T20 World Cup: ಭಾರತ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು 14 ವರ್ಷ: ಧೋನಿ ಯುಗ ಶುರುವಾಗಿದ್ದು ಇದೇ ದಿನ!

| Updated By: Vinay Bhat

Updated on: Sep 24, 2021 | 11:18 AM

India vs Pakistan T20 World Cup: ಟಿ-20 ವಿಶ್ವಕಪ್ ಚೊಚ್ಚಲ ಟೂರ್ನಿಯಲ್ಲೇ ಭಾರತ ಚಾಂಪಿಯನ್‌ ಆಗಿ ವಿಶ್ವದಗಲ ಮಿನುಗಿತ್ತು. ಆವತ್ತಿನ ಆ ಅಪರೂಪದ ದಿನವನ್ನು ಸ್ಮರಿಸಿ ಐಸಿಸಿ ಹಾಗೂ ಬಿಸಿಸಿಐ ಇಂದು ಟ್ವೀಟ್ ಮಾಡಿದೆ.

T20 World Cup: ಭಾರತ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು 14 ವರ್ಷ: ಧೋನಿ ಯುಗ ಶುರುವಾಗಿದ್ದು ಇದೇ ದಿನ!
T20 World Cup 2007
Follow us on

ಸುಮಾರು 14 ವರ್ಷಗಳ ಹಿಂದೆ ಅಂದರೆ 2007 ಸೆಪ್ಟೆಂಬರ್ 24ರಂದು ಭಾರತ ಕ್ರಿಕೆಟ್ (Team India) ಇತಿಹಾಸವನ್ನು ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಮ್ ಇಂಡಿಯಾ ಚೊಚ್ಚಲ ಆವೃತ್ತಿಯಲ್ಲೇ ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಪ್ರಶಸ್ತಿ ಜಯಿಸಿತು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಎಂಎಸ್ ಧೋನಿ ಯುಗ ಆರಂಭವಾಗಿದ್ದೂ ಈ ಆವತ್ತಿನಿಂದಲೇ. ಹೌದು, ಧೋನಿ ನಾಯಕತ್ವದಲ್ಲಿ ಯುವ ಟೀಮ್ ಇಂಡಿಯಾ ಚೊಚ್ಚಲ ಟಿ-20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ (Rahul Dravid) ನೇತೃತ್ವದ ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದರಿಂದ, ಧೋನಿ ಪಡೆಯ ಮೇಲೆ ಅಷ್ಟೇನು ನಿರೀಕ್ಷೆಗಳಿರಲಿಲ್ಲ.

ಟಿ-20 ವಿಶ್ವಕಪ್ ಟೂರ್ನಿಗೂ ಮುನ್ನ ಕೇವಲ ಒಂದು ಟಿ-20 ಪಂದ್ಯವನ್ನಾಡಿದ್ದ ಸೆಹ್ವಾಗ್, ಯುವರಾಜ್ ಸಿಂಗ್, ಧೋನಿ ಹೊರತುಪಡಿಸಿ ಉಳಿದವರಿಗೆ ಯಾವುದೇ ಅಂತರರಾಷ್ಟ್ರೀಯ ಟಿ-20 ಪಂದ್ಯವನ್ನಾಡಿದ ಅನುಭವವಿರಲಿಲ್ಲ. ಆದರೆ, ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಬರೆದಿತ್ತು.

 

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 5 ರನ್‌ಗಳ ರೋಚಕ ಗೆಲುವನ್ನಾಚರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತದಿಂದ ಗೌತಮ್ ಗಂಭೀರ್ 75, ಯೂಸೂಫ್ ಪಠಾಣ್ 15, ರಾಬಿನ್ ಉತ್ತಪ್ಪ 8, ಯುವರಾಜ್ ಸಿಂಗ್ 14, ಎಂಎಸ್ ಧೋನಿ 4, ರೋಹಿತ್ ಶರ್ಮಾ 30, ಇರ್ಫಾನ್ ಪಠಾಣ್ 3 ರನ್‌ ಸೇರಿಸಿದ್ದರು.

ಟೀಮ್ ಇಂಡಿಯಾ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಪಾಕಿಸ್ತಾನ, ಇಮ್ರಾನ್ ನಝಿರ್ 33, ಯೂನಿಸ್ ಖಾನ್ 24, ಮಿಸ್ಬಾ ಉಲ್ ಹಕ್ 43, ರನ್‌ನೊಂದಿಗೆ 19.3ನೇ ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 152 ರನ್ ಬಾರಿಸಿ ಶರಣಾಗಿತ್ತು. ಧೋನಿ ಅಂದಿನಿಂದ ಹೆಚ್ಚು ಜನಪ್ರಿಯರಾಗತೊಡಗಿದ್ದರು.

ಪಾಕ್ ಇನ್ನಿಂಗ್ಸ್‌ನಲ್ಲಿ ಭಾರತದ ಆರ್‌ಪಿ ಸಿಂಗ್ 3, ಎಸ್‌ ಶ್ರೀಶಾಂತ್ 1, ಜೋಗೀಂದರ್ ಸಿಂಗ್ 2, ಇರ್ಫಾನ್ ಪಠಾಣ್ 3 ವಿಕೆಟ್ ಪಡೆದು ಎದುರಾಳಿಯನ್ನು ಕಾಡಿದ್ದರು. ಹೀಗೆ ಟಿ-20 ವಿಶ್ವಕಪ್ ಚೊಚ್ಚಲ ಟೂರ್ನಿಯಲ್ಲೇ ಭಾರತ ಚಾಂಪಿಯನ್‌ ಆಗಿ ವಿಶ್ವದಗಲ ಮಿನುಗಿತ್ತು. ಆವತ್ತಿನ ಆ ಅಪರೂಪದ ದಿನವನ್ನು ಸ್ಮರಿಸಿ ಐಸಿಸಿ ಹಾಗೂ ಬಿಸಿಸಿಐ ಇಂದು ಟ್ವೀಟ್ ಮಾಡಿದೆ.

ಸದ್ಯ ಏಳನೇ ಆವೃತ್ತಿಯ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. 2016ರ ಬಳಿಕ ನಡೆಯುತ್ತಿರುವ ಮೊದಲ ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್ ಟೂರ್ನಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ ಮತ್ತು ಒಮಾನ್‌ನ ಜಂಟಿ ಆತಿಥ್ಯದಲ್ಲಿ ಅಕ್ಟೋಬರ್‌ 17ರಿಂದ ನವೆಂಬರ್‌ 15ರವರೆಗೆ ನಡೆಯಲಿದೆ.

Today IPL Match: ಇಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ತಂಡಕ್ಕೇ ಗೆಲುವು: ಹೇಗೆ ಅಂತೀರಾ?, ಇಲ್ಲಿದೆ ನೋಡಿ

RCB vs CSK Playing11: ಸಿಎಸ್​ಕೆ ವಿರುದ್ಧ ಗೆಲ್ಲಲು ಕೊಹ್ಲಿ ಮಾಸ್ಟರ್ ಪ್ಲ್ಯಾನ್: ಆರ್​ಸಿಬಿಯಲ್ಲಿ 2 ಬದಲಾವಣೆ ಖಚಿತ

(On This Day in 2007 MS Dhonis young Team India beat Pakistan by 5 runs to win Inaugural T20 World Cup)

Published On - 11:16 am, Fri, 24 September 21