AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಪ್-10 ಸರ್ವಶ್ರೇಷ್ಠ ವೇಗಿಗಳನ್ನು ಹೆಸರಿಸಿದ ಸ್ಟುವರ್ಟ್ ಬ್ರಾಡ್

ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಹೆಚ್ಚು ವಿಕೆಟ್ ಉರುಳಿಸಿ ನಿವೃತ್ತಿ ಹೊಂದಿರುವ ಇಂಗ್ಲೆಂಡ್‌ನ ದಿಗ್ಗಜ ವೇಗಿ ಸ್ಟುವರ್ಟ್ ಬ್ರಾಡ್, ಟೆಸ್ಟ್​ ಇತಿಹಾಸದ ಶ್ರೇಷ್ಠ 10 ವೇಗದ ಬೌಲರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ತಮ್ಮ ನೆಚ್ಚಿನ ಬೌಲರ್‌ಗಳನ್ನು ಹೆಸರಿಸುವ ಈ ಪ್ರಕ್ರಿಯೆಯಲ್ಲಿ ಬ್ರಾಡ್ ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೇಗಿಗಳ ಹೆಸರು ಈ ಕೆಳಗಿನಂತಿದೆ...

ಟಾಪ್-10 ಸರ್ವಶ್ರೇಷ್ಠ ವೇಗಿಗಳನ್ನು ಹೆಸರಿಸಿದ ಸ್ಟುವರ್ಟ್ ಬ್ರಾಡ್
ಸ್ಟುವರ್ಟ್ ಬ್ರಾಡ್Image Credit source: x.com
ಝಾಹಿರ್ ಯೂಸುಫ್
|

Updated on: Sep 06, 2026 | 9:12 AM

Share

ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಸ್ಟುವರ್ಟ್ ಬ್ರಾಡ್, ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದ ತಮ್ಮ ನೆಚ್ಚಿನ ಟಾಪ್-10 ಸರ್ವಶ್ರೇಷ್ಠ ವೇಗದ ಬೌಲರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯನ್ನು ಅವರು ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ಮಾತ್ರವಲ್ಲದೆ, ತಮ್ಮ ವೃತ್ತಿಜೀವನದಲ್ಲಿ ತಮಗೆ ಸ್ಫೂರ್ತಿ ನೀಡಿದ, ತಾವು ನೋಡಿ ಆನಂದಿಸಿದ ಮತ್ತು ಅವರಿಂದ ಕಲಿತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ್ದಾರೆ.

ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಅವರ ದೀರ್ಘಕಾಲದ ಬೌಲಿಂಗ್ ಜೊತೆಗಾರ ಜೇಮ್ಸ್ ಅ್ಯಂಡರ್ಸನ್ ಮೊದಲ ಸ್ಥಾನ ಪಡೆದಿದ್ದರೆ, ಭಾರತದ ಯಾರ್ಕರ್ ಕಿಂಗ್ ಜಸ್​ಪ್ರೀತ್ ಬುಮ್ರಾ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ, ಇತ್ತೀಚೆಗೆ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿರುವ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬುಮ್ರಾ 3ನೇ ಸ್ಥಾನದಲ್ಲಿರಲು ಕಾರಣವೇನು?:

ಜಸ್​ಪ್ರೀತ್ ಬುಮ್ರಾ ಅವರನ್ನು ಮೂರನೇ ಸ್ಥಾನದಲ್ಲಿರಿಸಿದ ಬ್ರಾಡ್, “ಬುಮ್ರಾ ಅವರಿಗಿಂತ ಅತ್ಯುತ್ತಮ ಬೌಲರ್ ಅನ್ನು ನಾನು ನೋಡುವುದು ಕಷ್ಟ. ಆದರೆ ಅವರು ಇನ್ನೂ ತಮ್ಮ ವೃತ್ತಿಜೀವನದ ಮಧ್ಯಭಾಗದಲ್ಲಿದ್ದಾರೆ. ಹೀಗಾಗಿ ಈಗಲೇ ಮೊದಲ ಸ್ಥಾನ ನೀಡಲಾಗುವುದಿಲ್ಲ. ನಿವೃತ್ತಿಯ ಹೊತ್ತಿಗೆ ಅವರು ನನ್ನ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದರೂ ಆಶ್ಚರ್ಯವಿಲ್ಲ” ಎಂದಿದ್ದಾರೆ. ಉಪಖಂಡದ ಪಿಚ್‌ಗಳಲ್ಲೂ 20ಕ್ಕಿಂತ ಕಡಿಮೆ ಬೌಲಿಂಗ್ ಸರಾಸರಿ ಹೊಂದಿರುವುದು ಬುಮ್ರಾ ಅವರ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದು ಅವರು ಶ್ಲಾಘಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ ಆಯ್ಕೆ ಯಾಕಿಲ್ಲ?

