SMAT 2022-23: ಕರ್ನಾಟಕ ಟಿ20 ಟೀಮ್ ಪ್ರಕಟ: ತಂಡಕ್ಕೆ ಹೊಸ ನಾಯಕ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Oct 08, 2022 | 4:00 PM

Syed Mushtaq Ali Trophy 2022: ಈ ಬಾರಿಯ ಟೂರ್ನಿಯನ್ನು ಐದು ವಿಭಿನ್ನ ಎಲೈಟ್ ಗುಂಪುಗಳ ಮೂಲಕ ಆಡಿಸಲಾಗುತ್ತದೆ. ಇಲ್ಲಿ A, B ಮತ್ತು C ಗುಂಪುಗಳಲ್ಲಿ ಎಂಟು ತಂಡಗಳು ಮತ್ತು E ಮತ್ತು F ಗುಂಪುಗಳಲ್ಲಿ ಏಳು ತಂಡಗಳು ಇರಲಿದೆ.

SMAT 2022-23: ಕರ್ನಾಟಕ ಟಿ20 ಟೀಮ್ ಪ್ರಕಟ: ತಂಡಕ್ಕೆ ಹೊಸ ನಾಯಕ ಆಯ್ಕೆ
ಸಾಂದರ್ಭಿಕ ಚಿತ್ರ
Follow us on

Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-23 (SMAT 2022) ಟಿ20 ಟೂರ್ನಿಗಾಗಿ ಕರ್ನಾಟಕ ತಂಡವನ್ನು (Karnataka Squad) ಪ್ರಕಟಿಸಲಾಗಿದೆ. ಈ ಬಾರಿ ತಂಡದ ನಾಯಕನಾಗಿ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಆಯ್ಕೆ ಮಾಡಲಾಗಿದೆ. ಇದಾಗ್ಯೂ ಮಾಜಿ ನಾಯಕ ಮನೀಷ್ ಪಾಂಡೆ (Manish Pandey) ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ತಂಡದಲ್ಲಿ ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್ ಸೇರಿದಂತೆ ಪ್ರಮುಖ ಆಟಗಾರರ ದಂಡೇ ಇದೆ. ಹಾಗೆಯೇ ಕರ್ನಾಟಕ ತಂಡವು ತನ್ನ ಮೊದಲ ಸುತ್ತಿನ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ.

ಈ ಬಾರಿ ಸೈಯದ್ ಮುಷ್ತಾಕ್ ಅಲಿ ಟೂರ್ನಿಯು ಅಕ್ಟೋಬರ್ 11 ರಿಂದ ಶುರುವಾಗಲಿದೆ. ಭಾರತದ ಆರು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಅದರಂತೆ ರಾಜ್​ಕೋಟ್, ಮೊಹಾಲಿ, ಜೈಪುರ್, ಇಂದೋರ್, ಲಕ್ನೋ ನಗರಗಳಲ್ಲಿ ಮೊದಲ ಸುತ್ತಿನ ಪಂದ್ಯಗಳು ನಡೆಯಲಿವೆ. ಇನ್ನು ನಾಕೌಟ್ ಹಂತದ ಎಲ್ಲಾ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಜರುಗಲಿದೆ. ಹಾಗೆಯೇ ನವೆಂಬರ್ 5 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೂ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವಹಿಸಲಿದೆ.

ಒಟ್ಟು 38 ತಂಡಗಳು:

ಇದನ್ನೂ ಓದಿ
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಈ ಬಾರಿಯ ಟೂರ್ನಿಯನ್ನು ಐದು ವಿಭಿನ್ನ ಎಲೈಟ್ ಗುಂಪುಗಳ ಮೂಲಕ ಆಡಿಸಲಾಗುತ್ತದೆ. ಇಲ್ಲಿ A, B ಮತ್ತು C ಗುಂಪುಗಳಲ್ಲಿ ಎಂಟು ತಂಡಗಳು ಮತ್ತು E ಮತ್ತು F ಗುಂಪುಗಳಲ್ಲಿ ಏಳು ತಂಡಗಳು ಇರಲಿದೆ. ಅದರಂತೆ ಐದು ಗ್ರೂಪ್​ಗಳ ಮೂಲಕ ಮೊದಲ ಸುತ್ತಿನಲ್ಲಿ ಒಟ್ಟು 38 ತಂಡಗಳು ಸೆಣಸಲಿದೆ.

ಗ್ರೂಪ್​ಗಳ ವಿವರಗಳು:

ಎಲೈಟ್-A (ರಾಜ್‌ಕೋಟ್)

  1. ಅಸ್ಸಾಂ
  2. ಮಧ್ಯಪ್ರದೇಶ
  3. ಮಿಜೋರಾಂ
  4. ಮುಂಬೈ
  5. ರೈಲ್ವೆ ತಂಡ
  6. ರಾಜಸ್ಥಾನ
  7. ಉತ್ತರಾಖಂಡ
  8. ವಿದರ್ಭ

ಎಲೈಟ್-B (ಜೈಪುರ)

  1. ದೆಹಲಿ
  2. ಗೋವಾ
  3. ಹೈದರಾಬಾದ್
  4. ಮಣಿಪುರ
  5. ಪುದುಚೇರಿ
  6. ಪಂಜಾಬ್
  7. ತ್ರಿಪುರ
  8. ಉತ್ತರ ಪ್ರದೇಶ

ಎಲೈಟ್-C (ಮೊಹಾಲಿ)

  1. ಅರುಣಾಚಲ ಪ್ರದೇಶ
  2. ಹರ್ಯಾಣ
  3. ಜಮ್ಮು ಮತ್ತು ಕಾಶ್ಮೀರ
  4. ಕರ್ನಾಟಕ
  5. ಕೇರಳ
  6. ಮಹಾರಾಷ್ಟ್ರ
  7. ಮೇಘಾಲಯ
  8. ಸರ್ವೀಸಸ್ ತಂಡ

ಎಲೈಟ್-D (ಇಂದೋರ್)

  1. ಆಂಧ್ರ ಪ್ರದೇಶ
  2. ಬರೋಡಾ
  3. ಬಿಹಾರ
  4. ಗುಜರಾತ್
  5. ಹಿಮಾಚಲ ಪ್ರದೇಶ
  6. ನಾಗಾಲ್ಯಾಂಡ್
  7. ಸೌರಾಷ್ಟ್ರ

ಎಲೈಟ್-E (ಲಕ್ನೋ)

  1. ಬಂಗಾಳ
  2. ಚಂಡೀಗಢ
  3. ಛತ್ತೀಸ್‌ಗಢ
  4. ಜಾರ್ಖಂಡ್
  5. ಒಡಿಶಾ
  6. ಸಿಕ್ಕಿಂ
  7. ತಮಿಳುನಾಡು

ಕರ್ನಾಟಕ ಟಿ20 ತಂಡ ಹೀಗಿದೆ:
ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಚೇತನ್ ಎಲ್ಆರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಲುವ್​ನೀತ್ ಸಿಸೋಡಿಯಾ, ಶರತ್ ಬಿಆರ್, ಕೌಶಿಕ್ ವಿ, ವೈಶಾಕ್ ವಿ, ಕಾವೇರಪ್ಪ, ವೆಂಕಟೇಶ್ ಎಂ.