IND vs SA: ‘ಮಿಷನ್ 24′; 2ನೇ ಟಿ20 ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾದ ಸೂರ್ಯ..!

Edited By:

Updated on: Oct 02, 2022 | 2:56 PM

Suryakumar Yadav: ಟಿ20ಯಲ್ಲಿ ಭಾರತದ ಪರ ಅತಿವೇಗದ 1000 ರನ್‌ಗಳನ್ನು ವಿರಾಟ್ ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ ಗಳಿಸಿದರೆ, ಕೆಎಲ್ ರಾಹುಲ್ 29 ಇನ್ನಿಂಗ್ಸ್‌ಗಳಲ್ಲಿ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ಬಳಿಕ ಸೂರ್ಯ ಇದ್ದಾರೆ.

1 / 5
ತಿರುವನಂತಪುರದಲ್ಲಿ ನಡೆದ ಮೊದಲ ಟಿ20ಯಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ದ ಸೂರ್ಯ, ಗುವಾಹಟಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಕ್ಷರಶಃ ರೌದ್ರರೂಪ ತಾಳಿದರು. ತನ್ನ ಇನ್ನಿಂಗ್ಸ್​ನಲ್ಲಿ ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ, 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ 61 ರನ್‌ ಚಚ್ಚಿದ್ದಾರೆ.

2 / 5
ಈ ಇನ್ನಿಂಗ್ಸ್‌ ಮೂಲಕ ಸೂರ್ಯ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿ ದಾಖಲೆ ಕೂಡ ನಿರ್ಮಿಸಿದರು. ಅದರ ಜೊತೆಗೆ ಕಡಿಮೆ ಎಸೆತಗಳಲ್ಲಿ ಈ ದಾಖಲೆ ಮಾಡಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆಗೂ ಪಾತ್ರರಾದರು .

3 / 5
ಸೂರ್ಯ ಕೇವಲ 573 ಎಸೆತಗಳಲ್ಲಿ 174 ಸ್ಟ್ರೈಕ್ ರೇಟ್‌ನೊಂದಿಗೆ 1000 ರನ್ ಪೂರೈಸಿದರು. 604 ಎಸೆತಗಳಲ್ಲಿ (166 ಸ್ಟ್ರೈಕ್ ರೇಟ್) 1000 ರನ್ ಗಳಿಸಿದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಭಾರತದ ಸ್ಟಾರ್ ಮುರಿದರು.

4 / 5
ಸೂರ್ಯಕುಮಾರ್ ಯಾದವ್ 1000 ರನ್ ಗಡಿ ಮುಟ್ಟಿದರೆ 31ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಲ್ಲದೆ, ಇದರೊಂದಿಗೆ ವೇಗವಾಗಿ 1000 ರನ್ ಗಳಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

5 / 5
ಇದು ಮಾತ್ರವಲ್ಲದೆ, ಸೂರ್ಯ ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 18 ಎಸೆತಗಳಲ್ಲಿ ತನ್ನ ಅರ್ಧಶತಕವನ್ನು ಪೂರೈಸಿದರು. ಈ ಮೂಲಕ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಟೀಂ ಇಂಡಿಯಾ ಕ್ರಿಕೆಟರ್ ಎನಿಸಿಕೊಂಡರು. ಈ ಹಿಂದೆ ರಾಹುಲ್ ಕೂಡ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

Published On - 2:56 pm, Sun, 2 October 22