AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಬರೋಬ್ಬರಿ 345 ರನ್ಸ್​: ಎದುರಾಳಿಗೆ ಟೀಮ್ ಇಂಡಿಯಾ ಎಚ್ಚರಿಕೆ

Team India: ಬಲಿಷ್ಠ ತಂಡಗಳ ವಿರುದ್ದದ ಈ ಎರಡು ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರುಗಳು ಅಬ್ಬರಿಸಿದ್ದಾರೆ. ಅದರಲ್ಲೂ ವಿಕೆಟ್ ಕಳೆದುಕೊಳ್ಳದೇ ಅತ್ಯುತ್ತಮವಾಗಿ ಚೇಸ್ ಮಾಡಿದ್ದಾರೆ.

T20 World Cup 2021: ಬರೋಬ್ಬರಿ 345 ರನ್ಸ್​: ಎದುರಾಳಿಗೆ ಟೀಮ್ ಇಂಡಿಯಾ ಎಚ್ಚರಿಕೆ
Team India
TV9 Web
| Edited By: |

Updated on: Oct 20, 2021 | 9:13 PM

Share

T20 World Cup 2021: ಟಿ20 ವಿಶ್ವಕಪ್​​ನ ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಟೀಮ್​ ಇಂಡಿಯಾ (Team India) ಎದುರಾಳಿಗಳಿಗೆ ಖಡಕ್ ಎಚ್ಚರಿ ರವಾನಿಸಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ (England) ನೀಡಿದ 188 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ವಿರುದ್ದ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಬ್ಯಾಟಿಂಗ್ ಬಲಿಷ್ಠತೆಯನ್ನು ಭಾರತ ತಂಡ ತೆರೆದಿಟ್ಟಿದೆ. ಅದರಲ್ಲೂ ಎರಡೂ ಪಂದ್ಯಗಳನ್ನು ಆರಂಭಿಕ ಆಟಗಾರರೇ ಗೆಲ್ಲಿಸಿರೋದು ವಿಶೇಷ. ಅಂದರೆ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕಳೆದುಕೊಂಡಿದ್ದು ಕೇವಲ 4 ವಿಕೆಟ್ ಮಾತ್ರ ಎಂಬುದು ವಿಶೇಷ.

ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ 5 ವಿಕೆಟ್ ಗೆ 188 ರನ್ ಗಳ ಬೃಹತ್ ಮೊತ್ತ ಗುರಿ ನೀಡಿತು. ಈ ಗುರಿಯನ್ನು ಬೆನ್ನತ್ತಲು ಆರಂಭಿಕರಾದ ಇಶಾನ್ ಕಿಶನ್ (70) ಮತ್ತು ಕೆಎಲ್ ರಾಹುಲ್ (51) ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರಂತೆ ಟೀಮ್ ಇಂಡಿಯಾ 19 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. ಈ ಪಂದ್ಯದಲ್ಲಿ ಇಶಾನ್ ಕಿಶನ್ ರಿಟೆರ್ಡ್ ಆಗಿದ್ದರೆ, ರಿಷಭ್ ಪಂತ್ ಅಜೇಯ 29 ರನ್ ಗಳಿಸಿದ್ದರು. ಅಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ 7 ಬೌಲರ್‌ಗಳನ್ನು ಬಳಸಿದರೂ ಪಡೆದಿದ್ದು ಕೇವಲ 3 ವಿಕೆಟ್ ಮಾತ್ರ.

ಇನ್ನು ಎರಡನೇ ಅಭ್ಯಾಸ ಪಂದ್ಯದಲ್ಲಿ, ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 152 ರನ್​ ಪೇರಿಸಿತು. ಈ ಮೊತ್ತವನ್ನು ಭಾರತ ತಂಡವು 17.5 ಓವರ್ ಚೇಸ್ ಮಾಡಿತು. ಅತ್ತ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಟೀಮ್ ಇಂಡಿಯಾ ಬ್ಯಾಟರುಗಳ ವಿಕೆಟ್ ಪಡೆಯಲು 8 ಬೌಲರುಗಳನ್ನು ಬಳಸಿದರು. ಇದಾಗ್ಯೂ ಸಿಕ್ಕಿದ್ದು 1 ವಿಕೆಟ್ ಮಾತ್ರ.

ಅಂದರೆ ವಿಶ್ವದ ಬಲಿಷ್ಠ ಬೌಲಿಂಗ್ ಲೈನಪ್​ ಎನಿಸಿಕೊಂಡಿರುವ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್​, ಪ್ಯಾಟ್ ಕಮಿನ್ಸ್​, ಕೇನ್ ರಿಚರ್ಡ್ಸನ್​ನಂತಹ ವೇಗಿಗಳನ್ನು ಬಳಸಿದರೂ ವಿಕೆಟ್ ಪಡೆಯುವಲ್ಲಿ ಸಫಲವಾಗಿಲ್ಲ. ಇನ್ನು ಸ್ಪಿನ್ನರ್​ಗಳಾದ ಆಸ್ಟನ್ ಅಗರ್, ಮ್ಯಾಕ್ಸ್​ವೆಲ್, ಝಂಪಾ ಕೂಡ ಪ್ರಯತ್ನ ಪಡೆದರೂ ಫಲ ಮಾತ್ರ ಶೂನ್ಯವಾಗಿತ್ತು. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 60 ರನ್ ಗಳಿಸಿ ರಿಟೆರ್ಡ್​ ಆದರೆ, ಕೆಎಲ್ ರಾಹುಲ್ 39 ಹಾಗೂ ಸೂರ್ಯಕುಮಾರ್ ಯಾದವ್ ಔಟಾಗದೆ 38 ರನ್ ಗಳಿಸಿದರು.

ಬಲಿಷ್ಠ ತಂಡಗಳ ವಿರುದ್ದದ ಈ ಎರಡು ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಟರುಗಳು ಅಬ್ಬರಿಸಿದ್ದಾರೆ. ಅದರಲ್ಲೂ ವಿಕೆಟ್ ಕಳೆದುಕೊಳ್ಳದೇ ಅತ್ಯುತ್ತಮವಾಗಿ ಚೇಸ್ ಮಾಡಿದ್ದಾರೆ. ಎರಡೂ ಅಭ್ಯಾಸ ಪಂದ್ಯಗಳಲ್ಲಿ, ಎದುರಾಳಿ ತಂಡಗಳು ಒಟ್ಟು 15 ಬೌಲರ್‌ಗಳನ್ನು ಬಳಸಿದರೂ ಟೀಮ್ ಇಂಡಿಯಾ ಕಳೆದುಕೊಂಡಿದ್ದು ಕೇವಲ 4 ವಿಕೆಟ್​ಗಳು ಮಾತ್ರ. ಅಷ್ಟೇ ಅಲ್ಲದೆ 2 ಪಂದ್ಯಗಳಿಂದ ಟೀಮ್ ಇಂಡಿಯಾ ಬ್ಯಾಟರುಗಳು ಕಲೆಹಾಕಿದ್ದು ಬರೋಬ್ಬರಿ 345 ರನ್​. ಟೀಮ್ ಇಂಡಿಯಾದ ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೋಡಿ ಇದೀಗ ಎದುರಾಳಿ ತಂಡಗಳಿಗೆ ಭಾರತೀಯ ಬ್ಯಾಟರುಗಳನ್ನು ಕಟ್ಟಿಹಾಕುವುದೇ ದೊಡ್ಡ ಚಿಂತೆಯಾಗಿದೆ.

ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ​?

ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು? 

ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್​ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ

(T20 World Cup 2021: indian batsmen scored 345 runs in 2 matches)

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​