AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಫೈನಲ್​ ಸೋಲಿಗೆ ಪ್ರತೀಕಾರ; ಬಾಂಗ್ಲಾ ತಂಡವನ್ನು ಮಣಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಟೀಂ ಇಂಡಿಯಾ

Asia Cup 2022: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾಕಪ್ 2022 ರ ಐದನೇ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾ ತಂಡವನ್ನು 59 ರನ್‌ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಭಾರತ ವನಿತಾ ತಂಡ ಟೂರ್ನಿಯಲ್ಲಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ.

Asia Cup 2022: ಫೈನಲ್​ ಸೋಲಿಗೆ ಪ್ರತೀಕಾರ; ಬಾಂಗ್ಲಾ ತಂಡವನ್ನು ಮಣಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟ ಟೀಂ ಇಂಡಿಯಾ
TV9 Web
| Edited By: |

Updated on:Oct 08, 2022 | 5:09 PM

Share

ಪಾಕಿಸ್ತಾನದ ಎದುರು ಯಾರೂ ಊಹಿಸದ ರೀತಿ ಸೋಲೊಪ್ಪಿಕೊಂಡಿದ್ದ ಟೀಂ ಇಂಡಿಯಾ ಕೇವಲ 24 ಗಂಟೆಗಳೊಳಗೆ ತನ್ನ ಸಾಮರ್ಥ್ಯ ಏನು ಎಂಬುದನ್ನು ಮತ್ತೊಮ್ಮೆ ವಿಶ್ವದ ಮುಂದೆ ಸಾಭೀತುಪಡಿಸಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾಕಪ್ 2022 (Women’s Asia Cup 2022)ರ ಐದನೇ ಪಂದ್ಯದಲ್ಲಿ ಅತಿಥೇಯ ಬಾಂಗ್ಲಾ ತಂಡವನ್ನು 59 ರನ್‌ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಭಾರತ ವನಿತಾ ತಂಡ ಟೂರ್ನಿಯಲ್ಲಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ತಂಡದ ಖಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅನುಪಸ್ಥಿತಿಯಿಂದಾಗಿ ತಂಡವನ್ನು ಮುನ್ನಡೆಸಿದ ಸ್ಮೃತಿ ಮಂಧಾನ (Smriti Mandhana), ಮತೊಬ್ಬ ಓಪನರ್ ಶಫಾಲಿ ವರ್ಮಾ (Shefali Verma) ಜೊತೆ ಉತ್ತಮ ಜೊತೆಯಾಟ ಆಡಿ ತಂಡವನ್ನು ಗೌರವಯುತ್ತ ಟಾರ್ಗೆಟ್​ಗೆ ಕೊಂಡೊಯ್ದರು. ಆ ಬಳಿಕ ಬೌಲಿಂಗ್​ನಲ್ಲಿ ಕರಾರುವಕ್ಕಾದ ದಾಳಿ ನಡೆಸಿದ ಬೌಲರ್‌ಗಳು ಬಾಂಗ್ಲಾ ತಂಡವನ್ನು ಕೇವಲ 100 ರನ್​ಗಳಿಗೆ ಕಟ್ಟಿಹಾಕುವುದರೊಂದಿಗೆ ತಂಡಕ್ಕೆ 59 ರನ್​ಗಳ ಜಯ ತಂದುಕೊಟ್ಟರು.

ಶನಿವಾರ ಸಿಲ್ಹೆಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ತಂಡದಿಂದ ಹೊರಗಿದ್ದ ಶೆಫಾಲಿ ವರ್ಮಾ ಈ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ಮತ್ತು ಸ್ಮೃತಿ ತಂಡಕ್ಕೆ ಉತ್ತಮ ಮತ್ತು ವೇಗದ ಆರಂಭ ನೀಡಿದರು. ಇವರಿಬ್ಬರು ಬಾಂಗ್ಲಾದೇಶದ ಬೌಲರ್‌ಗಳನ್ನು ಹೊಡೆದುರುಳಿಸಿ ಕೇವಲ 12 ಓವರ್‌ಗಳಲ್ಲಿ 96 ರನ್‌ಗಳ ತ್ವರಿತ ಜೊತೆಯಾಟ ನೀಡಿದರು. ಆದರೆ ಇಲ್ಲಿ ಶೆಫಾಲಿ ಮಾಡಿದ ತಪ್ಪಿನಿಂದಾಗಿ ನಾಯಕಿ ಮಂಧಾನ ರನೌಟ್ ಆಗಬೇಕಾಯಿತು.

ಶೆಫಾಲಿ ವರ್ಮಾ ಕೂಡ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಔಟಾದರು. ಆ ಬಳಿಕ ಬಂದ ರಿಚಾ ಘೋಷ್ ಮತ್ತು ಕಿರಣ್ ನವಗಿರೆ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡದ ರನ್ ರೇಟ್​ ಕೂಡ ಗಣನೀಯವಾಗಿ ಕುಸಿಯಿತು. ಆದಾಗ್ಯೂ ಪಾಕ್ ವಿರುದ್ಧದ ಪಂದ್ಯದಲ್ಲಿ ಬೇಗನೇ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಮರಳಿದ್ದ ಜೆಮಿಮಾ ರೋಡ್ರಿಗಸ್ ಈ ಪಂದ್ಯದಲ್ಲಿ ತಂಡದ ನೆರವಿಗೆ ನಿಂತರು. ಕೊನೆಯ ಓವರ್‌ಗಳಲ್ಲಿ ಅಬ್ಬರಿಸುವ ಮೂಲಕ ತಂಡವನ್ನು 159 ರನ್‌ಗಳಿಗೆ ಕೊಂಡೊಯ್ದರು.

ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಆತಿಥೇಯ ಬಾಂಗ್ಲಾದೇಶದ ಬ್ಯಾಟರ್​ಗಳಿಗೆ ಎಂದಿಗೂ ಮುಕ್ತವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಭಾರತೀಯ ಬೌಲರ್‌ಗಳೆದುರು ದೊಡ್ಡ ಹೊಡೆತಗಳನ್ನು ಆಡುವಲ್ಲಿ ಬಾಂಗ್ಲಾ ಬ್ಯಾಟರ್​ಗಳು ವಿಫಲರಾದರು. ಹೀಗಾಗಿ ಬಾಂಗ್ಲಾ ವನಿತಾ ತಂಡ ಸಿಂಗಲ್ಸ್ ಮತ್ತು ಡಬಲ್ಸ್‌ ತೆಗೆದುಕೊಳ್ಳುವುದಕ್ಕೂ ಪರಿತಪಿಸುವಂತ್ತಾಯಿತು. ಇದರಿಂದಾಗಿ ಬಾಂಗ್ಲಾದೇಶದ ಇನಿಂಗ್ಸ್ ವೇಗ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ 14ನೇ ಓವರ್‌ ಮುಗಿಯುವಷ್ಟರಲ್ಲಿ ಬಾಂಗ್ಲಾ ತಂಡ 70 ರನ್ ಬಾರಿಸಲು ಸಾಧ್ಯವಾಗಿರಲಿಲ್ಲ. ತಂಡದ ಪರವಾಗಿ, ನಾಯಕಿ ನಿಗರ್ ಸುಲ್ತಾನ ಮಾತ್ರ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಿದರು. 124 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ನಾಯಕಿ 36 ರನ್ ಗಳಿಸಿದರು.

19 ನೇ ಓವರ್‌ನಲ್ಲಿ ಬಾಂಗ್ಲಾ ನಾಯಕಿ ನಿಗಾರ್ ಸುಲ್ತಾನಾ ಅವರನ್ನು ಶಫಾಲಿ ವರ್ಮಾ ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೊದಲು ಬ್ಯಾಟಿಂಗ್​ನಲ್ಲಿ ಬಿರುಗಾಳಿ ಸೃಷ್ಟಿಸಿದ್ದ ಶಫಾಲಿ, ಬೌಲಿಂಗ್​ನಲ್ಲೂ ತಮ್ಮ ಕರಾಮತ್ತು ತೋರಿದರು. ಈ ಪಂದ್ಯದಲ್ಲಿ 4 ಓವರ್‌ ಬೌಲ್ ಮಾಡಿದ ಶಫಾಲಿ ಕೇವಲ 10 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದರು. ಅಂತಿಮವಾಗಿ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕಳೆದ ಬಾರಿ ನಡೆದ ಏಷ್ಯಾಕಪ್​ ಫೈನಲ್​ನಲ್ಲಿನ ಸೋಲಿಗೆ ಟೀಂ ಇಂಡಿಯಾ, ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡಂತ್ತಾಗಿದೆ.

Published On - 4:46 pm, Sat, 8 October 22

ಪ್ರಯಾಗ್​ರಾಜ್​ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ
ಪ್ರಯಾಗ್​ರಾಜ್​ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ
ವಿಮಾನದಲ್ಲಿ ಬಂದವರ ಬಳಿ ಇತ್ತು ಆಮೆಗಳು ಸೇರಿ 35 ವನ್ಯಜೀವಿ! ಮೂವರ ಬಂಧನ
ವಿಮಾನದಲ್ಲಿ ಬಂದವರ ಬಳಿ ಇತ್ತು ಆಮೆಗಳು ಸೇರಿ 35 ವನ್ಯಜೀವಿ! ಮೂವರ ಬಂಧನ
‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ
‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಕಲ್ಲಿನಿಂದ ಜಜ್ಜಿ ಹಲ್ಲೆ
ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿ
ತೆಂಗಿನ ಗರಿಯಲ್ಲಿ ಅರಳಿದ ಡಾ. ಶಿವಕುಮಾರ ಸ್ವಾಮೀಜಿ ಕಲಾಕೃತಿ
ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್
ಕಡಿಮೆ ಆಗಿಲ್ಲ ಶ್ರೀನಾಥ್ ಎನರ್ಜಿ; ‘ನೀನೆ ಸಾಕಿದ ಗಿಣಿ’ ಹಾಡಿಗೆ ಡ್ಯಾನ್ಸ್
ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್
ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 21 ಕೋಟಿ ರೂ. ವೆಚ್ಚದ ನೀರಿನ ಟ್ಯಾಂಕ್
ಕೆಲಸ ಮಾಡುವ ಕಚೇರಿಯಲ್ಲಿ ಇರಬೇಕಾದ ದೇವರ ಫೋಟೋಗಳು
ಕೆಲಸ ಮಾಡುವ ಕಚೇರಿಯಲ್ಲಿ ಇರಬೇಕಾದ ದೇವರ ಫೋಟೋಗಳು
ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!
ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