T20 World Cup 2024: ಅಭಿಮಾನಿಗಳಿಗೆ ರಸದೌತಣ; ಜೂ.15 ರಂದು ನಡೆಯಲ್ಲಿವೆ 3 ಪಂದ್ಯಗಳು
T20 World Cup 2024: 2024ರ ಟಿ20 ವಿಶ್ವಕಪ್‌ನಲ್ಲಿ ಅರ್ಧಪ್ರಯಾಣ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಲೀಗ್ ಹಂತದಲ್ಲಿ ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇಷ್ಟು ದಿನ ಟಿ20 ವಿಶ್ವಕಪ್‌ನಲ್ಲಿ ದಿನವೊಂದಕ್ಕೆ 1 ಅಥವಾ 2 ಪಂದ್ಯಗಳು ಹೆಚ್ಚಾಗಿ ನಡೆದಿದ್ದವು. ಆದರೆ ನಾಳೆ ಅಂದರೆ ಜೂನ್ 15 ರಂದು ಬರೋಬ್ಬರಿ 3 ಪಂದಗಳು ನಡೆಯಲ್ಲಿವೆ.
1 / 7
2024ರ ಟಿ20 ವಿಶ್ವಕಪ್‌ನಲ್ಲಿ ಅರ್ಧಪ್ರಯಾಣ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಲೀಗ್ ಹಂತದಲ್ಲಿ ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇಷ್ಟು ದಿನ ದಿನವೊಂದಕ್ಕೆ 1 ಅಥವಾ 2 ಪಂದ್ಯಗಳು ಹೆಚ್ಚಾಗಿ ನಡೆದಿದ್ದವು. ಆದರೆ ನಾಳೆ ಅಂದರೆ ಜೂನ್ 15 ರಂದು ಬರೋಬ್ಬರಿ 3 ಪಂದಗಳು ನಡೆಯಲ್ಲಿವೆ.
2 / 7
ನಾಳೆ ನಡೆಯಲ್ಲಿರುವ 3 ಪಂದ್ಯಗಳಲ್ಲಿ ಟೀಂ ಇಂಡಿಯಾದ ಪಂದ್ಯವೂ ಸೇರಿದೆ. ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಟೀಂ ಇಂಡಿಯಾ ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆನಡಾ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಇನ್ನೂ ಎರಡು ಪಂದ್ಯಗಳು ನಡೆಯಲಿವೆ.
3 / 7
ಜೂನ್ 15 ರಂದು ದಿನದ ಮೊದಲ ಪಂದ್ಯ ನೇಪಾಳ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದೆ. ಉಭಯ ತಂಡಗಳು ಶನಿವಾರ ಬೆಳಗ್ಗೆ 5 ಗಂಟೆಗೆ ಕಿಂಗ್‌ಸ್ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಮೊದಲ ಬಾರಿಗೆ ಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
4 / 7
ದಕ್ಷಿಣ ಆಫ್ರಿಕಾ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಎಲ್ಲವನ್ನೂ ಗೆದ್ದಿದೆ. ಈ ಮೂಲಕ ಸೂಪರ್-8ಸುತ್ತಿನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅದೇ ವೇಳೆ ನೇಪಾಳ ತಂಡಕ್ಕೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಹೀಗಾಗಿ ತಂಡ ಸೂಪರ್-8 ರೇಸ್‌ನಿಂದ ಹೊರಗುಳಿದಿದೆ.
5 / 7
ಎರಡನೇ ಪಂದ್ಯ ಅಂದರೆ, ಟಿ20 ವಿಶ್ವಕಪ್‌ನ 32ನೇ ಪಂದ್ಯ ನ್ಯೂಜಿಲೆಂಡ್ ಮತ್ತು ಉಗಾಂಡಾ ನಡುವೆ ನಡೆಯಲಿದೆ. ಈ ಪಂದ್ಯವು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಎರಡೂ ತಂಡಗಳು ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.
6 / 7
ಈ ಎರಡೂ ತಂಡಗಳು ಸೂಪರ್-8 ರೇಸ್‌ನಿಂದ ಹೊರಗುಳಿದಿವೆ. ನ್ಯೂಜಿಲೆಂಡ್ ತನ್ನ ಮೊದಲ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇದುವರೆಗೆ 2 ಪಂದ್ಯಗಳನ್ನು ಆಡಿರುವ ಕಿವೀಸ್ ಪಡೆ, ಎರಡೂ ಪಂದ್ಯಗಳಲ್ಲು ಸೋಲು ಕಂಡಿದೆ. ಇತ್ತ ಉಗಾಂಡಾ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದೆ.
7 / 7
ದಿನದ ಮೂರನೇ ಮತ್ತು ಕೊನೆಯ ಪಂದ್ಯ ಭಾರತ ಮತ್ತು ಕೆನಡಾ ನಡುವೆ ನಡೆಯಲಿದೆ. ಎರಡೂ ತಂಡಗಳು ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನಡೆಯಲಿದೆ. ಟೀಮ್ ಇಂಡಿಯಾ ಈಗಾಗಲೇ ಸೂಪರ್ -8 ಗೆ ಅರ್ಹತೆ ಪಡೆದಿದೆ. ಇತ್ತ ಕೆನಡಾ ತಂಡ ಈಗಾಗಲೇ ಸೂಪರ್-8 ರೇಸ್‌ನಿಂದ ಹೊರಗುಳಿದಿದೆ.