ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯಕವಾಗಿ ಸೋತಿದ್ದ ಪಾಕಿಸ್ತಾನ ತಂಡ ಇಂದು ಎರಡನೇ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು (Afghanistan) ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಪಾಕ್ ಪಡೆ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶ್ವಿಯಾಗಿದೆ. ಬಹಳ ದಿನಗಳಿಂದ ತಂಡದ ಹೊರಗಿದ್ದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ (Shaheen Shah Afridi) ಈ ಪಂದ್ಯದೊಂದಿಗೆ ಮತ್ತೆ ತಂಡಕ್ಕೆ ಮರಳಿದ್ದಾರೆ. ಇದರೊಂದಿಗೆ ಮೊದಲ ಪಂದ್ಯದಲ್ಲಿಯೇ ತನ್ನ ಪರಾಕ್ರಮ ತೊರಿರುವ ಈ ಎಡಗೈ ಬೌಲರ್ 4 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆದರು. ಹಾಗೆಯೇ ಆರಂಭದಿಂದಲೂ ಕರಾರುವಕ್ಕಾಗಿ ದಾಳಿ ಮಾಡಿದ ಅಫ್ರಿದಿ, ತನ್ನ ಘಾತುಕ ಯಾರ್ಕರ್ನಿಂದ ಎದುರಾಳಿ ತಂಡದ ವಿಕೆಟ್ ಕೀಪರ್ನನ್ನು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ.
ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡುವ ಮೂಲಕ ಪಾಕಿಸ್ತಾನ ತಂಡ ಅದ್ಭುತ ಆರಂಭ ಮಾಡಿತು. ಈ ವೇಳೆ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದ ಶಾಹೀನ್ ಅಫ್ರಿದಿ ತಮ್ಮ ಐದನೇ ಎಸೆತದಲ್ಲಿ ಪ್ರಚಂಡ ಯಾರ್ಕರ್ ಎಸೆದರು. ಇದು ಎದುರಾಳಿ ಆರಂಭಿಕ ರಹಮಾನುಲ್ಲಾ ಎದುರಿಸಿದ ಮೊದಲ ಎಸೆತವಾಗಿದ್ದು, ಅಫ್ರಿದಿ ಎಸೆದ ಯಾರ್ಕರ್ ಚೆಂಡು ರಹಮಾನುಲ್ಲಾ ಅವರ ಶೂಗೆ ತಗುಲಿತು. ಪಾಕ್ ತಂಡ ಕೂಡ ಬ್ಯಾಟರ್ ವಿಕೆಟ್ಗಾಗಿ ಎಲ್ಬಿಡಬ್ಲ್ಯು ಮನವಿ ಮಾಡಿತು. ಇದಕ್ಕೆ ಅಂಪೈರ್ ಕೂಡ ಅಸ್ತು ಎಂದರು. ಆದರೆ, ಇದಾದ ಬಳಿಕ ಕಾಣಿಸಿಕೊಂಡ ದೃಶ್ಯ ನಿಜಕ್ಕೂ ನೋವಿನ ಸಂಗತಿಯಾಗಿದೆ.
ಇದನ್ನೂ ಓದಿ: ಜಾಕೆಟ್‌ನಲ್ಲಿ ಇಯರ್‌ಬಡ್ಸ್ ಪತ್ತೆ; ವಿಶ್ವ ಚಾಂಪಿಯನ್‌ಶಿಪ್‌ನಿಂದ ಭಾರತದ ಚೆಸ್ ಪಟು ಔಟ್..!
