AUS vs IND: ಸ್ಮೃತಿ ಮಂಧನ ಸ್ಫೋಟಕ ಅರ್ಧಶತಕ; ಆಸ್ಟ್ರೇಲಿಯಾಕ್ಕೆ 275 ರನ್ ಗುರಿ ನೀಡಿದ ಭಾರತ ವನಿತೆಯರ ತಂಡ

AUS vs IND: ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ 94 ಎಸೆತಗಳನ್ನು ಎದುರಿಸಿ 86 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಸೇರಿದ್ದವು. ಅದೇ ಸಮಯದಲ್ಲಿ, ರಿಚಾ ಘೋಷ್ 50 ಎಸೆತಗಳಲ್ಲಿ 44 ರನ್ ಗಳಿಸಿದರು, ಇದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು.

AUS vs IND: ಸ್ಮೃತಿ ಮಂಧನ ಸ್ಫೋಟಕ ಅರ್ಧಶತಕ; ಆಸ್ಟ್ರೇಲಿಯಾಕ್ಕೆ 275 ರನ್ ಗುರಿ ನೀಡಿದ ಭಾರತ ವನಿತೆಯರ ತಂಡ
ಸ್ಮೃತಿ ಮಂಧನ
Follow us
TV9 Web
| Updated By: ಪೃಥ್ವಿಶಂಕರ

Updated on:Sep 24, 2021 | 3:40 PM

ಭಾರತದ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಅಲ್ಲಿ ಏಕದಿನ ಸರಣಿ ಆಡುತ್ತಿದೆ. ಮಿಥಾಲಿ ರಾಜ್ & ತಂಡ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿದೆ. ಇದರ ಆಧಾರದ ಮೇಲೆ ಆತಿಥೇಯ ಆಸ್ಟ್ರೇಲಿಯಾ ಏಕದಿನ ಪಂದ್ಯಗಳಲ್ಲಿ ಸತತ 25 ನೇ ಗೆಲುವು ದಾಖಲಿಸಿದೆ. ಆದರೆ, ಈಗ ಎರಡು ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಎರಡನೇ ಏಕದಿನ ಪಂದ್ಯದಲ್ಲಿ 50 ಓವರ್​ಗಳಲ್ಲಿ 7 ವಿಕೆಟ್​ಗೆ 274 ರನ್ ಗಳಿಸಿತು. ಭಾರತದ ಅತ್ಯಂತ ಯಶಸ್ವಿ ಬ್ಯಾಟರ್ ಸ್ಮೃತಿ ಮಂಧನ 86 ರನ್​ಗಳ ಸಾಟಿಯಿಲ್ಲದ ಇನ್ನಿಂಗ್ಸ್ ಆಡಿದರು. ಈಗ ದೊಡ್ಡ ಪ್ರಶ್ನೆಯೆಂದರೆ ಆಸ್ಟ್ರೇಲಿಯಾ ಎದುರು 275 ರನ್​ಗಳ ಗುರಿಯನ್ನು ಹೊಂದಿರುವ ಭಾರತ ತಂಡವು ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ಆಸ್ಟ್ರೇಲಿಯಾ ಸತತ 26 ನೇ ಏಕದಿನ ಪಂದ್ಯವನ್ನು ಗೆಲ್ಲುವುದನ್ನು ತಡೆಯಲು ಮಿಥಾಲಿ ರಾಜ್ ತಂಡಕ್ಕೆ ಸಾಧ್ಯವಾಗುತ್ತದೆಯೇ? ಎಂಬುದು.

ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧನ ಮತ್ತು ಶೆಫಾಲಿ ವರ್ಮಾ ಭಾರತಕ್ಕೆ ಇನ್ನಿಂಗ್ಸ್ ಆರಂಭಿಸಿದರು. ಇಬ್ಬರ ನಡುವೆ 74 ರನ್ ಪಾಲುದಾರಿಕೆ ಇತ್ತು. ಶೆಫಾಲಿ 22 ರನ್ ಗಳಿಸಿದ ನಂತರ ಔಟಾದರು. ಆದರೆ ಮಂಧನ ಒಂದು ತುದಿಯಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಮಿಥಾಲಿಯ ಬ್ಯಾಟ್ ಎರಡನೇ ಏಕದಿನ ಪಂದ್ಯದಲ್ಲಿ ಮೌನವಾಗಿತ್ತು. ಅವರು ಗಳಿಸಿದ್ದು ಕೇವಲ 8 ರನ್. ಆದರೆ, ಇದಾದ ನಂತರ ಮಂಧಾನಾ ಸ್ಫೋಟಕ ಸ್ವಭಾವದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಚಾ ಘೋಷ್ ಜೊತೆಗೂಡಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಗೆ 76 ರನ್ ಸೇರಿಸಿದರು. ಈ ಪಾಲುದಾರಿಕೆ ಸ್ಮೃತಿಯ ವಿಕೆಟ್ ಜೊತೆ ಮುರಿಯಿತು.

ಸ್ಮೃತಿ 86 ರನ್ ಗಳಿಸಿದರು ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ 94 ಎಸೆತಗಳನ್ನು ಎದುರಿಸಿ 86 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಸೇರಿದ್ದವು. ಅದೇ ಸಮಯದಲ್ಲಿ, ರಿಚಾ ಘೋಷ್ 50 ಎಸೆತಗಳಲ್ಲಿ 44 ರನ್ ಗಳಿಸಿದರು, ಇದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು. ಈ ಇಬ್ಬರನ್ನು ಹೊರತುಪಡಿಸಿ, ಕೆಳ ಕ್ರಮಾಂಕದ ಬ್ಯಾಟರ್​ಗಳಲ್ಲಿ, ಪೂಜಾ ವಸ್ತ್ರಕರ್ 37 ಎಸೆತಗಳಲ್ಲಿ 29 ರನ್ ಗಳಿಸಿದರು. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಬೌಲರ್ ತಹಿಲಾ ಮೆಕ್‌ಗ್ರಾತ್, ಅವರು 3 ವಿಕೆಟ್ ಪಡೆದರು. ಅವರಲ್ಲದೆ, ಸೋಫಿ 2 ವಿಕೆಟ್ ಪಡೆದರು.

ಮಿಥಾಲಿ ಮತ್ತು ಕಂಪನಿಗೆ ಗೆಲುವು ಅತ್ಯಗತ್ಯ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ಇದರಲ್ಲಿ ಇದು ಎರಡನೇ ಪಂದ್ಯವಾಗಿದೆ. ಮೊದಲ ಏಕದಿನ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದ ನಂತರ, ಆತಿಥೇಯ ಆಸ್ಟ್ರೇಲಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈಗ ಅಂತಹ ಪರಿಸ್ಥಿತಿಯಲ್ಲಿ, ಅವರು ಎರಡನೇ ಏಕದಿನ ಪಂದ್ಯವನ್ನು ಗೆದ್ದರೆ, ನಂತರ ಅವರು ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸುತ್ತಾರೆ. ಇದು ಮಾತ್ರವಲ್ಲ, ಏಕದಿನ ಪಂದ್ಯಗಳಲ್ಲಿ ಅವರ ಸತತ ಗೆಲುವಿನ ಸರಣಿಯು ಹಾಗೆಯೇ ಉಳಿಯುತ್ತದೆ. ಈ ಎರಡೂ ರಂಗಗಳಲ್ಲಿ ಆಸ್ಟ್ರೇಲಿಯಾವನ್ನು ನಿಲ್ಲಿಸಲು ಮಿಥಾಲಿ ರಾಜ್ & ತಂಡ ಇಂದು ಗೆಲ್ಲಬೇಕು.

ಇದನ್ನೂ ಓದಿ:The Hundred: 7 ಬೌಂಡರಿ, 3 ಸಿಕ್ಸರ್‌, 78 ರನ್.. ಆಂಗ್ಲರ ನಾಡಲ್ಲಿ ಸ್ಮೃತಿ ಮಂಧನ ಅಬ್ಬರ; ಫೈನಲ್​ಗೇರಿದ ಸದರ್ನ್ ಬ್ರೇವ್

Published On - 3:39 pm, Fri, 24 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್