ಮಾಜಿ RCB ಆಟಗಾರನ ಸಿಡಿಲಬ್ಬರ: ಕರ್ನಾಟಕ ತಂಡಕ್ಕೆ ಹೀನಾಯ ಸೋಲು

| Updated By: ಝಾಹಿರ್ ಯೂಸುಫ್

Updated on: Oct 12, 2022 | 9:10 PM

Syed Mushtaq Ali T20 : 180 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಕರ್ನಾಟಕ ತಂಡ ಈ ಬಾರಿ ಬಿರುಸಿನ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಮಾಜಿ RCB ಆಟಗಾರನ ಸಿಡಿಲಬ್ಬರ: ಕರ್ನಾಟಕ ತಂಡಕ್ಕೆ ಹೀನಾಯ ಸೋಲು
Mohammed Azharuddeen
Follow us on

Syed Mushtaq Ali T20: ಮೊಹಾಲಿಯಲ್ಲಿ ನಡೆದ ಸೈಯದ್ ಮುಷ್ತಾಕ್ ಟೂರ್ನಿಯ ರೌಂಡ್​-2 ನಲ್ಲಿನ 2ನೇ ಪಂದ್ಯದಲ್ಲಿ ಕರ್ನಾಟಕ ತಂಡವು ಕೇರಳ (Karnataka vs Kerala) ವಿರುದ್ಧ ಪರಾಜಯಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ತಂಡದ ನಾಯಕ ಸಚಿನ್ ಬೇಬಿ ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಆದರೆ ಕೇರಳ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. 9 ಓವರ್​ನಲ್ಲಿ ಕೇವಲ 59 ರನ್ ನೀಡಿದ್ದ ಕರ್ನಾಟಕ ತಂಡದ ಬೌಲರ್​ಗಳು 2 ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದ್ದರು. ಆದರೆ ಅದು ಯುವ ಸ್ಪೋಟಕ ಬ್ಯಾಟ್ಸ್​ಮನ್ ಮೊಹಮ್ಮದ್ ಅಜರುದ್ದೀನ್ (Mohammed Azaruddin) ಕ್ರೀಸ್​ಗೆ ಇಳಿಯುವ ತನಕ ಎಂಬುದು ವಿಶೇಷ. ಐಪಿಎಲ್ 2021 ರಲ್ಲಿ RCB ತಂಡದಲ್ಲಿದ್ದ ಕೇರಳದ ಯುವ ದಾಂಡಿಗ ಅಜರ್ ಕರ್ನಾಟಕ ವಿರುದ್ಧ ಅಕ್ಷರಶಃ ಅಬ್ಬರಿಸಿದರು.

ಕಣಕ್ಕಿಳಿಯುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಅಜರ್ 6 ಭರ್ಜರಿ ಸಿಕ್ಸ್  ಹಾಗೂ 8 ಫೋರ್​ಗಳನ್ನು ಚಚ್ಚಿದರು. ಪರಿಣಾಮ ಮೊದಲಾರ್ಧದಲ್ಲಿ ಮೇಲುಗೈ ಸಾಧಿಸಿದ್ದ ಕರ್ನಾಟಕ ತಂಡದ ಬೌಲರ್​ಗಳು ದ್ವಿತಿಯಾರ್ಧದಲ್ಲಿ ಲಯ ತಪ್ಪಿದರು. ಇದನ್ನೇ ಬಂಡವಾಳ ಮಾಡಿಕೊಂಡ ಅಜರ್ ಕೇವಲ 47 ಎಸೆತಗಳಲ್ಲಿ ಅಜೇಯ 95 ರನ್ ಸಿಡಿಸಿದರು. ಅಷ್ಟೇ ಅಲ್ಲದೆ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಕೇರಳ ತಂಡದ ಮೊತ್ತವನ್ನು 179 ಕ್ಕೆ ತಂದು ನಿಲ್ಲಿಸಿದರು.

180 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಕರ್ನಾಟಕ ತಂಡ ಈ ಬಾರಿ ಬಿರುಸಿನ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ದೇವದತ್ ಪಡಿಕ್ಕಲ್ ಈ ಬಾರಿ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ಎಲ್​ಆರ್ ಚೇತನ್ ಕೂಡ ಸೊನ್ನೆಯೊಂದಿಗೆ ಹಿಂತಿರುಗಿದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಇನ್ನು ಅನುಭವಿ ಮನೀಷ್ ಪಾಂಡೆ 9 ರನ್​ಗಳಿಸಿದರೆ, ಲವ್​ನೀತ್ ಸಿಸೋಡಿಯಾ 36 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಅತ್ತ ಕರಾರುವಾಕ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಕೇರಳ ಬೌಲರ್​ಗಳು 15 ಓವರ್​ ಮುಕ್ತಾಯದ ವೇಳೆಗೆ ಕೇವಲ 77 ರನ್ ನೀಡಿ 7 ವಿಕೆಟ್ ಉರುಳಿಸಿದರು. ಅಂತಿಮವಾಗಿ ಕರ್ನಾಟಕ ತಂಡವು 9 ವಿಕೆಟ್ ನಷ್ಟಕ್ಕೆ 126 ರನ್​ಗಳಿಸುವ ಮೂಲಕ 53 ರನ್​ಗಳಿಂದ ಸೋಲೊಪ್ಪಿಕೊಂಡಿತು. ಕೇರಳ ಪರ ವೈಶಾಖ್ ಚಂದ್ರನ್ 4 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ತ್ ಪಡಿಕ್ಕಲ್ , ಮನೀಶ್ ಪಾಂಡೆ , ಅಭಿನವ್ ಮನೋಹರ್ , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಲವ್​ನೀತ್ ಸಿಸೋಡಿಯಾ, ಜಗದೀಶ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್, ಎಲ್​ಆರ್ ಚೇತನ್.

ಕೇರಳ ಪ್ಲೇಯಿಂಗ್ 11: ಸಚಿನ್ ಬೇಬಿ (ನಾಯಕ) , ವಿಷ್ಣು ವಿನೋದ್ , ರೋಹನ್ ಕುನ್ನುಮ್ಮಳ್ , ಮೊಹಮ್ಮದ್ ಅಜರುದ್ದೀನ್ , ಕೃಷ್ಣ ಪ್ರಸಾದ್ , ಅಬ್ದುಲ್ ಬಸಿತ್ , ಸಿಜೋಮನ್ ಜೋಸೆಫ್ , ಉನ್ನಿಕೃಷ್ಣನ್, ಬಾಸಿಲ್ ತಂಪಿ , ಕೆಎಂ ಆಸಿಫ್ , ವೈಶಾಕ್ ಚಂದ್ರನ್ , ಸುಧೇಶನ್ ಮಿಧುನ್