T20 World Cup: ಅಭ್ಯಾಸ ಪಂದ್ಯದಲ್ಲಿ ಕಿವೀಸ್​ಗೆ ಸತತ ಎರಡನೇ ಸೋಲು; ಗೆದ್ದು ಸೋತ ಇಂಗ್ಲೆಂಡ್..!

|

Updated on: Oct 20, 2021 | 10:20 PM

T20 World Cup: ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ನಂ .1 ಟಿ 20 ಬ್ಯಾಟ್ಸ್​ಮನ್ ಡೇವಿಡ್ ಮಲನ್ ಸತತ ಎರಡನೇ ಅಭ್ಯಾಸ ಪಂದ್ಯದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಇದು ಮಾತ್ರವಲ್ಲ, ನಾಯಕ ಇಯೊನ್ ಮಾರ್ಗನ್ ಅವರ ಕಳಪೆ ಫಾರ್ಮ್ ಮುಂದುವರಿದಿದೆ.

T20 World Cup: ಅಭ್ಯಾಸ ಪಂದ್ಯದಲ್ಲಿ ಕಿವೀಸ್​ಗೆ ಸತತ ಎರಡನೇ ಸೋಲು; ಗೆದ್ದು ಸೋತ ಇಂಗ್ಲೆಂಡ್..!
9- ಜೋಸ್ ಬಟ್ಲರ್ (ಇಂಗ್ಲೆಂಡ್)
Follow us on

2021 ರ ಟಿ 20 ವಿಶ್ವಕಪ್ ನ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತದ ಎದುರು ಸೋತ ಇಂಗ್ಲೆಂಡ್ ತಂಡ ಎರಡನೇ ಪಂದ್ಯವನ್ನು ಗೆದ್ದಿತು. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 13 ರನ್ ಗಳಿಂದ ನ್ಯೂಜಿಲ್ಯಾಂಡ್ (ENG vs NZ) ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 163 ರನ್ ಗಳಿಸಿತು, ಪ್ರತಿಕ್ರಿಯೆಯಾಗಿ ನ್ಯೂಜಿಲ್ಯಾಂಡ್ 150 ರನ್ ಗಳಿಗೆ ಆಲೌಟ್ ಆಯಿತು. ಜೋಸ್ ಬಟ್ಲರ್ ಇಂಗ್ಲೆಂಡ್​ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು, ಅವರು 51 ಎಸೆತಗಳಲ್ಲಿ 73 ರನ್ ಗಳಿಸಿದರು. ಬೌಲಿಂಗ್​ನಲ್ಲಿ ಮಾರ್ಕ್ ವುಡ್ 4 ವಿಕೆಟ್ ಮತ್ತು ಆದಿಲ್ ರಶೀದ್ 4 ವಿಕೆಟ್ ಪಡೆದರು.

ನ್ಯೂಜಿಲ್ಯಾಂಡ್ ಪರವಾಗಿ ಮಾರ್ಟಿನ್ ಗಪ್ಟಿಲ್ 20 ಎಸೆತಗಳಲ್ಲಿ 41 ರನ್ ಗಳಿಸಿದರು ಆದರೆ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ನ್ಯೂಜಿಲ್ಯಾಂಡ್ ತಂಡವು ಒಂದು ಸಮಯದಲ್ಲಿ 1 ವಿಕೆಟ್​ಗೆ 65 ರನ್ ಗಳಿಸಿತ್ತು. ಆದರೆ ಅದರ ನಂತರ ವಿಕೆಟ್​ಗಳ ಪತನವಾಯ್ತು. 11 ನೇ ಓವರ್ ತನಕ ನ್ಯೂಜಿಲೆಂಡ್ 87 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿತು.

