ. ಇಲ್ಲಿ ಪ್ರತಿಯೊಂದು ಸಮುದಾಯವು ಹಲವು-ವಿಶೇಷ ದೇವರುಗಳನ್ನು ಪೂಜಿಸುವುದನ್ನು ಕಾಣಬಹುದು. ಈ ಎಲ್ಲಾ ನಂಬಿಕೆಗಳ ಪ್ರತಿರೂಪ ಎಂದರೆ ದೇವಸ್ಥಾನ ಅಥವಾ ಪ್ರಾರ್ಥನಾ ಮಂದಿರ. ಅದರಲ್ಲೂ ಹಿಂದೂಗಳು 330 ಕ್ಕೂ ಹೆಚ್ಚು ದೇವತೆಗಳನ್ನು ದೇವಸ್ಥಾನಗಳ ಮೂಲಕ ಪೂಜಿಸುತ್ತಾರೆ. ಹೀಗೆ ಮುಕ್ಕೋಟಿ ದೇವರನ್ನು ನಂಬುವ ಹಿಂದೂಗಳು ದೇವಸ್ಥಾನವೊಂದಕ್ಕೆ ಹೋಗಲು ಹೆದರುತ್ತಾರೆ ಎಂದರೆ ನಂಬಲೇಬೇಕು.

ಹೌದು, ಅಂತಹದೊಂದು ದೇವಸ್ಥಾನ ಭಾರತದಲ್ಲಿದೆ. ಈ ದೇವಾಲಯಕ್ಕೆ ವಿದೇಶಿಗಳು ಹೆಚ್ಚಿನ ಸಂಖ್ಯೆಯನ್ನು ಆಗಮಿಸುತ್ತಾರೆ. ಆದರೆ ಭಾರತೀಯರು ಮಾತ್ರ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ ಎನ್ನುವುದು ವಿಶೇಷ. ಅಂತಹ ಐತಿಹಾಸಿಕ ದೇವಾಲಯ ಇರೋದು ಹಿಮಾಚಲ ಪ್ರದೇಶದಲ್ಲಿ.

ಚಂಬಾ ಜಿಲ್ಲೆಯ ಭರಮೌರ್ ಪ್ರದೇಶದಲ್ಲಿರುವ ಈ ದೇವಾಲಯವು ಯಮರಾಜನಿಗಾಗಿ ನಿರ್ಮಾಣವಾದ ಏಕೈಕ ದೇವಸ್ಥಾನ. ಹೀಗಾಗಿಯೇ ಯಮಧರ್ಮನ ಬಳಿ ಹೋಗಲು ಜನರು ಹೆದರುತ್ತಾರೆ. ಅದಾಗ್ಯೂ ಜನರು ಹೊರಗೆ ನಿಂತು ಪೂಜೆ ಸಲ್ಲಿಸಿ ಹೋಗುವುದು ಇಲ್ಲಿನ ಪ್ರತೀತಿ. ಆದರೆ ಈ ಐತಿಹಾಸಿಕ ದೇವಾಲಯದ ವಾಸ್ತುಶಿಲ್ಪ ಹಾಗೂ ವಿನ್ಯಾಸವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಅನೇಕ ವಿದೇಶಿಯರು ಭೇಟಿ ನೀಡುತ್ತಾರೆ.

ಆದರೆ ಇಲ್ಲಿನ ಜನರಲ್ಲಿ ಈ ದೇವಾಲಯಕ್ಕೆ ಹೋಗುವುದು ಅಪಾಯಕಾರಿ ಎಂಬ ನಂಬಿಕೆ ಇದೆ. ಏಕೆಂದರೆ ಈ ದೇವಾಲಯದಲ್ಲಿರುವ ಖಾಲಿ ಕೋಣೆಯನ್ನು ಚಿತ್ರಗುಪ್ತನ ಕೋಣೆ ಎಂದು ನಂಬಲಾಗುತ್ತದೆ. ಇದೇ ಭಯದಿಂದ ಯಮಧರ್ಮನ ಮುಖ ದರ್ಶನ ಮಾಡಲು ಸ್ಥಳೀಯರು ಗರ್ಭಗುಡಿಯತ್ತ ಮುಖ ಮಾಡುವುದಿಲ್ಲ.

ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ, ದೇವಾಲಯವು ಚಿನ್ನ, ಬೆಳ್ಳಿ, ಕಂಚು ಮತ್ತು ಕಬ್ಬಿಣದಿಂದ ಮಾಡಿದ ನಾಲ್ಕು ಅಗೋಚರ ಬಾಗಿಲುಗಳನ್ನು ಹೊಂದಿದೆ. ಯಾರೇ ಸಾವನ್ನಪ್ಪಿದರೂ ಅವರ ಆತ್ಮ ಮೊದಲು ಈ ದೇವಾಲಯಕ್ಕೆ ಬರುತ್ತದೆ. ಆ ಬಳಿಕ ಯಾವ ಆತ್ಮವು ಯಾವ ಬಾಗಿಲಿನ ಮೂಲಕ ಹಾದು ಹೋಗಬೇಕೆಂದು ಯಮರಾಜ್ ನಿರ್ಧರಿಸುತ್ತಾನೆ ಎಂದು ನಂಬಲಾಗಿದೆ. ಈ ಎಲ್ಲಾ ಕಾರಣದಿಂದ ಯಮಧರ್ಮ ದರ್ಶನಕ್ಕೆ ಹೋಗಲು ಎಲ್ಲರೂ ಹೆದರುತ್ತಾರೆ.

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(People are scared to go to this Hindu temple, here is why)

Published On - 2:44 pm, Thu, 29 July 21