T20 World Cup 2024: ಅಪರೂಪದ ಘಟನೆ; ಒಂದು ಪಂದ್ಯದಲ್ಲಿ ಕಣಕ್ಕಿಳಿದ 10 ದೇಶಗಳ ಆಟಗಾರರು..!
T20 World Cup 2024: ಜೂನ್ 2 ರಿಂದ ಅಂದರೆ ಇಂದಿನಿಂದ 9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಮುಖಾಮುಖಿಯಾಗಿದ್ದವು. ಈ ಪಂದ್ಯದ ಅಚ್ಚರಿ ಸಂಗತಿಯೆಂದರೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ನಲ್ಲಿ 10 ವಿವಿಧ ದೇಶಗಳ ಆಟಗಾರರು ಪ್ರತಿನಿಧಿಸಿದ್ದರು.
ಜೂನ್ 2 ರಿಂದ ಅಂದರೆ ಇಂದಿನಿಂದ 9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ (T20 World Cup 2024) ಅದ್ಧೂರಿ ಚಾಲನೆ ಸಿಕ್ಕಿದೆ. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ (USA vs Canada) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆನಡಾ ನೀಡಿದ 195 ರನ್ಗಳ ಗುರಿಯನ್ನು ಅಮೆರಿಕ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಈ ಮೂಲಕ ಆತಿಥೇಯರು ಲೀಗ್ನಲ್ಲಿ ಗೆಲುವಿನ ಶುಭಾರಂಭ ಮಾಡಿದರು. ಇದು ಪಂದ್ಯದ ವಿಚಾರವಾದರೆ, ಇದೇ ಪಂದ್ಯದಲ್ಲಿ ಇನ್ನೊಂದು ಅಚ್ಚರಿಯ ಸಂಗತಿಯೂ ನಡೆಯಿತು. ಅದೆನೆಂದರೆ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟು 10 ವಿವಿಧ ದೇಶಗಳ ಆಟಗಾರರು ಕಣಕ್ಕಿಳಿದಿದ್ದರು.
ಉಭಯ ತಂಡಗಳಲ್ಲಿ 10 ದೇಶಗಳ ಆಟಗಾರರು
ಅಮೆರಿಕ ಮತ್ತು ಕೆನಡಾ ನಡುವೆ ನಡೆದ ಈ ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ನಲ್ಲಿ 10 ವಿವಿಧ ದೇಶಗಳ ಆಟಗಾರರು ಸ್ಥಾನ ಪಡೆದಿದ್ದರು. ಅಮೆರಿಕ ತಂಡದ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆದಿದ್ದ ಆಟಗಾರರು 5 ವಿವಿಧ ದೇಶಗಳಲ್ಲಿ ಜನಿಸಿದವರಾಗಿದ್ದಾರೆ. ಈ 11 ಆಟಗಾರರಲ್ಲಿ ತಲಾ 3 ಆಟಗಾರರು ಅಮೆರಿಕ ಮತ್ತು ಭಾರತ ಮೂಲದವರಾಗಿದ್ದರೆ, ದಕ್ಷಿಣ ಆಫ್ರಿಕಾ ಮೂಲದ ಇಬ್ಬರು, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಕೆನಡಾ ಮೂಲದ ತಲಾ ಒಬ್ಬ ಆಟಗಾರರು ಸ್ಥಾನ ಪಡೆದಿದ್ದರು. ಅಂದರೆ ಈ ತಂಡವನ್ನು 6 ದೇಶಗಳ ಆಟಗಾರರು ಪ್ರತಿನಿಧಿಸಿದ್ದರು.
T20 World Cup : ಓವರ್‌ನಲ್ಲಿ 10 ಕ್ಕಿಂತ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಬೌಲರ್‌ಗಳಿವರು
ಕೆನಡಾ ತಂಡದಲ್ಲೂ ಇದೇ ಪರಿಸ್ಥಿತಿ ಇತ್ತು. ಈ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನ ಮೂಲದ 4 ಆಟಗಾರರು ಸ್ಥಾನ ಪಡೆದಿದ್ದರೆ, ಗಯಾನಾ, ಬಾರ್ಬಡೋಸ್, ಜಮೈಕಾ ಮತ್ತು ಕುವೈತ್‌ನ ತಲಾ ಒಬ್ಬ ಆಟಗಾರ ಕೆನಡಾ ಪರ ಆಡಿದ್ದರು. ಅಂದರೆ ಈ ತಂಡವನ್ನು 6 ದೇಶಗಳ ಆಟಗಾರರೂ ಪ್ರತಿನಿಧಿಸಿದ್ದರು. ಈ ಮೂಲಕ 10 ದೇಶಗಳ ಆಟಗಾರರು ಟಿ20 ವಿಶ್ವಕಪ್ 2024ರ ಮೊದಲ ಪಂದ್ಯವನ್ನು ಆಡಿದ್ದಾರೆ.
10 ವರ್ಷಗಳ ದಾಖಲೆ ಮುರಿದ ಕೆನಡಾ
ಇದೇ ಮೊದಲ ಬಾರಿಗೆ ಕೆನಡಾ ಮತ್ತು ಅಮೆರಿಕ ಎರಡೂ ತಂಡಗಳು ಟಿ20 ವಿಶ್ವಕಪ್ ಆಡುತ್ತಿವೆ. ಚೊಚ್ಚಲ ಪಂದ್ಯದಲ್ಲಿ ಕೆನಡಾವನ್ನು ಅಮೆರಿಕ 7 ವಿಕೆಟ್‌ಗಳಿಂದ ಸೋಲಿಸಿ ಹೊಸ ದಾಖಲೆಯನ್ನೂ ನಿರ್ಮಿಸಿದೆ. ಗೆಲುವಿಗೆ 195 ರನ್ ಗುರಿ ಪಡೆದ ಅಮೆರಿಕ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಈ ಮೂಲಕ ಇದೇ ಮೊದಲ ಬಾರಿಗೆ ಇಷ್ಟು ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಾಖಲೆಯನ್ನು ಅಮೆರಿಕ ಬರೆಯಿತು. ಮತ್ತೊಂದೆಡೆ, ಅಸೋಸಿಯೇಟ್ ರಾಷ್ಟ್ರವಾಗಿ ಆಡುತ್ತಿರುವ ಕೆನಡಾ, ನೆದರ್ಲೆಂಡ್ಸ್‌ನ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆನಡಾ 194 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಈ ಟೂರ್ನಿಯಲ್ಲಿ ಯಾವುದೇ ಸಹವರ್ತಿ ರಾಷ್ಟ್ರ ಕಲೆಹಾಕಿದ ಅತ್ಯಧಿಕ ಸ್ಕೋರ್ ಆಗಿದೆ. 2014ರಲ್ಲಿ ನೆದರ್ಲೆಂಡ್ 193 ರನ್ ಗಳಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Sun, 2 June 24