ಬೌಲರ್‌ಗಳ ಪರಾಕ್ರಮ
164 ರನ್​ಗಳ ಬೆನ್ನತ್ತಿದ ನ್ಯೂಜಿಲೆಂಡ್ ಕೆಟ್ಟ ಆರಂಭ ಪಡೆಯಿತು. ವಿಕೆಟ್ ಕೀಪರ್ ಟಿಮ್ ಸೀಫರ್ಟ್ 8 ರನ್ ಗಳಿಸಿದ ನಂತರ ಔಟಾದರು. ಆದರೆ ಪವರ್‌ಪ್ಲೇನಲ್ಲಿ ಮಾರ್ಟಿನ್ ಗಪ್ಟಿಲ್ ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದರು. ಬಲಗೈ ಬ್ಯಾಟ್ಸ್‌ಮನ್ 20 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 41 ರನ್ ಗಳಿಸಿದರು. ಪವರ್‌ಪ್ಲೇ ತನಕ ನ್ಯೂಜಿಲ್ಯಾಂಡ್ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತು. ಆದರೆ 7 ನೇ ಓವರ್‌ನಲ್ಲಿ ಆದಿಲ್ ರಶೀದ್ ಸ್ಪಿನ್ ನ್ಯೂಜಿಲ್ಯಾಂಡ್‌ಗೆ ದಿಗ್ಭ್ರಮೆ ನೀಡಿತು. ಮಾರ್ಟಿನ್ ಗಪ್ಟಿಲ್ ರಾಯ್​ಗೆ ಕ್ಯಾಚಿತ್ತರು. ನಂತರ ಡೆವೊನ್ ಕಾನ್ವೇ 20 ರ ವೈಯಕ್ತಿಕ ಸ್ಕೋರ್​ನಲ್ಲಿ ರನೌಟ್ ಆದರು. ಗ್ಲೆನ್ ಫಿಲಿಪ್ಸ್ ಕೂಡ ಲಿವಿಂಗ್ಸ್ಟೋನ್​ಗೆ ಬಲಿಯಾದರು. ಮಾರ್ಕ್ ಚಾಪ್ಮನ್ ರಶೀದ್​ಗೆ ಬಲಿಯಾದರು. ಮಧ್ಯಮ ಓವರ್‌ಗಳಲ್ಲಿ ಮಾರ್ಕ್ ವುಡ್‌ನ ದಾಳಿ ನ್ಯೂಜಿಲೆಂಡ್‌ಗೆ ಮರಳಲು ಅವಕಾಶವನ್ನು ನೀಡಲಿಲ್ಲ. ವಾರೆಡ್ ಡ್ಯಾರೆಲ್ ಮಿಚೆಲ್, ಟಿಮ್ ಸೌಥಿ ಮತ್ತು ಕೈಲ್ ಜೇಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಕಿವಿ ತಂಡದ ಸೋಲನ್ನು ಧೃಡಪಡಿಸಿದರು.

ಗೆಲುವಿನ ಹೊರತಾಗಿಯೂ ಇಂಗ್ಲೆಂಡ್ ಉದ್ವಿಗ್ನ ಸ್ಥಿತಿಯಲ್ಲಿತ್ತು
ಜೋಸ್ ಬಟ್ಲರ್ ಮತ್ತು ಜಾನಿ ಬೈರ್‌ಸ್ಟೊ ಇಂಗ್ಲೆಂಡ್ ಪರ ಉತ್ತಮ ಇನ್ನಿಂಗ್ಸ್ ಆಡಿದರು. ಆದರೆ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ನಂ .1 ಟಿ 20 ಬ್ಯಾಟ್ಸ್​ಮನ್ ಡೇವಿಡ್ ಮಲನ್ ಸತತ ಎರಡನೇ ಅಭ್ಯಾಸ ಪಂದ್ಯದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಇದು ಮಾತ್ರವಲ್ಲ, ನಾಯಕ ಇಯೊನ್ ಮಾರ್ಗನ್ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಅವರು 11 ಎಸೆತಗಳಲ್ಲಿ 10 ರನ್ ಗಳಿಸಲು ಸಾಧ್ಯವಾಯಿತು. ಲಿವಿಂಗ್ಸ್ಟೋನ್ ಕೂಡ 1 ರನ್​ಗೆ ಬೌಲ್ಡ್ ಆದರು. ಇಂಗ್ಲೀಷ್ ಬ್ಯಾಟ್ಸ್‌ಮನ್‌ಗಳು ಯುಎಇ ಪಿಚ್​ಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೋರುತ್ತದೆ, ಇದು ಈ ತಂಡದ ಕಾಳಜಿಯ ವಿಷಯವಾಗಿದೆ.