ಟಿ20 ವಿಶ್ವಕಪ್ನಲ್ಲೂ (T20 World Cup 2022) ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಅಮೋಘ ಫಾರ್ಮ್ ಮುಂದುವರಿದಿದೆ. ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಬಿರುಸಿನ ಅರ್ಧಶತಕ ದಾಖಲಿಸಿದ್ದಾರೆ. 33 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಯಾದವ್ 6 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 50 ರನ್ ಬಾರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ಹಾಗೂ ಸೂರ್ಯಕುಮಾರ್ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ 186 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಉಪನಾಯಕ ಕೆಎಲ್ ರಾಹುಲ್ 33 ಎಸೆತಗಳಲ್ಲಿ 57 ರನ್‌ಗಳ ಇನಿಂಗ್ಸ್ ಆಡಿದರೆ, ಅವರ ಜೊತೆಗೆ ಸೂರ್ಯಕುಮಾರ್ ಕೂಡ ಅರ್ಧಶತಕ ಗಳಿಸಿದರು. ಕಾರ್ತಿಕ್ ಮತ್ತು ಕೊಹ್ಲಿ ಕೂಡ ಉಪಯುಕ್ತ ಇನ್ನಿಂಗ್ಸ್ ಆಡಿದರು.
ಸೂರ್ಯ ಅರ್ಧಶತಕ
9ನೇ ಓವರ್‌ನಲ್ಲಿ ಕ್ರೀಸ್‌ಗೆ ಕಾಲಿಟ್ಟ ಸೂರ್ಯಕುಮಾರ್ ಯಾದವ್, ಕ್ರೀಸ್‌ಗೆ ಬಂದ ತಕ್ಷಣವೇ ಬಿಗ್ ಶಾಟ್ಸ್ ಆಡಲು ಆರಂಭಿಸಿದರು. ಆಸೀಸ್ ಪಾಳೆಯದ ಸ್ಪಿನ್ ಹಾಗೂ ವೇಗದ ಬೌಲಿಂಗ್ ಎರಡನ್ನು ಸಮನಾಗಿ ದಂಡಿಸಿದ ಸೂರ್ಯ, ಈ ಬಾರಿ ಸ್ವೀಪ್ ಮಾತ್ರವಲ್ಲದೆ ರಿವರ್ಸ್ ಸ್ವೀಪ್ನಿಂದಲೂ ಬೌಂಡರಿ ಗಳಿಸಿದರು. ಆದರೆ, 19ನೇ ಓವರ್‌ನಲ್ಲಿ ಸಂಭವಿಸಿದ ಘಟನೆಯೊಂದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ವಾಸ್ತವವಾಗಿ, ಮಿಚೆಲ್ ಸ್ಟಾರ್ಕ್ 19 ನೇ ಓವರ್‌ನಲ್ಲಿ ಬೌನ್ಸರ್ ಬೌಲ್ ಮಾಡಿದರು, ಅದು ಸೂರ್ಯಕುಮಾರ್ ಅವರ ಹೆಲ್ಮೆಟ್‌ಗೆ ಬಿತ್ತು. ಇದಾದ ನಂತರ ಮೈದಾನಕ್ಕೆ ಬಂದ ಫಿಸಿಯೋ ಸೂರ್ಯಕುಮಾರ್ ಅವರನ್ನು ಪರೀಕ್ಷಿಸಿ, ಅಭಿಮಾನಿಗಳ ಆತಂಕಕ್ಕೆ ತೆರೆ ಎಳೆದರು. ಆ ಬಳಿಕ 20ನೇ ಓವರ್‌ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಅರ್ಧಶತಕ ಪೂರ್ಣಗೊಳಿಸಿದ ಸೂರ್ಯ, ನಂತರದ ಎಸೆತದಲ್ಲಿ ಔಟಾದರು.
— Charvi Jain (@charvij21) October 17, 2022
ಸೂರ್ಯನ ಬಗ್ಗೆ ಆಸೀಸ್ ವೇಗಿಯ ಕಾಮೆಂಟ್
ಈ ಅಭ್ಯಾಸ ಪಂದ್ಯದಲ್ಲಿ ಆಸೀಸ್ ಪರ 30 ರನ್ ನೀಡಿ 4 ವಿಕೆಟ್ ಕಬಳಿಸಿದ ಕೇನ್ ರಿಚರ್ಡ್ಸನ್, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ದೊಡ್ಡ ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಸೂರ್ಯಕುಮಾರ್ ಯಾದವ್ ವಿಶ್ವದ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ ಆದರೆ ಈ ಪಂದ್ಯದಲ್ಲಿ ಅವರಿಗೆ ಚೆಂಡುಗಳನ್ನು ಸರಿಯಾಗಿ ಮಿಡಲ್ ಮಾಡಲು ಸಾಧ್ಯವಾಗಲಿಲ್ಲ. ಬಾಲನ್ನು ಮಿಡಲ್ ಮಾಡಲು ಸೂರ್ಯ ಕಷ್ಟಪಟ್ಟಿದ್ದನ್ನು ಇದೆ ಮೊದಲ ಬಾರಿಗೆ ನಾನು ನೋಡಿದ್ದು ಎಂದು ರಿಚರ್ಡ್ಸನ್ ಹೇಳಿದ್ದಾರೆ. ಅಂದಹಾಗೆ, ಅಂತಿಮವಾಗಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್ ಅವರನ್ನು ಇದೇ ರಿಚರ್ಡ್ಸನ್ ಪೆವಿಲಿಯನ್ಗಟ್ಟಿದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಹೊರತಾಗಿ ಕೆಎಲ್ ರಾಹುಲ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಪವರ್‌ಪ್ಲೇಯಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ರಾಹುಲ್, ಟೀಂ ಇಂಡಿಯಾಗೆ ಅದ್ಭುತ ಆರಂಭ ನೀಡಿದರು. ರಾಹುಲ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಾಹುಲ್, 3 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Mon, 17 October 22