ರಹಮಾನುಲ್ಲಾ ಆಸ್ಪತ್ರೆಗೆ
ಶಾಹೀನ್ ಅಫ್ರಿದಿ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಜ್ ಎಲ್ಬಿಡಬ್ಲ್ಯು ಔಟಾದರು. ಆದರೆ ಅಫ್ರಿದಿ ಎಸೆದ ಪ್ರಚಂಡ ಯಾರ್ಕರ್, ಅವರು ಇಂಜುರಿಗೊಳ್ಳುವಂತೆ ಮಾಡಿತು. ಕಾಲಿಗೆ ಬಾಲ್ ಬಿದ್ದ ಕೂಡಲೇ ಗುರ್ಬಾಜ್, ತಮ್ಮ ಕಾಲನ್ನು ನೆಲಕ್ಕುರಲಾಗದೆ ಪಿಚ್‌ನಲ್ಲಿ ನೋವಿನಿಂದ ನರಳಲಾರಂಭಿಸಿದರು. ತಕ್ಷಣವೇ ಮೈದನಾಕ್ಕೆ ಬಂದ ಫಿಸಿಯೋ ಅವರನ್ನು ಅಲ್ಲಿಂದ ಕರೆದೊಯ್ದರು. ಈ ವೇಳೆ ಗುರ್ಬಾಜ್ಗೆ ತಾನಾಗಿ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಮತ್ತೊಬ್ಬ ಆಟಗಾರ ಅವರನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ವರದಿಗಳ ಪ್ರಕಾರ, ಗುರ್ಬಾಜ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
— Guess Karo (@KuchNahiUkhada) October 19, 2022
ಇದರ ನಂತರ ಶಾಹೀನ್ ಅಫ್ರಿದಿ ಅಫ್ಘಾನಿಸ್ತಾನದ ಎರಡನೇ ಆರಂಭಿಕ ಆಟಗಾರ ಹಜರತುಲ್ಲಾ ಝಜೈ ಅವರನ್ನು ಬೌಲ್ಡ್ ಮಾಡಿದರು. ಈ ಪಂದ್ಯದಲ್ಲಿ ಅಫ್ರಿದಿ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಪಡೆದರು. ಆದಾಗ್ಯೂ, ಪಾಕಿಸ್ತಾನದ ಇತರ ಬೌಲರ್‌ಗಳು ತುಂಬಾ ದುಬಾರಿಯಾದರು. ಹಾರಿಸ್ ರೌಫ್ ಎರಡು ವಿಕೆಟ್ ಪಡೆದರಾದರೂ ಅವರು 4 ಓವರ್‌ಗಳಲ್ಲಿ 34 ರನ್ ಬಿಟ್ಟುಕೊಟ್ಟರು. ನಸೀಮ್ ಶಾ ಕೂಡ 38 ರನ್ ನೀಡಿದರು. ಮೊಹಮ್ಮದ್ ವಾಸಿಂ ಜೂನಿಯರ್ 27 ರನ್ ನೀಡಿದರೆ, ಶಾದಾಬ್ ಮತ್ತು ನವಾಜ್ ರನ್‌ಗಳಿಗೆ ಕೊಂಚ ಕಡಿವಾಣ ಹಾಕಿದರು.
ಅಫ್ಘಾನಿಸ್ತಾನದ ಕಳಪೆ ಆರಂಭ
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಅಫ್ರಿದಿ ದಾಳಿಗೆ ಸಿಲುಕಿ ತನ್ನ ಮೊದಲ 3 ವಿಕೆಟ್‌ಗಳನ್ನು ಕೇವಲ 19 ರನ್‌ಗಳಿಗೆ ಕಳೆದುಕೊಂಡಿತು. ಆದರೆ ಈ ವಿಕೆಟ್ಗಳ ನಂತರ ಬಂದ ಇಬ್ರಾಹಿಂ ಜದ್ರಾನ್ ತಂಡದ ಇನ್ನಿಂಗ್ಸ್ ನಿಭಾಯಿಸಿ 35 ರನ್‌ಗಳ ಕೊಡುಗೆ ನೀಡಿದರು. ನಾಯಕ ಮೊಹಮ್ಮದ್ ನಬಿ ಕೂಡ ಔಟಾಗದೆ 51 ರನ್‌ಗಳ ಇನ್ನಿಂಗ್ಸ್ ಆಡಿದರು. ಉಸ್ಮಾನ್ ಘನಿ ಕೂಡ ಅಜೇಯ 32 ರನ್ ಗಳಿಸಿ ಅಫ್ಘಾನಿಸ್ತಾನ ತಂಡವನ್ನು 154 ರನ್‌ಗಳಿಗೆ ಕೊಂಡೊಯ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:56 am, Wed, 19 October 22