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ವೇಗಿಗಳ ಸಾಲಿನಲ್ಲಿ ಟಾಪ್-10 ಒಳಗೆ ಪ್ರವೇಶಿಸಿರುವ ಮಿಚೆಲ್ ಸ್ಟಾರ್ಕ್ ಅವರನ್ನು ಬ್ರಾಡ್ ಕೈಬಿಟ್ಟಿದ್ದಾರೆ. ಆಸ್ಟ್ರೇಲಿಯಾ ಕೋಟಾದಲ್ಲಿ ಸ್ಟಾರ್ಕ್ ಬದಲಿಗೆ ಗ್ಲೆನ್ ಮೆಕ್‌ಗ್ರಾತ್, ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಜಾನ್ಸನ್ ಅವರ ಆಕ್ರಮಣಕಾರಿ ಬೌಲಿಂಗ್‌ಗೆ ಬ್ರಾಡ್ ಮಣೆ ಹಾಕಿದ್ದಾರೆ.

ಇದನ್ನೂ ಓದಿ: ಶಫಾಲಿ ಆರ್ಭಟಕ್ಕೆ 3 ವಿಶ್ವ ದಾಖಲೆಗಳು ಉಡೀಸ್..!

ಪಟ್ಟಿಯಿಂದ ಹೊರಗುಳಿದ ದಿಗ್ಗಜರು!

ಈ ಕಠಿಣ ಆಯ್ಕೆಯ ಪ್ರಕ್ರಿಯೆಯಲ್ಲಿ ಮಾಲ್ಕಮ್ ಮಾರ್ಷಲ್, ಜೋಯಲ್ ಗಾರ್ನರ್, ಡೆನ್ನಿಸ್ ಲಿಲ್ಲಿ, ಜೆಫ್ ಥಾಮ್ಸನ್, ಕಪಿಲ್ ದೇವ್, ವಕಾರ್ ಯೂನಿಸ್ ಮತ್ತು ಅಲಾನ್ ಡೊನಾಲ್ಡ್ ಅವರಂತಹ ದಂತಕಥೆಗಳು ಬ್ರಾಡ್ ಅವರ ಈ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಸ್ಟುವರ್ಟ್ ಬ್ರಾಡ್ ಟಾಪ್-10 ಸರ್ವಶ್ರೇಷ್ಠ ಟೆಸ್ಟ್ ಬೌಲರ್​ಗಳು:

ಶ್ರೇಯಾಂಕ ಬೌಲರ್ ದೇಶ
1 ಜೇಮ್ಸ್ ಅ್ಯಂಡರ್ಸನ್ ಇಂಗ್ಲೆಂಡ್
2 ಗ್ಲೆನ್ ಮೆಕ್‌ಗ್ರಾತ್ ಆಸ್ಟ್ರೇಲಿಯಾ
3 ಜಸ್​ಪ್ರೀತ್ ಬುಮ್ರಾ ಭಾರತ
4 ಶಾನ್ ಪೊಲಾಕ್ ಸೌತ್ ಆಫ್ರಿಕಾ
5 ಕರ್ಟ್ಲಿ ಆಂಬ್ರೋಸ್ ವೆಸ್ಟ್ ಇಂಡೀಸ್
6 ಡೇಲ್ ಸ್ಟೇನ್ ಸೌತ್ ಆಫ್ರಿಕಾ
7 ವಸೀಮ್ ಅಕ್ರಮ್ ಪಾಕಿಸ್ತಾನ್
8 ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ
9 ರಿಚರ್ಡ್ ಹ್ಯಾಡ್ಲಿ ನ್ಯೂಝಿಲೆಂಡ್
10 ಮಿಚೆಲ್ ಜಾನ್ಸನ್ ಆಸ್ಟ್ರೇಲಿಯಾ

Follow Us